ತಂಬಾಕು ಮುಕ್ತ ಕೃಷಿ ಭೂಮಿ ಹೊಂದುವ ಗುರಿ: ಆರ್‌ಡಿಪಿಆರ್ ಜೊತೆಗೆ ಕೈಜೋಡಿಸಿ ಕೆಎಸ್‌ಟಿಸಿಸಿ

ರಾಜ್ಯದ ಕೃಷಿ ಭೂಮಿಯನ್ನು ತಂಬಾಕು ಮುಕ್ತ ಭೂಮಿ ಮಾಡುವ ಗುರಿ ಮುಟ್ಟುವ ಉದ್ದೇಶದಿಂದ ಕರ್ನಾಟಕ ರಾಜ್ಯ ತಂಬಾಕು ನಿಯಂತ್ರಣ ಘಟಕವು ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯೊಂದಿಗೆ (ಆರ್‌ಡಿಪಿಆರ್) ಕೈಜೋಡಿಸಲು ಮುಂದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ರಾಜ್ಯದ ಕೃಷಿ ಭೂಮಿಯನ್ನು ತಂಬಾಕು ಮುಕ್ತ ಭೂಮಿ ಮಾಡುವ ಗುರಿ ಮುಟ್ಟುವ ಉದ್ದೇಶದಿಂದ ಕರ್ನಾಟಕ ರಾಜ್ಯ ತಂಬಾಕು ನಿಯಂತ್ರಣ ಘಟಕವು ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯೊಂದಿಗೆ (ಆರ್‌ಡಿಪಿಆರ್) ಕೈಜೋಡಿಸಲು ಮುಂದಾಗಿದೆ.

ಕೃಷಿ ಭೂಮಿಯನ್ನು ತಂಬಾಕು ಮುಕ್ತಗೊಳಿಸಿ, ರೈತರಿಗೆ ವೈವಿಧ್ಯೀಕರಣದ ಬೆಳೆಗಳ ಆಯ್ಕೆಗಳನ್ನು ನೀಡುವ ಸಲುವಾಗಿ ಕೆಎಸ್‌ಟಿಸಿಸಿ, ಆರ್‌ಡಿಪಿಆರ್ ಜೊತೆಗೆ ಕೈಜೋಡಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಮಂಡ್ಯ ಮತ್ತು ರಾಮನಗರ ಜಿಲ್ಲೆಗಳ ಸುಮಾರು 25-30 ಗ್ರಾಮಗಳನ್ನು ತಂಬಾಕು ಮುಕ್ತಗೊಳಿಸಲಾಗಿದ್ದು, ಇದೀಗ ಇತರ ಸರ್ಕಾರಿ ಇಲಾಖೆಗಳ ನೆರವಿನೊಂದಿಗೆ ತಂಬಾಕು ಬೆಳೆಯುವ ಇತರ ಜಿಲ್ಲೆಗಳಾದ ಮೈಸೂರು, ಹಾಸನ, ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಮಡಿಕೇರಿಯಲ್ಲಿಯೂ ಇದೇ ಮಾದರಿಯನ್ನು ಅನುಸರಿಸಲು ನಿರ್ಧರಿಸಲಾಗಿದೆ ಎಂದು  ಕೆಎಸ್‌ಟಿಸಿಸಿ ಯೋಜನಾ ಸಂಯೋಜಕ ಪ್ರಭಾಕರ ಹೇಳಿದ್ದಾರೆ.

ರೈತರಿಗೆ ಸಂಭವನೀಯ ಪರ್ಯಾಯ ಬೆಳೆ ಪರಿಹಾರಗಳನ್ನು ಸೂಚಿಸಲು ತಂಬಾಕು ಬೆಳೆಯುವ ಪ್ರದೇಶಗಳನ್ನು ಪರಿಶೀಲಿಸಲಾಗುತ್ತದೆ. ನಂತರ ತಂಬಾಕು ಉತ್ಪಾದನೆಯ ಮೇಲೆ ಜೀವನಾಧಾರವಾಗಿರುವ ಜನರ ಮೇಲೆ ತಂಬಾಕಿನ ವ್ಯತಿರಿಕ್ತ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳನ್ನು ತಿಳಿಸಲಾಗುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ ಕೂಡ ಕೃಷಿ ಭೂಮಿಯನ್ನು ತಂಬಾಕು ಮುಕ್ತಗೊಳಿಸಬೇಕಿದ್ದು, ಇದಕ್ಕೆ ಪರಿಹಾರವಾಗಿ ಆರ್ಥಿಕವಾಗಿ ಸಮರ್ಥನೀಯ ಪರ್ಯಾಯಗಳನ್ನು ಉತ್ತೇಜಿಸುವ ಅಗತ್ಯವಿದೆ ಎಂದು ಹೇಳಿದೆ ಎಂದು ತಿಳಿಸಿದ್ದಾರೆ.

ತಂಬಾಕು ಮುಕ್ತ ಕರ್ನಾಟಕಕ್ಕಾಗಿ ಒಕ್ಕೂಟದ ಸಂಚಾಲಕ ಎಸ್‌ಜೆ ಚಂದರ್ ಅವರು ಮಾತನಾಡಿ, ಕರ್ನಾಟಕದಲ್ಲಿ ತಂಬಾಕು ಉತ್ಪಾದನೆಯನ್ನು ಕಡಿತಗೊಳಿಸಲು ಇಲಾಖೆಯೊಂದಿಗೆ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಈ ನಿಟ್ಟಿನಲ್ಲಿ ಸರ್ಕಾರ ಕೂಡ ಹಲವು ಕ್ರಮಗಳ ಕೈಗೊಳ್ಳಬೇಕಿದೆ. ಪರಿಣತಿ ಮತ್ತು ಸಂಪನ್ಮೂಲಗಳನ್ನು ವಿಸ್ತರಿಸಬೇಕು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com