ಶಾಲೆ ಸ್ಥಳಾಂತರಕ್ಕೆ ಬಿಬಿಎಂಪಿ ವಿಳಂಬ; ಕುಸಿದೇ ಬಿತ್ತು ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡ, ತಪ್ಪಿದ ಭಾರಿ ಅನಾಹುತ!

ಶಿವಾಜಿನಗರದ ತಿಮ್ಮಯ್ಯ ಬಿ ಕ್ರಾಸ್ ರೋಡ್ ನಲ್ಲಿ ಶಿಥಿಲಾವಸ್ಥೆಯಲ್ಲಿದ್ದ ನರ್ಸರಿ ಶಾಲಾ ಕಟ್ಟಡದಿಂದ ಸುರಕ್ಷಿತ ಸ್ಥಳಕ್ಕೆ ಶಾಲೆಯನ್ನು ಸ್ಥಳಾಂತರಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವಿಳಂಬ ಮಾಡಿದ್ದು, ಕೊನೆಗೆ ಸೋಮವಾರ ಬೆಳಗಿನ ಜಾವ 2 ಗಂಟೆಗೆ ಸುಮಾರಿಗೆ ಆ ಕಟ್ಟ ಕುಸಿದುಕೊಂಡೇ ಬಿದ್ದಿದೆ.
ಕುಸಿದು ಬಿದ್ದ ಶಾಲೆ
ಕುಸಿದು ಬಿದ್ದ ಶಾಲೆ

ಬೆಂಗಳೂರು: ಶಿವಾಜಿನಗರದ ತಿಮ್ಮಯ್ಯ ಬಿ ಕ್ರಾಸ್ ರೋಡ್ ನಲ್ಲಿ ಶಿಥಿಲಾವಸ್ಥೆಯಲ್ಲಿದ್ದ ನರ್ಸರಿ ಶಾಲಾ ಕಟ್ಟಡದಿಂದ ಸುರಕ್ಷಿತ ಸ್ಥಳಕ್ಕೆ ಶಾಲೆಯನ್ನು ಸ್ಥಳಾಂತರಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವಿಳಂಬ ಮಾಡಿದ್ದು, ಕೊನೆಗೆ ಸೋಮವಾರ ಬೆಳಗಿನ ಜಾವ 2 ಗಂಟೆಗೆ ಸುಮಾರಿಗೆ ಆ ಕಟ್ಟ ಕುಸಿದುಕೊಂಡೇ ಬಿದ್ದಿದೆ. ಪರಿಣಾಮ ಒಂದು ಸ್ಯಾಂಟ್ರೋ ಕಾರು, ಒಂದು ಲಗೇಜ್ ಆಟೋ ಹಾಗೂ ಒಂದು ಸ್ಕೂಟರ್ ಸಂಪೂರ್ಣ ಜಖಂಗೊಂಡಿದೆ.

ರಾತ್ರಿ ವೇಳೆ ಈ ಘಟನೆ ಸಂಭವಿಸಿದ್ದರಿಂದ ಇಬ್ಬರು ಶಿಕ್ಷಕರು, ಒಬ್ಬ ಸೆಕ್ಯುರಿಟಿ ಹಾಗೂ 80 ಮಕ್ಕಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಘಟನೆ ಬಳಿಕ ಬಿಬಿಎಂಪಿ, ಸ್ಥಳೀಯ ಪೊಲೀಸರ ತಂಡ ಸ್ಥಳಕ್ಕೆ ದೌಡಾಯಿಸಿದ್ದು, ಬಿಬಿಎಂಪಿ ಶಿವಾಜಿನಗರ ವಾರ್ಡ್ ಸಹಾಯಕ ಎಂಜಿನಿಯರ್ ರಾಘವೇಂದ್ರ ಅವರು ಜೆಸಿಬಿ ಯಂತ್ರದ ಸಹಾಯ ಪಡೆದು ಅವಶೇಷಗಳನ್ನು ತೆರವುಗೊಳಿಸುವಂತೆ ಸೂಚಿಸಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಮಾತನಾಡಿದ ಶಾಸಕ ರಿಜ್ವಾನ್ ಅರ್ಷದ್, ಶಿವಾಜಿನಗರದ ಬಹುತೇಕ ಸಾರ್ವಜನಿಕ ಕಟ್ಟಡಗಳು 50 ವರ್ಷಕ್ಕಿಂತ ಹಳೆಯದಾಗಿದ್ದು, ಕನಿಷ್ಠ 15 ವರ್ಷಗಳ ಹಿಂದೆ ಪುನಃಸ್ಥಾಪನೆ ಕಾರ್ಯವನ್ನು ಕೈಗೊಳ್ಳಬೇಕಾಗಿತ್ತು. "ಶಾಲೆಗಳು, ಸಮುದಾಯ ಭವನ ಮತ್ತು ಸಾರ್ವಜನಿಕ ಗ್ರಂಥಾಲಯದಂತಹ 20 ಸಾರ್ವಜನಿಕ ಕಟ್ಟಡಗಳು ಅತ್ಯಂತ ಹಳೆಯದಾಗಿದೆ. ಈ ಕಟ್ಟಡಗಳನ್ನು ತೆರವುಗೊಳಿಸಿ, ಹೊಸ ಕಟ್ಟಡ ನಿರ್ಮಾಣಕ್ಕೆ ದಾರಿ ಮಾಡಿಕೊಡಬೇಕಾಗಿದೆ. ನಾನು 7 ಶಾಲೆಗಳು, 3 ಸಮುದಾಯ ಭವನ ಮತ್ತು 3 ಗ್ರಂಥಾಲಯ ಹಾಗೂ ಬಿಬಿಎಂಪಿ ಇಂಗ್ಲಿಷ್ ನರ್ಸರಿ ಶಾಲೆಯನ್ನು ಹೊಸದಾಗಿ ನಿರ್ಮಾಣ ಮಾಡಲು ಪ್ರಾರಂಭಿಸಿದ್ದೇವೆ. ಕುಸಿದು ಬಿದ್ದಿರುವ ಕಟ್ಟಡ ಸಹ ಆ ಪಟ್ಟಿಯಲ್ಲಿದೆ. ಕೆಲವು ತಿಂಗಳ ಹಿಂದೆ ನಾನು ಸ್ಥಳಕ್ಕೆ ಭೇಟಿ ನೀಡಿದ್ದೆ ಮತ್ತು ಹೊಸ ಕಟ್ಟಡ ನಿರ್ಮಿಸಲು, ಆ ಶಾಲೆಯನ್ನು ಬೆರೆ ಸ್ಥಳಕ್ಕೆ ಸ್ಥಳಾಂತರಿಸುವಂತೆ ಸೂಚಿಸಿದ್ದೆ ಎಂದು ಹೇಳಿದ್ದಾರೆ.

ಶಾಲೆಯನ್ನು ಸ್ಥಳಾಂತರ ಮಾಡುವಲ್ಲಿ ಬಿಬಿಎಂಪಿ ವಿಳಂಬ ಧೋರಣೆ ಅನುಸರಿಸಿದ ಬೆನ್ನಲ್ಲೇ ನೆಲ ಹಾಗೂ ಒಂದು ಮಹಡಿ ಕಟ್ಟಡ ಕುಸಿದು ಬಿದ್ದಿದೆ ಎಂದು ಸ್ಥಳೀಯ ಮುಖಂಡ ಸೈಯದ್ ಸುಜಾದ್ದೀನ್ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com