ನಗರಸಭೆ ಅಧ್ಯಕ್ಷರು, ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ನಡುವೆ ಪ್ರಸಿದ್ಧ ಹಾಸನಾಂಬ ದೇವಾಲಯದ ಬಾಗಿಲು ಓಪನ್

ನಗರ ಪಾಲಿಕೆಯ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಕೆಲ ಪಾಲಿಕೆ ಸದಸ್ಯರ ಪ್ರತಿಭಟನೆಯ ನಡುವೆ ಗುರುವಾರ ಪ್ರಸಿದ್ಧ ಹಾಸನಾಂಬ ದೇವಾಲಯದ ಬಾಗಿಲು ತೆರೆಯಲಾಯಿತು.
ಹಾಸನಾಂಬ ದೇವಾಲಯ
ಹಾಸನಾಂಬ ದೇವಾಲಯ
Updated on

ಹಾಸನ: ನಗರ ಪಾಲಿಕೆಯ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಕೆಲ ಪಾಲಿಕೆ ಸದಸ್ಯರ ಪ್ರತಿಭಟನೆಯ ನಡುವೆ ಗುರುವಾರ ಪ್ರಸಿದ್ಧ ಹಾಸನಾಂಬ ದೇವಾಲಯದ ಬಾಗಿಲು ತೆರೆಯಲಾಯಿತು.

ಹಾಸನ ನಗರ ಪಾಲಿಕೆ ಅಧ್ಯಕ್ಷ ಮೋಹನ್ ಕುಮಾರ್ ನೇತೃತ್ವದಲ್ಲಿ ನಗರಸಭೆ ಸದಸ್ಯರು ಪಾಸು ಇಲ್ಲದೆ ದೇವಸ್ಥಾನದ ಒಳಗೆ ಬಿಡದ ಜಿಲ್ಲಾಡಳಿತ ಹಾಗೂ ಪೊಲೀಸರ ವಿರುದ್ಧ ಘೋಷಣೆ ಕೂಗಿದರು. ನಗರಸಭೆ ಅಧ್ಯಕ್ಷರು ಕೂಡ ಧರಣಿ ನಡೆಸಿ ಪೊಲೀಸರು ಹಾಗೂ ದೇವಸ್ಥಾನದ ಆಡಳಿತಾಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದರು. ಕೊನೆಗೆ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ ಸಮಾಧಾನಪಡಿಸಿದ ನಂತರ ಪ್ರತಿಭಟನಾಕಾರರು ದೇವಸ್ಥಾನ ಪ್ರವೇಶಿಸಿದರು.

<strong>ನಗರಸಭೆ ಅಧ್ಯಕ್ಷರಿಂದ ಪ್ರತಿಭಟನೆ</strong>
ನಗರಸಭೆ ಅಧ್ಯಕ್ಷರಿಂದ ಪ್ರತಿಭಟನೆ

ವರ್ಷಕ್ಕೊಮ್ಮೆ ತೆರೆದಿರುವ ಹಾಸನಾಂಬ ದೇಗುಲಕ್ಕೆ ರಾಜ್ಯ ಹಾಗೂ ಹೊರರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಪ್ರಧಾನ ಅರ್ಚಕ ನಾಗರಾಜ ಅವರು, ದೇವಸ್ಥಾನದ ಆಡಳಿತಾಧಿಕಾರಿ ಮಾರುತಿ ಅವರ ಅನುಮತಿಯೊಂದಿಗೆ ಮಧ್ಯಾಹ್ನ 12ಗಂಟೆ 28 ನಿಮಿಷದಲ್ಲಿ ಬಾಗಿಲಿಗೆ ಪೂಜೆ ಸಲ್ಲಿಸಿ ಬೀಗ ತೆಗೆದು ದೇವಾಲಯವನ್ನು ತೆರೆಯಲಾಯಿತು. 

ನಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜನ್, ಜಿಲ್ಲಾಧಿಕಾರಿ ಸತ್ಯಭಾಮಾ ಹೆಚ್ಚುವರಿ ಎಸ್ಪಿ ತಮ್ಮಯ್ಯ ತಹಶೀಲ್ದಾರ್ ಶ್ವೇತಾ ಮತ್ತು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಭಾರೀ ಜನದಟ್ಟಣೆಯಿಂದ ದೇವಾಲಯದ ಗರ್ಭಗುಡಿ ಪ್ರವೇಶಿಸಲು ಕಷ್ಟಪಟ್ಟರು. ಸಂಪ್ರದಾಯದಂತೆ ನಂಜರಾಜೇ ಅರಸ್ ದೇವಸ್ಥಾನದ ಮುಂಭಾಗದಲ್ಲಿ ಅಳವಡಿಸಿದ್ದ ಬಾಳೆ ಹಣ್ಣಿನ ಗಿಡವನ್ನು ಕಡಿದ ನಂತರ ದೇವಸ್ಥಾನ ತೆರೆಯಲಾಯಿತು.

ಧಾರ್ಮಿಕ ವಿಧಿವಿಧಾನಗಳನ್ನು ನಿರ್ವಹಿಸಲು ಮತ್ತು  ದೇವಿಯನ್ನು ಸ್ವಚ್ಛಗೊಳಿಸಿ ಹೂವಿನಿಂದ ಅಲಂಕರಿಸಲು ಇಂದು ದೇವಾಲಯ ಓಪನ್ ಆಗಿದೆ.ನಾಳೆಯಿಂದ ನವೆಂಬರ್ 14 ರವರೆಗೆ ವಾರದ ಎಲ್ಲಾ ದಿನ ದೇವಾಲಯದ ಬಾಗಿಲು ಓಪನ್ ಆಗಿರುತ್ತದೆ. ಈ ಸಂದರ್ಭದಲ್ಲಿ ಮಾತನಾಡಿದ  ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ದೀಪ ಬೆಳಗುತ್ತಿದ್ದು, ಕಳೆದ ವರ್ಷ ದೇವಿಗೆ ಹಾಕಿದ ಹೂವುಗಳು ತಾಜಾತನ ತೋರುತ್ತಿವೆ. ಗರ್ಭಗುಡಿ ಪ್ರವೇಶಿಸಿದ ತಕ್ಷಣ ದೀಪ ಬೆಳಗುತ್ತಿರುವುದು ಮತ್ತು ತಾಜಾ ಹೂವುಗಳನ್ನು ನೋಡಿದಾಗ ಆಶ್ಚರ್ಯವಾಯಿತು ಎಂದು ಸಚಿವರು ಹೇಳಿದರು. 

14 ದಿನಗಳ ಹಾಸನಾಂಬ ಉತ್ಸವದ ಯಶಸ್ಸಿಗೆ ಪೊಲೀಸರು, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಸಹಕರಿಸಬೇಕು ಎಂದು ಸಚಿವರು ಕೋರಿದ್ದಾರೆ. ಈ ವರ್ಷ 10 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆಯನ್ನು ಜಿಲ್ಲಾಡಳಿತ ಹೊಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com