ಬೆಂಗಳೂರು: ಹಿಂಸಾತ್ಮಕ ತಿರುವು ಪಡೆದ ಬಾಡಿ ಶೇಮಿಂಗ್; ಜಿಮ್ ನಲ್ಲಿ ಯುವಕನಿಗೆ ಚಾಕುವಿನಿಂದ ಹಲ್ಲೆ, ದೂರು ದಾಖಲು

ಜಿಮ್‌ನಲ್ಲಿ 25 ವರ್ಷದ  ವ್ಯಕ್ತಿಯೊಬ್ಬನಿಗೆ ಬಾಡಿ ಶೇಮ್ ಮಾಡಿದ ಪ್ರಕರಣ ಹಿಂಸಾತ್ಮಕ ತಿರುವು ಪಡೆದುಕೊಂಡಿದೆ. ಆರ್‌ಟಿ ನಗರದ ಆಚಾರ್ಯ ಕಾಲೇಜು ಬಳಿ ಇರುವ ಜಿಮ್‌ನಲ್ಲಿ ಮೂವರಿಂದ ವ್ಯಕ್ತಿ ಮೇಲೆ ಹಲ್ಲೆ ನಡೆದಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಜಿಮ್‌ನಲ್ಲಿ 25 ವರ್ಷದ  ವ್ಯಕ್ತಿಯೊಬ್ಬನಿಗೆ ಬಾಡಿ ಶೇಮ್ ಮಾಡಿದ ಪ್ರಕರಣ ಹಿಂಸಾತ್ಮಕ ತಿರುವು ಪಡೆದುಕೊಂಡಿದೆ. ಆರ್‌ಟಿ ನಗರದ ಆಚಾರ್ಯ ಕಾಲೇಜು ಬಳಿ ಇರುವ ಜಿಮ್‌ನಲ್ಲಿ ಮೂವರಿಂದ ವ್ಯಕ್ತಿ ಮೇಲೆ ಹಲ್ಲೆ ನಡೆದಿದೆ.

ತೆಳ್ಳಗಿದ್ದ ವೈ ಫಿರೋಜ್ ಅಹ್ಮದ್‌ ನನ್ನು ನೋಡಿ ಪ್ರಮುಖ ಆರೋಪಿ ಮೊಹಮ್ಮದ್ ಫಹಾದ್ ತಮಾಷೆ ಮಾಡಿದ್ದಾನೆ. ಇದಕ್ಕೆ ಸಂತ್ರಸ್ತ ವ್ಯಕ್ತಿ ಆಕ್ಷೇಪ ವ್ಯಕ್ತ ಪಡಿಸಿದ ಹಿನ್ನೆಲೆಯಲ್ಲಿ ಮಾತಿನ ಚಕಮಕಿ ಮತ್ತು ವಾಗ್ವಾದಕ್ಕೆ ಕಾರಣವಾಯಿತು. ನಂತರ ಆರೋಪಿಗಳು ತನ್ನ ಸಹೋದರ ಮತ್ತು ಸ್ನೇಹಿತರಿಗೆ ಕರೆ ಮಾಡಿ ಆರ್ ಟಿ ನಗರದ ಸನ್ ರೈಸ್ ಕಾಲೋನಿ ನಿವಾಸಿ ಫಿರೋಜ್ ಅಹಮದ್ ಮೇಲೆ ಹಲ್ಲೆ ನಡೆಸಿದ್ದಾರೆ.

ಆರ್‌ಟಿ ನಗರದ ಸೀತಪ್ಪ ಲೇಔಟ್‌ನಲ್ಲಿರುವ ಫಿಟ್‌ಗೇನರ್ ಜಿಮ್ ಮತ್ತು ಫಿಟ್‌ನೆಸ್ ಸೆಂಟರ್‌ನಲ್ಲಿ ಕಳೆದ ಗುರುವಾರ ಸಂಜೆ 7 ರಿಂದ 8.15 ರ ನಡುವೆ ಈ ಘಟನೆ ನಡೆದಿದೆ. ಹಲ್ಲೆಯಾದ ನಂತರ ದೂರು ದಾಖಲಾಗಿದೆ.

ಆರ್ ಟಿ ನಗರ ನಿವಾಸಿಗಳಾದ ಮೊಹಮ್ಮದ್ ಫಹಾದ್, ಅವರ ಸಹೋದರ ಮೊಹಮ್ಮದ್ ಫೈಸಲ್ ಮತ್ತು  ಸ್ನೇಹಿತ ಸೈಯದ್ ಅಕ್ಬರ್ ಪಾಷಾ ವಿರುದ್ಧ ದೂರು ದಾಖಲಾಗಿದೆ. ಅಹ್ಮದ್ ಎರಡು ತಿಂಗಳ ಹಿಂದೆ ಜಿಮ್‌ಗೆ ಹೋಗಲು ಪ್ರಾರಂಭಿಸಿದರು. ಫಹಾದ್ ನಿತ್ಯವೂ ಅಹ್ಮದ್ ಬಾಡಿ ಶೇಮ್ ಮಾಡುತ್ತಿದ್ದ ಎನ್ನಲಾಗಿದೆ.

