ಮತದಾನ ಪ್ರಜಾಪ್ರಭುತ್ವದ ಪವಿತ್ರ ಕರ್ತವ್ಯ, ಮತದಾನ ಮಾಡಿ: ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ, ಸುಧಾ ಮೂರ್ತಿ ಕರೆ

ಬೆಳಿಗ್ಗೆ 6 ಗಂಟೆಗೆ ಎದ್ದು ಮತದಾನ ಮಾಡುತ್ತಿದ್ದೇವೆ. ವಯಸ್ಸಾಗಿರುವ ನಮ್ಮನ್ನು ನೋಡಿ ಕಲಿಯಿರಿ. ಮತದಾನ ಮಾಡುವುದು ಪ್ರಜಾಪ್ರಭುತ್ವದ ಪವಿತ್ರ ಕರ್ತವ್ಯ. ಮತಕೇಂದ್ರಕ್ಕೆ ಬಂದು ಮತದಾನ ಮಾಡಿ ಮಾಡಿ ಎಂದು ಯುವ ಮತದಾರರಿಗೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ಅವರು ಕರೆ ನೀಡಿದ್ದಾರೆ.
ಸುಧಾಮೂರ್ತಿ ಹಾಗೂ ನಾರಾಯಣಮೂರ್ತಿ.
ಸುಧಾಮೂರ್ತಿ ಹಾಗೂ ನಾರಾಯಣಮೂರ್ತಿ.

ಬೆಂಗಳೂರು: ಬೆಳಿಗ್ಗೆ 6 ಗಂಟೆಗೆ ಎದ್ದು ಮತದಾನ ಮಾಡುತ್ತಿದ್ದೇವೆ. ವಯಸ್ಸಾಗಿರುವ ನಮ್ಮನ್ನು ನೋಡಿ ಕಲಿಯಿರಿ. ಮತದಾನ ಮಾಡುವುದು ಪ್ರಜಾಪ್ರಭುತ್ವದ ಪವಿತ್ರ ಕರ್ತವ್ಯ. ಮತಕೇಂದ್ರಕ್ಕೆ ಬಂದು ಮತದಾನ ಮಾಡಿ ಮಾಡಿ ಎಂದು ಯುವ ಮತದಾರರಿಗೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ಅವರು ಕರೆ ನೀಡಿದ್ದಾರೆ.

ಜಯನಗರದಲ್ಲಿ ತಮ್ಮ ಮತಹಕ್ಕು ಚಲಾಯಿಸಿದ ಬಳಿಕ ಮಾತನಾಡಿದ ಸುಧಾಮೂರ್ತಿಯವರು, ದಯವಿಟ್ಟು ವಯಸ್ಸಾಗಿರುವ ನಮ್ಮನ್ನು ನೋಡಿ ಕಲಿಯಿರಿ. ನಾವೇ 6 ಗಂಟೆಗೆ ಎದ್ದು ಮತದಾನ ಮಾಡುತ್ತಿದ್ದೇವೆ. ಮತಕೇಂದ್ರಕ್ಕೆ ಬಂದು ಮತದಾನ ಮಾಡಿ. ಮತದಾನ ಮಾಡುವುದು ಪ್ರಜಾಪ್ರಭುತ್ವದ ಪವಿತ್ರ ಕರ್ತವ್ಯ ಎಂದು ಹೇಳಿದರು.

ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿಯವರು ಮಾತನಾಡಿ, ಮೊದಲು, ನಾವು ಮತ ಚಲಾಯಿಸಬೇಕು. ನಂತರ ಇದು ಒಳ್ಳೆಯದು, ಇದು ಒಳ್ಳೆಯದಲ್ಲ ಎಂದು ಹೇಳಬಹುದು. ಆದರೆ, ನಾವು ಮತದಾನ ಮಾಡದಿದ್ದರೆ ಟೀಕೆ ಮಾಡುವ ಹಕ್ಕು ನಮಗಿಲ್ಲ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com