ತಂತ್ರಜ್ಞಾನದಲ್ಲಿ ತೆಲಂಗಾಣಕ್ಕಿಂತ ಕರ್ನಾಟಕ ಮುಂದಿದೆ: ಸಚಿವ ಪ್ರಿಯಾಂಕ್ ಖರ್ಗೆ

ತಂತ್ರಜ್ಞಾನ ಮತ್ತು ಆವಿಷ್ಕಾರ ಕ್ಷೇತ್ರಗಳಲ್ಲಿ ಕರ್ನಾಟಕ ರಾಜ್ಯ ತೆಲಂಗಾಣಕ್ಕಿಂತ ಮುಂದಿದೆ ಎಂದು ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಶನಿವಾರ ಹೇಳಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ
ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ತಂತ್ರಜ್ಞಾನ ಮತ್ತು ಆವಿಷ್ಕಾರ ಕ್ಷೇತ್ರಗಳಲ್ಲಿ ಕರ್ನಾಟಕ ರಾಜ್ಯ ತೆಲಂಗಾಣಕ್ಕಿಂತ ಮುಂದಿದೆ ಎಂದು ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಶನಿವಾರ ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಭಾರತೀಯ ರಾಷ್ಟ್ರ ಸಮಿತಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

“ತಂತ್ರಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರಗಳಲ್ಲಿ ಕರ್ನಾಟಕಕ್ಕೆ ಹತ್ತಿರವಾಗುತ್ತಿದ್ದೇವೆ ಎಂದು ಭಾರತೀಯ ರಾಷ್ಟ್ರ ಸಮಿತಿಯು ಹೇಳುತ್ತಿದೆ. ಚುನಾವಣೆ ಹತ್ತಿರಬರುತ್ತಿದ್ದಂತೆಯೇ ಆ ಪಕ್ಷದ ಮಾತುಗಳು ಮತ್ತಷ್ಟು ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ತೆಲಂಗಾಣ ರಾಜ್ಯ ಹಾಗೂ ಕರ್ನಾಟಕದಲ್ಲಿನ ಬೆಳವಣಿಗೆ ಕುರಿತು ಪಟ್ಟಿ ನೀಡಿ, ವಿವರಣೆ ನೀಡಿದ್ದಾರೆ.

2021-22ರಲ್ಲಿ ಕರ್ನಾಟಕದಿಂದ ಐಟಿ ರಫ್ತು (ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಸಾಫ್ಟ್‌ವೇರ್) 7,58,734.75 ಕೋಟಿ ರೂ.ಗಳಾಗಿದ್ದರೆ,  1,83,569 ಕೋಟಿ ತೆಲಂಗಾಣದ್ದಾಗಿದೆ. ಕರ್ನಾಟಕದಲ್ಲಿ ನೋಂದಾಯಿತ ಸ್ಟಾರ್ಟ್‌ಅಪ್‌ಗಳು, ಯುನಿಕಾರ್ನ್‌ಗಳು ಮತ್ತು ಸ್ಟಾರ್ಟ್‌ಅಪ್‌ಗಳ ಕ್ರಮವಾಗಿ 20,000, 41 ಮತ್ತು 878 ಆಗಿದ್ದರೆ, ತೆಲಂಗಾಣದಲ್ಲಿ ಇದು ಕ್ರಮವಾಗಿ 6,600, 2 ಮತ್ತು 356 ಆಗಿದೆ.

ಸ್ಟಾರ್ಟ್‌ಅಪ್ ಬ್ಲಿಂಕ್: ಗ್ಲೋಬಲ್ ಸ್ಟಾರ್ಟ್ ಇಕೋಸಿಸ್ಟಮ್ ಇಂಡೆಕ್ಸ್‌ನಲ್ಲಿ ಕರ್ನಾಟಕ ಎಂಟನೇ ಸ್ಥಾನದಲ್ಲಿದ್ದರೆ, ನೆರೆಯ ರಾಜ್ಯವು 89 ರಲ್ಲಿದೆ. ಕರ್ನಾಟಕದಲ್ಲಿ ಜಾಗತಿಕ ಸಾಮರ್ಥ್ಯ ಕೇಂದ್ರಗಳ ಸಂಖ್ಯೆ 460 ಮತ್ತು ತೆಲಂಗಾಣದಲ್ಲಿ 180 ಆಗಿದೆ. ಉತ್ಪಾದನೆಯಲ್ಲಿ ದೇಶದಲ್ಲಿ ಕರ್ನಾಟಕವು ಶೇ.6.4 ಎಲೆಕ್ಟ್ರಾನಿಕ್ ಉತ್ಪಾದನೆಯಲ್ಲಿ ಶೇ.8 ಪ್ರತಿಶತವನ್ನು ಹೊಂದಿದೆ, ಆದರೆ ತೆಲಂಗಾಣದಲ್ಲಿ ಇದು 2.8 ಮತ್ತು 3.1 ಪ್ರತಿಶತ ಆಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com