ತುಂಬಾ ಅನಾರೋಗ್ಯಕರ: ದೀಪಾವಳಿ ಬೆನ್ನಲ್ಲೇ ಬೆಂಗಳೂರಿನಲ್ಲಿ ಕುಸಿದ ಹವಾಮಾನ, 193ಕ್ಕೇರಿದ AQI

ದೀಪಾವಳಿ ಸಂಭ್ರಮದಲ್ಲಿರುವ ಜನತೆಗೆ ಹವಮಾನ ಸಂಸ್ಥೆ ಶಾಕಿಂಗ್ ನ್ಯೂಸ್ ನೀಡಿದ್ದು, ಉದ್ಯಾನನಗರಿಯಲ್ಲಿ ಹವಾಮಾನ ಗುಣಮಟ್ಟ ತೀವ್ರಪ್ರಮಾಣದಲ್ಲಿ ಕುಸಿದಿದೆ ಎಂದು ಹೇಳಿದೆ.
ಬೆಂಗಳೂರು ವಾಯು ಮಾಲಿನ್ಯ
ಬೆಂಗಳೂರು ವಾಯು ಮಾಲಿನ್ಯ
Updated on

ಬೆಂಗಳೂರು: ದೀಪಾವಳಿ ಸಂಭ್ರಮದಲ್ಲಿರುವ ಜನತೆಗೆ ಹವಮಾನ ಸಂಸ್ಥೆ ಶಾಕಿಂಗ್ ನ್ಯೂಸ್ ನೀಡಿದ್ದು, ಉದ್ಯಾನನಗರಿಯಲ್ಲಿ ಹವಾಮಾನ ಗುಣಮಟ್ಟ ತೀವ್ರಪ್ರಮಾಣದಲ್ಲಿ ಕುಸಿದಿದೆ ಎಂದು ಹೇಳಿದೆ.

ಬೆಂಗಳೂರಿನ ಜನತೆ ಕಳೆದ 2 ದಿನಗಳಿಂದ ದೀಪಾವಳಿ ಸಂಭ್ರಮಾಚರಣೆಯಲ್ಲಿರುವಂತೆಯೇ ಉದ್ಯಾನ ನಗರಿಯಲ್ಲಿನ ವಾಯು ಗುಣಮಟ್ಟ ಸೂಚ್ಯಂಕ 193ಕ್ಕೇರಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಆಕ್ಯು ವೆದರ್ (Accu Weather)  ವರದಿ ಮಾಡಿದೆ. ಬೆಂಗಳೂರಿನ  (Bengaluru) ಇಂದಿನ ಗಾಳಿಯ ಗುಣಮಟ್ಟ ಮಾಲಿನ್ಯ ಮಟ್ಟವನ್ನು ತಲುಪಿದ್ದು, ಇದು ತುಂಬಾ ಅನಾರೋಗ್ಯಕರವಾಗಿದೆ. ಉಸಿರಾಟದ ತೊಂದರೆ ಅಥವಾ ಗಂಟಲಿನ ಕಿರಿಕಿರಿಯಂತಹ ರೋಗಲಕ್ಷಣಗಳನ್ನು ನೀವು ಅನುಭವಿಸುತ್ತಿದ್ದರೆ ಅನಾವಶ್ಯಕ ಹೊರಗಿನ ಓಡಾಟ ತಪ್ಪಿಸಿ ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ. 

ಇದನ್ನೂ ಓದಿ: 

ಅಲ್ಲದೆ ಆರೋಗ್ಯವಂತ ವ್ಯಕ್ತಿಗಳೂ ಕೂಡ ವಾಯುಮಾಲಿನ್ಯದಿಂದಾಗಿ ಉಸಿರಾಟದ ತೊಂದರೆ ಮತ್ತು ಗಂಟಲಿನ ಕಿರಿಕಿರಿಯನ್ನು ಅನುಭವಿಸುವ ಸಾಧ್ಯತೆಯಿದೆ ಎಂದೂ ಎಚ್ಚರಿಸಿದೆ. ಬೆಂಗಳೂರಿನ ಇಂದಿನ ವಾಯು ಗುಣಮಟ್ಟ PM 2.6 (Fine Particulate Matter) 193 ಆಗಿದ್ದು, PM 10 (Particulate Matter)ನ ಪ್ರಮಾಣ 152ರಷ್ಟಿದೆ. ಈ ಎರಡೂ ಅಂಶಗಳ ಪ್ರಮಾಣ ತುಂಬಾ ಅನಾರೋಗ್ಯಕರ ಎಂದು ಆ್ಯಕ್ಯುವೆದರ್ (Accu Weather) ವರದಿ ಮಾಡಿದೆ.

ಉಳಿದಂತೆ ನಗರದಲ್ಲಿನ ಗಾಳಿಯಲ್ಲಿನ ಎನ್ಒ2 (NO2-Nitrogen Dioxide) ಪ್ರಮಾಣ 49ರಷ್ಟಿದ್ದು, ಇದು ಉತ್ತಮ ಪ್ರಮಾಣದಲ್ಲಿದೆ. ಅಂತೆಯೇ ಓಜೋನ್ (O3-Ozone)ದ ಪ್ರಮಾಣ 31ರಷ್ಟಿದ್ದು, ಕಾರ್ಬನ್ ಮಾನಾಕ್ಸೈಡ್ (CO-Carbon Monoxide) 3ರಷ್ಟಿದ್ದು, ಈ ಎರಡೂ ಅಂಶಗಳ ಪ್ರಮಾಣ ಉತ್ತಮವಾಗಿದೆ ಎಂದು ಆ್ಯಕ್ಯು ವೆದರ್ ವರದಿ ಮಾಡಿದೆ.
 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com