ಅರ್ಕಾವತಿ ಬಡಾವಣೆ ಯೋಜನೆ: ರೇರಾ ಕಾಯ್ದೆಯಡಿ ನೋಂದಾಯಿಸಿ; ಬಿಡಿಎಗೆ ನ್ಯಾಯಾಲಯದ ಆದೇಶ

ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ-ಕರ್ನಾಟಕ (RERA-K) ಶುಕ್ರವಾರ ಆದೇಶ ಹೊರಡಿಸಿದ್ದು, ರೇರಾ ಕಾಯ್ದೆ 2016 ರ ಅಡಿಯಲ್ಲಿ ತನ್ನ ಅರ್ಕಾವತಿ ಲೇಔಟ್ ಯೋಜನೆಯನ್ನು ತಕ್ಷಣವೇ ನೋಂದಾಯಿಸಲು ಬಿಡಿಎಗೆ ನಿರ್ದೇಶಿಸಿದೆ.
ಅರ್ಕಾವತಿ ಬಡಾವಣೆ
ಅರ್ಕಾವತಿ ಬಡಾವಣೆ

ಬೆಂಗಳೂರು: ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ-ಕರ್ನಾಟಕ (RERA-K) ಶುಕ್ರವಾರ ಆದೇಶ ಹೊರಡಿಸಿದ್ದು, ರೇರಾ ಕಾಯ್ದೆ 2016 ರ ಅಡಿಯಲ್ಲಿ ತನ್ನ ಅರ್ಕಾವತಿ ಲೇಔಟ್ ಯೋಜನೆಯನ್ನು ತಕ್ಷಣವೇ ನೋಂದಾಯಿಸಲು ಬಿಡಿಎಗೆ ನಿರ್ದೇಶಿಸಿದೆ. ಎರಡು ದಶಕಗಳ ಹಿಂದೆ ಪ್ರಸ್ತಾಪಿಸಲಾದ ಈ ಯೋಜನೆಯಲ್ಲಿ ಮಾಡಲಾದ ಉಲ್ಲಂಘನೆಗಳಿಗಾಗಿ ಬಿಡಿಎ ವಿರುದ್ಧ ದಂಡ ಪ್ರಕ್ರಿಯೆಗಳನ್ನು ಸಹ ಪರಿಗಣಿಸಿದೆ.

ರೇರಾ ಕಾಯ್ದ 31ರ ಸೆಕ್ಷನ್ ಅಡಿ ಬಿಡಿಎ ಆಯುಕ್ತರ ವಿರುದ್ಧ ವಿದ್ಯಾರಣ್ಯಪುರ ನಿವಾಸಿ ಸುತಂತಿರಾಜ್  ಸಲ್ಲಿಸಿದ್ದ ದೂರಿಗೆ ಸಂಬಂಧಿಸಿದಂತೆ ಅಧ್ಯಕ್ಷ ಎಚ್‌ಸಿ ಕಿಶೋರ್ ಚಂದ್ರ ಮತ್ತು ಸದಸ್ಯರಾದ ನೀಲಮಣಿ ಎನ್ ರಾಜು ಮತ್ತು ಜಿ ರವೀಂದ್ರನಾಥ ರೆಡ್ಡಿ ಅವರನ್ನೊಳಗೊಂಡ ರೇರಾ-ಕೆ ಪೀಠವು ಮಧ್ಯಂತರ ಆದೇಶವನ್ನು ನೀಡಿದೆ. 

ಆದೇಶದ ಪ್ರಕಾರ, ಬೆಂಗಳೂರು ಪೂರ್ವದ ಅಮಾನಿ ಬೈರತಿಖಾನೆಯ 18 ನೇ ಬ್ಲಾಕ್‌ನಲ್ಲಿ 19/5, 19/6 ಮತ್ತು 19/7 ಸರ್ವೆ ಸಂಖ್ಯೆಗಳಲ್ಲಿ ಪ್ರವರ್ತಕರು ಯೋಜನೆ ಅಭಿವೃದ್ಧಿಪಡಿಸಿದ್ದಾರೆ. ಯೋಜನೆ ಪೂರ್ಣಗೊಂಡಿಲ್ಲ, ಸೌಕರ್ಯಗಳನ್ನು ಒದಗಿಸಿಲ್ಲ ಮತ್ತು ನಿವೇಶನದ ಭೌತಿಕ ಸ್ವಾಧೀನವನ್ನು ಹಂಚಿಕೆದಾರರಿಗೆ ಹಸ್ತಾಂತರಿಸಲಾಗಿಲ್ಲ ಎಂದು ದೂರುದಾರರು ಹೇಳಿದ್ದಾರೆ. 

