ಭವಿಷ್ಯದಲ್ಲಿ ಮತದಾನದ ಪ್ರಕ್ರಿಯೆ ಮತ್ತಷ್ಟು ಸಲೀಸು: ವೋಟ್ ಹಾಕಬಹುದು ತೋರಿಸಿ ನಿಮ್ಮ ಫೇಸು!

ಭಾರತೀಯ ಚುನಾವಣಾ ಆಯೋಗ ಬೆಂಗಳೂರಿನ ಮತಗಟ್ಟೆಯಲ್ಲಿ ಮುಖ ಗುರುತಿಸುವ ತಂತ್ರಜ್ಞಾನವನ್ನು ಬಳಸಲಿದೆ. ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಈ ತಂತ್ರಜ್ಞಾನ ಬಳಸಲ್ಪಡುತ್ತಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಕೆಲವೇ ಗಂಟೆಗಳು ಬಾಕಿ ಇವೆ. ಅಬ್ಬರದ ಪ್ರಚಾರ, ರೋಡ್‌ ಶೋ ಕೈಗೊಂಡ ಅಭ್ಯರ್ಥಿಗಳು ಈಗ ಮನೆ ಮನೆ ಪ್ರಚಾರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಜನರು ಕೂಡ ಅಭ್ಯರ್ಥಿಗಳು, ಪಕ್ಷಗಳನ್ನು ಅಳೆದು-ತೂಗಿ ಮತ ಹಾಕಲು ಸಿದ್ಧರಾಗುತ್ತಿದ್ದಾರೆ.

ಭಾರತೀಯ ಚುನಾವಣಾ ಆಯೋಗ ಬೆಂಗಳೂರಿನ ಮತಗಟ್ಟೆಯಲ್ಲಿ ಮುಖ ಗುರುತಿಸುವ ತಂತ್ರಜ್ಞಾನವನ್ನು ಬಳಸಲಿದೆ. ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಈ ತಂತ್ರಜ್ಞಾನ ಬಳಸಲ್ಪಡುತ್ತಿದೆ. .

ಫೇಶಿಯಲ್ ರೆಕಗ್ನಿಷನ್ ತಂತ್ರಜ್ಞಾನದೊಂದಿಗೆ ಮತದಾನ ಪ್ರಕ್ರಿಯೆಯು ಭವಿಷ್ಯದಲ್ಲಿ ಹೆಚ್ಚು ಸರಳವಾಗಬಹುದು. ನಗರದಲ್ಲಿ ಇತ್ತೀಚೆಗೆ ನಡೆದ ಹ್ಯಾಕಥಾನ್‌ನಿಂದ ಸೂಚನೆಯನ್ನು ತೆಗೆದುಕೊಂಡು, ಕರ್ನಾಟಕದ ಮುಖ್ಯ ಚುನಾವಣಾ ಕಚೇರಿ (ಸಿಇಒ) ಕಚೇರಿಯು ಚೆನ್ನೈನ ಎಸ್‌ಆರ್‌ಎಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಸಹಾಯದಿಂದ ಈ ಹೊಸ ತಂತ್ರಜ್ಞಾನವನ್ನು ರಚಿಸಿದೆ. ಮತದಾರರು ಉದ್ದನೆಯ ಸರತಿ ಸಾಲುಗಳನ್ನು ಬಿಟ್ಟು ನೇರವಾಗಿ ಮತ ಚಲಾಯಿಸಬಹುದಾಗಿದೆ.

ಮತದಾರರು ಮೊದಲು ಚುನಾವಣೆ ಆಯೋಗದ ‘ಚುನಾವಣಾ’ ಮೊಬೈಲ್‌ ಆ್ಯಪ್ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ನಂತರ ಮತದಾರರ ಫೋಟೊ ಗುರುತಿನ ಚೀಟಿ ನಂಬರ್‌ ಹಾಗೂ ಮೊಬೈಲ್‌ ನಂಬರ್‌ ಹಾಕಬೇಕು. ಇದಾದ ನಂತರ ಮೊಬೈಲ್‌ಗೆ ಬರುವ ಒನ್‌ ಟೈಮ್‌ ಪಾಸ್‌ವರ್ಡ್‌  ನಮೂದಿಸಬೇಕು. ಹಾಗೆಯೇ, ಸೆಲ್ಫಿ ಅಪ್‌ಲೋಡ್‌ ಮಾಡಬೇಕು. ಇದಾದ ನಂತರ ಫೇಷಿಯಲ್‌ ರೆಕಗ್ನಿಷನ್‌ ವೇರಿಫಿಕೇಷನ್‌ ಆಗುತ್ತದೆ.

ಒಂದು ಸಲ ಫೇಷಿಯಲ್‌ ರೆಕಗ್ನಿಷನ್‌ ಪರಿಶೀಲನೆ ಮುಗಿದರೆ, ನೀವು ಮತಗಟ್ಟೆಗಳಿಗೆ ಹೋದಾಗ ಸಾಲಿನಲ್ಲಿ ಕಾಯುವ ಅವಶ್ಯಕತೆ ಇರುವುದಿಲ್ಲ. ಚುನಾವಣೆ ಆಯೋಗದ ಡೇಟಾಬೇಸ್‌ಗೆ ನಿಮ್ಮ ಫೋಟೊ ಮ್ಯಾಚ್‌ ಆದರೆ, ಅಧಿಕಾರಿಗಳಿಗೆ ನೀವು ಯಾವುದೇ ದಾಖಲೆ ನೀಡುವ ಪ್ರಮೇಯವೇ ಇರುವುದಿಲ್ಲ. ಇದರಿಂದ ಜನರ ಸಮಯ ಉಳಿಯುವ ಜತೆಗೆ ನಕಲಿ ಮತದಾನವನ್ನೂ ತಡೆಯಬಹುದು ಎಂದುಸೂರ್ಯ ಸೇನ್ ಮಾಹಿತಿ ನೀಡಿದ್ದಾರೆ.

ಇಂತಹ ತಂತ್ರಜ್ಞಾನವನ್ನು ಬಳಸುವುದರಿಂದ ಆಗುವ ಅನುಕೂಲಗಳನ್ನು ವಿವರಿಸಿದ ಸೇನ್, ಇದು ಸರತಿ ಸಾಲುಗಳನ್ನು ಮತ್ತು ಮತದಾನಕ್ಕಾಗಿ ಕಾಯುವ ಸಮಯವನ್ನು ಕಡಿಮೆ ಮಾಡುತ್ತದೆ. ಮತಗಟ್ಟೆಗಳಲ್ಲಿ ಮಾನವ ಶಕ್ತಿಬಳಕೆ ಕಡಿಮೆಯಗುತ್ತದೆ. ಆದ್ದರಿಂದ ಪ್ರತಿ ಬೂತ್‌ನಲ್ಲಿ ನಾಲ್ವರ ಬದಲಿಗೆ ಮೂರು ಅಥವಾ ಕಡಿಮೆ ಅಧಿಕಾರಿಗಳನ್ನು ಮಾತ್ರ ನಿಯೋಜಿಸಬಹುದು. ಆದಾಗ್ಯೂ, ಅಂತಹ ಡೇಟಾಗೆ ಅಂತ್ಯದಿಂದ ಕೊನೆಯವರೆಗೆ ಭದ್ರತೆ ಇರಬೇಕು ಎಂದು ತಜ್ಞರು ಎಚ್ಚರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com