ಬೆಂಗಳೂರಿನ ಜೆಪಿ ನಗರದಲ್ಲಿನ ಒಣ ತ್ಯಾಜ್ಯ ಸಂಗ್ರಹ ಕೇಂದ್ರದಲ್ಲಿ ಬೆಂಕಿ ಅವಘಡ; 10 ಲಕ್ಷ ರೂ. ನಷ್ಟ

ಜೆ.ಪಿ. ನಗರದಲ್ಲಿ ಶನಿವಾರ ಸಂಜೆ ಒಣ ತ್ಯಾಜ್ಯ ಸಂಗ್ರಹಣೆ (ಡಿಡಬ್ಲ್ಯುಸಿಸಿ) ಕೇಂದ್ರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪೊಲೀಸರು ತನಿಖೆ ಆರಂಭಿಸಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಜೆ.ಪಿ. ನಗರದಲ್ಲಿ ಶನಿವಾರ ಸಂಜೆ ಒಣ ತ್ಯಾಜ್ಯ ಸಂಗ್ರಹಣೆ (ಡಿಡಬ್ಲ್ಯುಸಿಸಿ) ಕೇಂದ್ರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪೊಲೀಸರು ತನಿಖೆ ಆರಂಭಿಸಿದ್ದಾರೆ. 

ಈ ಹಿಂದೆ ತ್ಯಾಜ್ಯ ಸಂಗ್ರಹ ಮಾಡುತ್ತಿದ್ದ ಕುಮುದಾ ಎಂಬುವವರು ನಡೆಸುತ್ತಿದ್ದ ಕೇಂದ್ರದಲ್ಲಿ ಕಸ ವಿಂಗಡಣೆ ಕಾರ್ಯದಲ್ಲಿ 16 ಮಹಿಳೆಯರು ಕೆಲಸ ಮಾಡುತ್ತಿದ್ದರು. ವಾರ್ಡ್ 177ರ ನಿವಾಸಿಗಳ ಪ್ರಕಾರ, ಶನಿವಾರ ಸಂಜೆ 7.15 ರ ಸುಮಾರಿಗೆ ಕೇಂದ್ರದಲ್ಲಿ ಬೆಂಕಿ ಕಾಣಿಸಿಕೊಂಡಿತು ಮತ್ತು 7.45ರ ಹೊತ್ತಿಗೆ ಅದರ ಶೇ 80 ಕ್ಕಿಂತ ಹೆಚ್ಚು ಭಾಗವನ್ನು ಬೆಂಕಿ ಆವರಿಸಿದೆ.

ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದರು. ಆದರೆ ದುರದೃಷ್ಟವಶಾತ್, ಕೇಂದ್ರದಲ್ಲಿದ್ದ ವಸ್ತುಗಳು ಸಂಪೂರ್ಣವಾಗಿ ನಾಶವಾಗಿವೆ. ಕೇಂದ್ರವು ಶಾರ್ಟ್ ಸರ್ಕ್ಯೂಟ್‌ಗೆ ಕಾರಣವಾಗುವ ವಿದ್ಯುತ್ ಅನ್ನು ಹೊಂದಿರಲಿಲ್ಲ. 'ಕೇಂದ್ರವು ಸೌರ ವಿದ್ಯುತ್ ಬಳಸುತ್ತದೆ. ಇದು ಒಣ ತ್ಯಾಜ್ಯವನ್ನು ಮರುಬಳಕೆ ಮಾಡುತ್ತದೆ ಮತ್ತು ಸುಮಾರು ಶೇ 90 ರಷ್ಟು ತ್ಯಾಜ್ಯವನ್ನು ಮರುಬಳಕೆಗಾಗಿ ಕಳುಹಿಸಲಾಗಿದೆ' ಎಂದು ತ್ಯಾಜ್ಯ ಸಂಗ್ರಹಿಸುವವರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಹಸಿರು ದಳದ ಜೀವನೋಪಾಯ ವ್ಯವಸ್ಥಾಪಕ ಬಿಯಾಂಕಾ ಟಿಎನ್ಐಇಗೆ ಹೇಳಿದರು.

