ಸರ್ಕಾರದ ದೊಡ್ಡ ವ್ಯಕ್ತಿಗಳ ಹೆಸರು ಹೇಳಿಕೊಂಡು ಬಿಬಿಎಂಪಿಯಲ್ಲಿ ಹಣ ವಸೂಲಿ: ಕೆಂಪಣ್ಣ ಆರೋಪ

ಬಿಬಿಎಂಪಿಯ ಮುಖ್ಯ ಇಂಜಿನಿಯರಿಂಗ್ ಛಿಫ್ ಸರ್ಕಾರದ ದೊಡ್ಡ ವ್ಯಕ್ತಿಗಳ ಹೆಸರು ಹೇಳಿಕೊಂಡು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಗಂಭೀರ ಆರೋಪ ಮಾಡಿದ್ದಾರೆ.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ

ಬೆಂಗಳೂರು: ಬಿಬಿಎಂಪಿಯ ಮುಖ್ಯ ಇಂಜಿನಿಯರಿಂಗ್ ಛಿಫ್ ಸರ್ಕಾರದ ದೊಡ್ಡ ವ್ಯಕ್ತಿಗಳ ಹೆಸರು ಹೇಳಿಕೊಂಡು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಗಂಭೀರ ಆರೋಪ ಮಾಡಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಖಾಸಗಿಯಾಗಿ ಭೇಟಿಯಾಗಲು ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಇಂಜಿನಿಯರಿಂಗ್ ಛಿಫ್ ಪ್ರಹ್ಲಾದ್ ಇರುವವರೆಗೂ ಬಿಬಿಎಂಪಿ ಉದ್ಧಾರ ಆಗಲ್ಲ ಎಂದು ಕಿಡಿಕಾರಿದರು.

ಹಿರಿತನದ ಆಧಾರದ ಮೇಲೆ ಹಣ ಕೊಡುವಂತೆ ಮನವಿ ಮಾಡಿಕೊಂಡಿದ್ದೇನೆ. ಸ್ವಲ್ಪ ಹಣ ಬಿಡುಗಡೆ ಮಾಡಿದ್ದಾರೆ. ಇದರಿಂದ ನಮಗೆ ತೃಪ್ತಿ ಇದೆ ಎಂದು ಹೇಳುವುದಿಲ್ಲ, ಗುತ್ತಿಗೆದಾರರ ಹಣವನ್ನು ಪೂರ್ಣ ಪ್ರಮಾಣದಲ್ಲಿ ಕ್ಲಿಯರ್ ಮಾಡುವಂತೆ ಮನವಿ ಮಾಡಿದ್ದೇನೆ. ಡಿಸೆಂಬರ್‌ ಒಳಗಡೆ ಪ್ರಯತ್ನ ಮಾಡುತ್ತೇವೆಂದು ಹೇಳಿದ್ದಾರೆ. ಡಿಕೆ.ಶಿವಕುಮಾರ್ ಅವರನ್ನು ಖಾಸಗಿ ವಿಚಾರವಾಗಿ ಭೇಟಿ ಮಾಡಿದ್ದೇನೆ ಅಷ್ಟೇ" ಎಂದು ಹೇಳಿದರು.

ಇದೇ ವೇಳೆ ಬಿಬಿಎಂಪಿ ಚೀಫ್ ಇಂಜಿನಿಯರ್ ಬಿ.ಎಸ್.ಪ್ರಹ್ಲಾದ್ ಮೇಲೆ ಅಸಮಾಧಾನ ವ್ಯಕ್ತಪಡಿಸಿದ ಕೆಂಪಣ್ಣ, "ಬಿ.ಎಸ್.ಪ್ರಹ್ಲಾದ್ ಇರುವರೆಗೂ ಬಿಬಿಎಂಪಿ ಉದ್ಧಾರ ಆಗಲ್ಲ. ಈಗಲೂ ಹೇಳುತ್ತೇನೆ, ಮುಂದೇನೂ ಹೇಳುತ್ತೇನೆ. ಅವರು ಬಂದಾಗಿನಿಂದ ಒಂದೂ ದೊಡ್ಡ ಕೆಲಸ ಮಾಡಿಲ್ಲ" ಎಂದು ಆರೋಪಿಸಿದರು.

ಸರ್ಕಾರದ ದೊಡ್ಡ ವ್ಯಕ್ತಿಗಳ ಹೆಸರು ಹೇಳಿ ದುಡ್ಡು ವಸೂಲಿ ಮಾಡುತ್ತಿದ್ದಾರೆ. ಬಿಬಿಎಂಪಿ ಹಾಳು ಮಾಡುತ್ತಿದ್ದಾರೆ. ಇದನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಗಮನಕ್ಕೆ ತರಬೇಕಿತ್ತು. ಆದರೆ, ಇಂದು ಬೇರೆ ಕೆಲಸದ ನಿಮಿತ್ತ ಬಂದಿದ್ದೇನೆ, ಹೀಗಾಗಿ ಮಾತಾಡಿಲ್ಲ. ನಮ್ಮ ಸಂಘದ ಪದಾಧಿಕಾರಿಗಳ ಜೊತೆಗೆ ಬಂದು ಮಾತನಾಡುತ್ತೇನೆ" ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com