ಬೆಂಗಳೂರು: ನೆರೆಮನೆಯ ಮಹಿಳೆಯೊಬ್ಬರಿಗೆ ನಾಯಿ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ತೂಗುದೀಪ ಅವರು ಬುಧವಾರ ರಾಜರಾಜೇಶ್ವರಿ ನಗರದ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಟನ ನಿವಾಸದ ಪಕ್ಕದಲ್ಲಿನ ಖಾಲಿ ಜಾಗದಲ್ಲಿ ತನ್ನ ಕಾರನ್ನು ನಿಲ್ಲಿಸಿದ್ದಕ್ಕಾಗಿ ತನ್ನ ಮೇಲೆ ದಾಳಿ ಮಾಡಲು ನಾಯಿಗಳನ್ನು ಬಿಡಲಾಗಿದೆ ಎಂದು ಲಾ ಅಭ್ಯಾಸ ಮಾಡುತ್ತಿರುವ ದೂರುದಾರ ಮಹಿಳೆ ಅಮಿತಾ ಜಿಂದಾಲ್ ಆರೋಪಿಸಿದ್ದಾರೆ.
ಆಕೆಯ ಪ್ರಕಾರ, ದರ್ಶನ್ ಅವರ ನಿವಾಸದ ಉಸ್ತುವಾರಿಗಳು ಪಾರ್ಕಿಂಗ್ ಅನ್ನು ವಿರೋಧಿಸಿದರು ಮತ್ತು ಮನೆಯಲ್ಲಿ ಮೂರು ನಾಯಿಗಳು ಇರುವುದು ನನ್ನ ಗಮನಕ್ಕೆ ಬಂತು. ಈ ವೇಳೆ ಅವುಗಳಲ್ಲಿ ಒಂದನ್ನು ನನ್ನ ಮೇಲೆ ಬಿಡಲಾಯಿತು ಎಂದಿದ್ದಾರೆ.
ಸಿಬ್ಬಂದಿ ಮತ್ತು ದೂರುದಾರರ ನಡುವೆ ವಾಗ್ವಾದ ನಡೆದ ತಕ್ಷಣವೇ ಎರಡು ನಾಯಿಗಳು ಮಹಿಳೆ ಮೇಲೆ ದಾಳಿ ನಡೆಸಿದ್ದು, ಕಚ್ಚಿವೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ನಾಯಿ ಕಚ್ಚಿದ ಪ್ರಕರಣ: ನಟ ದರ್ಶನ್ ಗೆ ನೋಟಿಸ್ ಜಾರಿ
ಪೊಲೀಸರು ದರ್ಶನ್ ಅವರನ್ನು ವಿಚಾರಣೆ ನಡೆಸಿ, ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಪ್ರಕರಣ ಸಂಬಂಧ ದರ್ಶನ್ ಅವರಿಗೆ ನೋಟಿಸ್ ಜಾರಿ ಮಾಡಿದ್ದ ಪೊಲೀಸರು, ಮೂರು ದಿನದ ಒಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರು. ಸಿಸಿಟಿವಿ ದೃಶ್ಯಾವಳಿಯ ಜೊತೆಗೆ ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಲು ಸೂಚಿಸಲಾಗಿತ್ತು.
Advertisement