ಇಡೀ ವಾರ್ಡ್‌ನ ಒಣ ತ್ಯಾಜ್ಯವು ಈ ಕೇಂದ್ರಕ್ಕೆ ಬರುತ್ತಿತ್ತು, ಇದು ತಿಂಗಳಿಗೆ ಸುಮಾರು 80 ಮೆಟ್ರಿಕ್ ಟನ್ ತೂಕವಿರುತ್ತದೆ ಮತ್ತು ಮಹಿಳೆಯರಿಂದ ಪ್ರತ್ಯೇಕಿಸಲ್ಪಡುತ್ತದೆ. 

ಘಟನೆಯಿಂದ ಕಂಗಾಲಾಗಿರುವ ಕುಮುದಾ, 'ನನ್ನ ಎಲ್ಲಾ ಶ್ರಮ ಬೆಂಕಿಗೆ ಆಹುತಿಯಾಗಿದೆ. ಆದರೆ, ಕೇಂದ್ರವನ್ನು ಮರುನಿರ್ಮಾಣ ಮಾಡಲು ನಾನು ನಿರ್ಧರಿಸಿದ್ದೇನೆ. ಬಿಬಿಎಂಪಿ, ಜೆ.ಪಿ.ನಗರದ ಚುನಾಯಿತ ಪ್ರತಿನಿಧಿಗಳು ಹಾಗೂ 177ನೇ ವಾರ್ಡಿನ ನಾಗರಿಕರ ಬೆಂಬಲ ನನಗೆ ಬೇಕು. ಎಂದಿನಂತೆ ನನ್ನ ಬೆಂಬಲಕ್ಕೆ ನಿಲ್ಲಬೇಕು. ಘಟನೆಯಿಂದ 10 ಲಕ್ಷ ರೂ.ನಷ್ಟವಾಗಿದೆ' ಎಂದು ಹೇಳಿದರು.

ವಿಕೇಂದ್ರೀಕೃತ ತ್ಯಾಜ್ಯ ನಿರ್ವಹಣೆಯು ಪ್ರದೇಶದ ಸ್ವಚ್ಛತೆಗೆ ಮತ್ತು ಸುಸ್ಥಿರತೆಯನ್ನು ಉತ್ತೇಜಿಸಲು ಹೇಗೆ ವರದಾನವಾಗಿದೆ ಎಂಬುದನ್ನು ವೀಕ್ಷಿಸಲು ಮತ್ತು ಕಲಿಯಲು ಈ ಕೇಂದ್ರವು ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು, ನೀತಿ ನಿರೂಪಕರು ಮತ್ತು ನಾಗರಿಕರಿಗೆ ಅಗತ್ಯ ಸ್ಥಳವಾಗಿದೆ. ಕುಮುದಾ ಅವರು ಸ್ವಸಹಾಯ ಸಂಘಗಳಿಂದ ಸಾಲ ಪಡೆದು ಈ ಕೇಂದ್ರವನ್ನು ನಿರ್ಮಿಸಿದ್ದು, ಬೆಂಕಿಯ ನಡುವೆಯೂ ಸಾಲ ಮರುಪಾವತಿ ಮಾಡಬೇಕಾಗಿದೆ.

ಡಿಡಬ್ಲ್ಯುಸಿಸಿ ಮೂಲಸೌಕರ್ಯವನ್ನು ಪುನಃಸ್ಥಾಪಿಸಲು ಮತ್ತು ಒಂದು ವಾರದೊಳಗೆ ಮರುನಿರ್ಮಾಣವನ್ನು ಪ್ರಾರಂಭಿಸಲು ಮತ್ತು ನಗರದ ಎಲ್ಲಾ ಡಿಡಬ್ಲ್ಯುಸಿಸಿಗಳಿಗೆ ಅಗ್ನಿ ವಿಮೆಯನ್ನು ಒದಗಿಸುವಂತೆ ಮತ್ತು 16 ಮಹಿಳೆಯರಿಗೆ ಕನಿಷ್ಠ ಎರಡು ವಾರ ಪರಿಹಾರವನ್ನು ಒದಗಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗೆ ಮನವಿ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com