ಗದಗ: 9 ತಿಂಗಳ ಮೊಮ್ಮಗನನ್ನು ಕತ್ತು ಹಿಸುಕಿ ಕೊಂದ ಆರೋಪ, ಮಹಿಳೆ ಬಂಧನ

ಗಜೇಂದ್ರಗಡ ತಾಲೂಕಿನ ಗ್ರಾಮವೊಂದರಲ್ಲಿ ಮೊಮ್ಮಗನನ್ನು ಕತ್ತು ಹಿಸುಕಿ ಕೊಲೆ ಮಾಡಿದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಬಂಧಿಸಿರುವ ಘಟನೆ ಭಾನುವಾರ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಗದಗ: ಗಜೇಂದ್ರಗಡ ತಾಲೂಕಿನ ಗ್ರಾಮವೊಂದರಲ್ಲಿ ಮೊಮ್ಮಗನನ್ನು ಕತ್ತು ಹಿಸುಕಿ ಕೊಲೆ ಮಾಡಿದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಬಂಧಿಸಿರುವ ಘಟನೆ ಭಾನುವಾರ ನಡೆದಿದೆ. ಈ ಘಟನೆಯು ನವೆಂಬರ್ 22 ರಂದು ಸಂಭವಿಸಿದೆ. ಆದರೆ,
ತನಿಖೆ ನಡೆಸುತ್ತಿರುವ ಪೊಲೀಸರಿಗೆ, ಸೊಸೆ ನಾಗರತ್ನಳನ್ನು ಇಷ್ಟಪಡದ ಕಾರಣ ಸರೋಜಾ ಗೂಲಿ  ಒಂಬತ್ತು ತಿಂಗಳ ಮೊಮ್ಮಗ ಅದ್ವಿಕ್ ಅನ್ನು ಕತ್ತು ಹಿಸುಕಿ ಕೊಂದಿರುವುದು ಇತ್ತೀಚಿಗೆ ಬೆಳಕಿಗೆ ಬಂದಿದೆ.

ಈ ವರ್ಷದ ಫೆಬ್ರವರಿಯಲ್ಲಿ ಅದ್ವಿಕ್‌ಗೆ ತನ್ನ ಪೋಷಕರ ಮನೆಯಲ್ಲಿ ಜನ್ಮ ನೀಡಿದ್ದ ನಾಗರತ್ನ, ಸುಮಾರು ಆರು ತಿಂಗಳ ಕಾಲ ಅಲ್ಲಿಯೇ ಇದ್ದಳು. ಮೂರು ತಿಂಗಳ ಹಿಂದೆಯಷ್ಟೇ ತನ್ನ ಮನೆಗೆ ವಾಪಸ್ಸಾಗಿದ್ದರು. ನವೆಂಬರ್ 22 ರಂದು ಮನೆಗೆಲಸಕ್ಕೆ ಹೋಗಿದ್ದೆ. ಮರಳಿ ಮನೆಗೆ ಬಂದಾಗ ಮಗು ಕಾಣೆಯಾಗಿತ್ತು ಎಂದು ನಾಗರತ್ನ ಪೊಲೀಸರಿಗೆ ಹೇಳಿದ್ದರು.

ಸರೋಜಾಳನ್ನು ವಿಚಾರಿಸಿದಾಗ ಸಮಾಧಾನಕರ ಉತ್ತರ ನೀಡಿಲ್ಲ. ಇದರಿಂದ ಅನುಮಾನಗೊಂಡ ನಾಗರತ್ನ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ವಿಚಾರಣೆ ವೇಳೆ ಸರೋಜಾ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ ಮತ್ತು ಮಗುವನ್ನು ಕತ್ತು ಹಿಸುಕಿ ಕೊಂದ ನಂತರ ಸಮೀಪದ ಮಾವಿನ ತೋಪಿನಲ್ಲಿ ಹೂತು ಹಾಕಿದ್ದಳು ಎಂದು ಗಜೇಂದ್ರಗಡ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಪೊಲೀಸರು ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸರೋಜಾ ಮಗುವಿಗೆ ತಿನ್ನಲು ಬಾರದ ವಸ್ತುಗಳನ್ನು ನೀಡುತ್ತಿದ್ದರು ಎಂದು ನಾಗರತ್ನ ಪೊಲೀಸರಿಗೆ ತಿಳಿಸಿದ್ದಾರೆ. ಆದರೂ ಅತ್ತೆ ಇಷ್ಟೊಂದು ಮಟ್ಟಕ್ಕೆ ಹೋಗಬಹುದೆಂಬ ಅನುಮಾನ ಅವಳಿಗೆ ಇರಲಿಲ್ಲ. ಪ್ರಕರಣ ಕೈಗೆತ್ತಿಕೊಂಡಿದ್ದೇವೆ. ಸೂಕ್ತ ಕ್ರಮ ಕೈಗೊಳ್ಳಲು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ" ಎಂದು ಗಜೇಂದ್ರಗಡದ ಅಧಿಕಾರಿಯೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com