ಘಟನೆ ನಡೆದ ದಿನ ಅಹ್ಮದ್ ಚೆಸ್ಟ್ ವರ್ಕೌಟ್  ಮಾಡುತ್ತಿದ್ದಾಗ, ಫಹಾದ್ ಗೇಲಿ ಮಾಡಲು ಪ್ರಾರಂಭಿಸಿದನು. ಅವಮಾನದಿಂದ ಬೇಸತ್ತಿದ್ದ ಅಹಮದ್, ಆರೋಪಿಗಳ ಜತೆ ವಾಗ್ವಾದಕ್ಕಿಳಿದಿದ್ದಾನೆ. ನಂತರ ವಾಗ್ವಾದ ವಿಕೋಪಕ್ಕೆ ತಿರುಗಿದೆ.

ದೂರು ನೀಡಿರುವ ಫಿರೋಜ್ ಅಹ್ಮದ್ , ಫಹಾದ್‌ನನ್ನು ಮೊದಲು ಹೊಡೆದಿದ್ದಾನೆ. ಇದರಿಂದ ಕುಪಿತಗೊಂಡ ಫಹಾದ್ ಮನೆಗೆ ತೆರಳಿ ತನ್ನ ಸಹೋದರ ಹಾಗೂ ಸ್ನೇಹಿತನೊಂದಿಗೆ ವಾಪಸಾಗಿದ್ದು, ಮೂವರೂ ಜಿಮ್‌ಗೆ ನುಗ್ಗಿ ಚಾಕು, ಇತರೆ ಮಾರಕಾಯುಧಗಳಿಂದ ಹಾಗೂ ಬೈಕ್‌ನ ಕೀಗಳಿಂದ ಹಲ್ಲೆ ನಡೆಸಿದ್ದಾರೆ.

ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದ ಇತರರು ಹೆದರಿ ಓಡಲು ಪ್ರಾರಂಭಿಸಿದರು, ಮತ್ತು ಕೆಲವರು ಅಹ್ಮದ್ ಅವರ ರಕ್ಷಣೆಗೆ ಬಂದರು. ಆರೋಪಿಗಳು ಅಲ್ಲಿಂದ ತೆರಳಿದ ನಂತರ ದೂರುದಾರ ವ್ಯಕ್ತಿ ತಮ್ಮ ಕುಟುಂಬಸ್ಥರ ಜೊತೆ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತನಿಖೆಯ ಭಾಗವಾಗಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಿಮ್ ಆವರಣದಲ್ಲಿ ಘಟನೆ ನಡೆದಿದೆ. ಘಟನೆಯ ಸಮಯದಲ್ಲಿ ನನ್ನ ಇನ್ನೊಬ್ಬ ಪಾರ್ಟನರ್ ಜಿಮ್‌ನಲ್ಲಿದ್ದರು. ಅಹ್ಮದ್ ಮತ್ತು ಫಹಾದ್ ಇಬ್ಬರೂ ರೆಗ್ಯುಲರ್ ಕಸ್ಟಮರ್. ಅಹಮದ್ ಮೇಲೆ ಹೊರಗಿನಿಂದ ತರಲಾದ ಶಸ್ತ್ರಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ಆರೋಪಿಗಳು ಅಹ್ಮದ್ ಮೇಲೆ ದಾಳಿ ಮಾಡಲು ಯಾವುದೇ ಜಿಮ್ ಉಪಕರಣಗಳನ್ನು ಬಳಸಿಲ್ಲ ಎಂದು ಜಿಮ್ ಮಾಲೀಕರಲ್ಲಿ ಒಬ್ಬರಾದ ಮಸ್ತಾನ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಘಟನೆಗೆ ಸಾಕ್ಷಿಯಾದ ಜಿಮ್ ಮಾಲೀಕರೊಬ್ಬರ ಹೇಳಿಕೆಯನ್ನೂ ಪೊಲೀಸರು ತೆಗೆದುಕೊಂಡಿದ್ದಾರೆ. ಮೂವರಲ್ಲಿ ಒಬ್ಬನನ್ನು ವಶಕ್ಕೆ ಪಡೆಯಲಾಗಿದ್ದು, ಇನ್ನಿಬ್ಬರಿಗಾಗಿ ಶೋಧ ನಡೆಯುತ್ತಿದೆ. ಮೂವರು ಶಂಕಿತರ ವಿರುದ್ಧ ಭಾರತೀಯ ದಂಡ ಸಂಹಿತೆಯ ಇತರ ಸೆಕ್ಷನ್‌ಗಳ ಜೊತೆಗೆ ಕೊಲೆ ಯತ್ನ (IPC 307) ಪ್ರಕರಣ ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com