ಸೆಪ್ಟೆಂಬರ್ 1, 2022 ರಿಂದ ಅಕ್ಟೋಬರ್ 31, 2023 ರವರೆಗೆ ಒಂಬತ್ತು ವಿಭಿನ್ನ ಸಂದರ್ಭಗಳಲ್ಲಿ ನಡೆದ ಪ್ರಕ್ರಿಯೆಗಳಲ್ಲಿ ನಿರಂತರವಾಗಿ ಗೈರು ಹಾಜರಾಗಿದ್ದಕ್ಕಾಗಿ ಪ್ರತಿವಾದಿ ಬಿಡಿಎ ಕಮೀಷನರ್ ಅವರನ್ನು ತರಾಟೆಗೆ ತೆಗೆದುಕೊಂಡ RERA-K,
ರೇರಾ ಕಾಯ್ದೆಯ ಸೆಕ್ಷನ್ 59 (1) ರ ಅಡಿಯಲ್ಲಿ ದಂಡದ ಪ್ರಕ್ರಿಯೆಗಳನ್ನು ಏಕೆ ಪ್ರಾರಂಭಿಸಬಾರದು ಎಂಬುದಕ್ಕೆ ಮೂರು ವಾರಗಳಲ್ಲಿ ವಿವರಣೆ ಸಲ್ಲಿಸುವಂತೆಯೂ  ಬಿಡಿಎಗೆ ಸೂಚಿಸಿತು ಎಂದು ರೇರಾದ  ಉನ್ನತ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಹೇಳಿದರು. ದಂಡವು ಸಾಕಷ್ಟು ಹೆಚ್ಚಾಗಿರುತ್ತದೆ ಮತ್ತು ಒಟ್ಟಾರೆ ಯೋಜನಾ ವೆಚ್ಚದ ಶೇ. 10 ರಷ್ಟು ಇರಬಹುದು ಎಂದು ಅವರು ತಿಳಿಸಿದರು. 

ಪ್ರತಿಕ್ರಿಯೆಗಾಗಿ ಬಿಡಿಎ ಉನ್ನತ ಅಧಿಕಾರಿಗಳಿಗೆ ಹಲವು ಬಾರಿ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬೆಂಗಳೂರು ಪೂರ್ವ ಮತ್ತು ಯಲಹಂಕ, ದಾಸರಹಳ್ಳಿ, ತಾಯಸಂದ್ರ, ಕೆ ನಾರಾಯಣಪುರ, ಚಳೇಕೆರೆ, ಬೈರತಿಖಾನೆ, ಗೆಡಹಳ್ಳಿ ಮತ್ತು ಪ್ರಚೇನಳ್ಳಿ, ಅಮೃತಹಳ್ಳಿ, ಜಕ್ಕೂರು, ಕೆಂಪಾಪುರ, ಸಂಪಿಗೆಹಳ್ಳಿ, ಶ್ರೀರಾಂಪುರ, ವೆಂಕಟೇಶಪುರ, ಹೆಣ್ಣೂರು, ಹೆಬ್ಬಾಳ ಮತ್ತು ನಾಗವಾರದಂತಹ 16 ಗ್ರಾಮಗಳಲ್ಲಿ ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ 8,813 ನಿವೇಶನಗಳೊಂದಿಗೆ ಅರ್ಕಾವತಿ ಬಡಾವಣೆಯನ್ನು 2003-2004ರಲ್ಲಿ ನಿರ್ಮಿಸಲು ಯೋಜಿಸಲಾಗಿತ್ತು.

 ಸರಣಿ ಡಿನೋಟಿಫಿಕೇಶನ್ ಆದೇಶಗಳ ಮೂಲಕ 3,720 ಸೈಟ್‌ಗಳ ಹಂಚಿಕೆ ರದ್ದುಗೊಳಿಸುವುದರೊಂದಿಗೆ ಇದು ಪ್ರಾರಂಭದಿಂದಲೂ ವಿವಾದಾತ್ಮಕವಾಗಿದೆ ಮತ್ತು ಇನ್ನೂ ಅನೇಕರು ಪರ್ಯಾಯ ಸೈಟ್‌ಗಳಿಗಾಗಿ ಕಾಯುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com