ವೋಟರ್​ ಐಡಿ ಇಲ್ಲವೇ? ಚಿಂತೆ ಬೇಡ, ಈ ದಾಖಲೆಗಳಿಂದಲೂ ಮತದಾನ ಮಾಡಬಹುದು...

ಮತದಾನ ಮಾಡಲು ಹೊರಟಿದ್ದೀರಾ? ವೋಟರ್ ಐಡಿ ಸಿಗುತ್ತಿಲ್ಲವೇ? ಚಿಂತೆ ಬೇಡ...ಮತದಾನ ಮಾಡಲು ವೋಟರ್ ಐಡಿ ಬೇಕೆಂದೇನೂ ಇಲ್ಲ. ಪರ್ಯಾಯವಾಗಿ ಈ 12 ದಾಖಲೆಗಳನ್ನೂ ಕೂಡ ನೀವು ಬಳಕೆ ಮಾಡಬಹುದು.
ಬೆಂಗಳೂರಿನ ವಸಂತನಗರ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಮೊದಲ ಬಾರಿಗೆ ಮತಹಕ್ಕು ಚಲಾಯಿಸಿದ ಯುವತಿಯರು.
ಬೆಂಗಳೂರಿನ ವಸಂತನಗರ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಮೊದಲ ಬಾರಿಗೆ ಮತಹಕ್ಕು ಚಲಾಯಿಸಿದ ಯುವತಿಯರು.

ಬೆಂಗಳೂರು: ಮತದಾನ ಮಾಡಲು ಹೊರಟಿದ್ದೀರಾ? ವೋಟರ್ ಐಡಿ ಸಿಗುತ್ತಿಲ್ಲವೇ? ಚಿಂತೆ ಬೇಡ...ಮತದಾನ ಮಾಡಲು ವೋಟರ್ ಐಡಿ ಬೇಕೆಂದೇನೂ ಇಲ್ಲ. ಪರ್ಯಾಯವಾಗಿ ಈ 12 ದಾಖಲೆಗಳನ್ನೂ ಕೂಡ ನೀವು ಬಳಕೆ ಮಾಡಬಹುದು.

ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ದರೆ, ಈ 12 ದಾಖಲೆಗಳಲ್ಲಿ ಯಾವುದಾದರೂ ಒಂದು ದಾಖಲೆಯನ್ನು ಹಿಡಿದುಕೊಂಡು ಹೋದರೂ, ನೀವು ಮತದಾನ ಮಾಡಬಹುದಾಗಿದೆ.

ಪಾಸ್ಪೋರ್ಟ್
ಚಾಲನಾ ಪರವಾನಗಿ
ಕೇಂದ್ರ/ರಾಜ್ಯ ಸರ್ಕಾರದ ಹಾಗೂ ಅರೆ ಸರ್ಕಾರಿ ಮತ್ತು ಸಾರ್ವಜನಿಕ ಸ್ವಾಮ್ಯದ ಪಿಎಸ್ಯು/ಪಬ್ಲಿಕ್ ಲಿಮಿಟೆಡ್ ಕಂಪನಿಗಳು ತಮ್ಮ ಸಿಬ್ಬಂದಿಗೆ ನೀಡಿರುವ ಫೋಟೋ ಗುರುತಿನ ಚೀಟಿ,
ಬ್ಯಾಂಕ್ / ಪೋಸ್ಟ್ ಆಫೀಸ್ ಫೋಟೋವುಳ್ಳ ಪಾಸ್ ಬುಕ್
ಪಾನ್ ಹೊಂದಿರುವ ಕಾರ್ಡ್
ಎನ್ಪಿಆರ್ ಅಡಿ ಅರ್ಜಿ ನೀಡಿರುವ ಸ್ಮಾರ್ಟ್ ಕಾರ್ಡ್
ಎಂನರೇಗಾ ಜಾಬ್ ಕಾರ್ಡ್
ಕಾರ್ಮಿಕರ ಸಚಿವಾಲಯದ ಯೋಜನೆಯಡಿ ನೀಡಿರುವ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್
ಫೋಟೋವುಳ್ಳ ಪಿಂಚಣಿ ದಾಖಲೆ
ಚುನಾವಣಾ ಆಯೋಗದ ವತಿಯಿಂದ ನೀಡುವ ದೃಢೀಕೃತ ಫೋಟೋ ವೋಟರ್ ಸ್ಲಿಪ್ಸ್, ಸಂಸದರು/ವಿಧಾನಸಭಾ/ವಿಧಾನ ಪರಿಷತ್ತಿನ ಸದಸ್ಯರಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ
ಆಧಾರ್ ಕಾರ್ಡ್ ಇವುಗಳಲ್ಲಿ ಯಾವುದಾದರೂ ಗುರುತಿನ ಚೀಟಿ ಬಳಸಿ ಮತದಾನ ಮಾಡಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com