ದಾಖಲೆ ಬರೆದ ಬೆಂಗಳೂರು ಮಳೆ: ಯಲಹಂಕದಲ್ಲಿ 164 ಮಿ.ಮೀ, 21 ಪ್ರದೇಶಗಳಲ್ಲಿ ಸರಾಸರಿ 64.5 ಮಿ.ಮೀ ಮಳೆ!

ನಿನ್ನೆ ಬೆಂಗಳೂರಿನಲ್ಲಿ ರಾತ್ರಿ ಇಡೀ ಸುರಿದ ಧಾರಾಕಾರ ಮಳೆ ದಾಖಲೆಯನ್ನೇ ಬರೆದಿದ್ದು, ನಗರದ ಯಲಹಂಕ ಪ್ರದೇಶವೊಂದರಲ್ಲೇ ದಾಖಲೆಯ 164 ಮಿ.ಮೀ ಮಳೆಯಾಗಿದೆ. 
ದಾಖಲೆ ಬರೆದ ಬೆಂಗಳೂರು ಮಳೆ (ಸಂಗ್ರಹ ಚಿತ್ರ)
ದಾಖಲೆ ಬರೆದ ಬೆಂಗಳೂರು ಮಳೆ (ಸಂಗ್ರಹ ಚಿತ್ರ)

ಬೆಂಗಳೂರು: ನಿನ್ನೆ ಬೆಂಗಳೂರಿನಲ್ಲಿ ರಾತ್ರಿ ಇಡೀ ಸುರಿದ ಧಾರಾಕಾರ ಮಳೆ ದಾಖಲೆಯನ್ನೇ ಬರೆದಿದ್ದು, ನಗರದ ಯಲಹಂಕ ಪ್ರದೇಶವೊಂದರಲ್ಲೇ ದಾಖಲೆಯ 164 ಮಿ.ಮೀ ಮಳೆಯಾಗಿದೆ. 

ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಾತ್ರಿ ಇಡೀ ಸುರಿದ ಧಾರಾಕಾರ ಮಳೆ ಹಲವು ಪ್ರದೇಶದಳಲ್ಲಿ ಜಲಾವೃತ ಸಮಸ್ಯೆಗೆ ಕಾರಣವಾಗಿತ್ತು. ನಗರದ ಹಲವು ಪ್ರದೇಶಗಳಲ್ಲಿ ಹೆಚ್ಚು ಮಳೆ ದಾಖಲಾಗಿದ್ದು, ಈ ಬಗ್ಗೆ Weather@Bengaluru ವರದಿ ಮಾಡಿದೆ. ಯಲಹಂಕ-ಜಕ್ಕೂರು ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ನಗರದ 29 ಕೇಂದ್ರಗಳಲ್ಲಿ 50ಮಿಮೀಗೂ ಅಧಿಕ ಮಳೆಯಾಗಿದ್ದು, 40 ಕೇಂದ್ರಗಳಲ್ಲಿ ಸಾಧಾರಣ ಮಳೆ ದಾಖಲಾಗಿದೆ.

ಪ್ರಮುಖವಾಗಿ ಯಲಹಂಕದಲ್ಲಿ 164 ಮಿ.ಮೀ ಮಳೆಯಾದರೆ ಜಕ್ಕೂರು ಪ್ರದೇಶದಲ್ಲಿ 113.50 ಮಿಲಿ ಮೀಟರ್, ಹಂಪಿ ನಗರದ ವ್ಯಾಪ್ತಿಯಲ್ಲಿ 86 ಮಿಲಿ ಮೀಟರ್, ನಾಗಪುರ ಬಡಾವಣೆಯಲ್ಲಿ 82.50 ಮಿಲಿ ಮೀಟರ್, ನಂದಿನಿ ಲೇಔಟ್​​ನಲ್ಲಿ 70.60 ಮಿ.ಮೀ., ನಾಗೇನಹಳ್ಳಿ 71 ಮಿ.ಮೀ, ರಾಜಮಹಲ್ ಗುಟ್ಟಹಳ್ಳಿ ವ್ಯಾಪ್ತಿಯಲ್ಲಿ 69.50 ಮಿಲಿ ಮೀಟರ್, ಮೈಸೂರು ರಸ್ತೆಯ ಗಾಳಿ ಆಂಜನೇಯ ದೇವಸ್ಥಾನ ವ್ಯಾಪ್ತಿಯಲ್ಲಿ 68 ಮಿಲಿ ಮೀಟರ್​, ಕೊಟ್ಟಿಗೆಪಾಳ್ಯ 64 ಮಿ.ಮೀ., ಅಗ್ರಹಾರದಾಸರಹಳ್ಳಿ 64 ಮಿ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಂತೆಯೇ ಮಧ್ಯರಾತ್ರಿ 2 ಗಂಟೆಯವರೆಗೆ ಜಕ್ಕೂರು 147.5, ಹಂಪಿನಗರ-ನಾಗಪುರ ನಂದಿನಿ ಲೇಔಟ್‌ನಲ್ಲಿ 133 ಮಿ.ಮೀ ಗಿಂತಲೂ ಹೆಚ್ಚು ಮಳೆಯಾಗಿದೆ. ಪೀಣ್ಯ ಕೈಗಾರಿಕಾ ಪ್ರದೇಶ 89 ಮಿ.ಮೀ, ಹೆರೋಹಳ್ಳಿ 65 ಮಿ.ಮೀ, ಕೆಂಗೇರಿಯಲ್ಲಿ 159 ಮಿಲಿ ಮಳೆಯಾಗಿದ್ದು, ಸಂಪಂಗಿ ರಾಮನಗರದಲ್ಲಿ 110 ಮಿಮೀ ಮಳೆಯಾಗಿದೆ. ಗಾಳಿ ಆಂಜನೇಯ ಸ್ವಾಮಿ ದೇಗುಲ ಪ್ರದೇಶದಲ್ಲಿ 157 ಮಿ.ಮೀ ಮಳೆಯಾಗಿದ್ದು, ಮಾರುತಿಮಂದಿರ ಪ್ರದೇಶದಲ್ಲಿ 127 ಮಿ,ಮೀ ಮಳೆಯಾಗಿದೆ ಎಂದು ಹೇಳಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com