ಗೇಟೆಡ್ ಕಮ್ಯುನಿಟಿ ಪರಿಕಲ್ಪನೆ ಇಲ್ಲ, ರಸ್ತೆಗಳು ಕೇವಲ ನಿವಾಸಿಗಳಿಗೆ ಮೀಸಲಾಗಿರುವುದಿಲ್ಲ: ಕರ್ನಾಟಕ ಹೈಕೋರ್ಟ್

ಏಕಸದಸ್ಯ ಪೀಠದ ತೀರ್ಪನ್ನು ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್, ರಸ್ತೆಗಳ ಮೇಲಿನ ನಿಯಂತ್ರಣವನ್ನು ನಾಗರಿಕ ಸಂಸ್ಥೆಗಳಿಗೆ ಬಿಟ್ಟುಕೊಟ್ಟ ನಂತರ ಬಡಾವಣೆಯ ಭೂ ಮಾಲೀಕರು ಅಥವಾ ಡೆವಲಪರ್‌ಗಳಿಗೆ ಅಲ್ಲಿನ ರಸ್ತೆ ಮತ್ತು ಇತರ ಸೇವೆಗಳ ಮೇಲೆ ಯಾವುದೇ ಹಕ್ಕು ಇರುವುದಿಲ್ಲ ಎಂದಿದೆ.
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್

ಬೆಂಗಳೂರು: ಏಕಸದಸ್ಯ ಪೀಠದ ತೀರ್ಪನ್ನು ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್, ರಸ್ತೆಗಳ ಮೇಲಿನ ನಿಯಂತ್ರಣವನ್ನು ನಾಗರಿಕ ಸಂಸ್ಥೆಗಳಿಗೆ ಬಿಟ್ಟುಕೊಟ್ಟ ನಂತರ ಬಡಾವಣೆಯ ಭೂ ಮಾಲೀಕರು ಅಥವಾ ಡೆವಲಪರ್‌ಗಳಿಗೆ ಅಲ್ಲಿನ ರಸ್ತೆ ಮತ್ತು ಇತರ ಸೇವೆಗಳ ಮೇಲೆ ಯಾವುದೇ ಹಕ್ಕು ಇರುವುದಿಲ್ಲ ಎಂದಿದೆ.

ಬೆಳ್ಳಂದೂರು ಹೊರ ವರ್ತುಲ ರಸ್ತೆಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ಟವರ್ಸ್‌ನ ಪಬ್ಬಾ ರೆಡ್ಡಿ ಕೋದಂಡರಾಮಿ ರೆಡ್ಡಿ ವಿರುದ್ಧ ಉಪಕಾರ್ ರೆಸಿಡೆನ್ಸ್ ಏಕಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದು, ಅನುಮೋದಿತ ಬಡಾವಣೆಯಲ್ಲಿ ಸಾರ್ವಜನಿಕರಿಗೆ ಪ್ರವೇಶ ಮತ್ತು ಹೊರಹೋಗುವ ಹಕ್ಕಿದೆ ಎಂದು ಕೋರಿತ್ತು.

ಇದು ಗೇಟೆಡ್ ಸಮುದಾಯವಾಗಿದ್ದು, ಇಲ್ಲಿನ ರಸ್ತೆಗಳು ನಿವಾಸಿಗಳ ವಿಶೇಷ ಬಳಕೆಗೆ ಮೀಸಲಾಗಿದೆ ಎಂದು ಕೋದಂಡರಾಮಿ ರೆಡ್ಡಿ ವಾದಿಸಿದ್ದರು.

ನವೆಂಬರ್ 29, 2022 ರಂದು ನೀಡಿದ ತನ್ನ ಆದೇಶದಲ್ಲಿ ಏಕಸದಸ್ಯ ಪೀಠವು ಗೇಟೆಡ್ ಸಮುದಾಯ ಎಂಬ ಪರಿಕಲ್ಪನೆಯೇ ಇಲ್ಲ. ಹೀಗಾಗಿ ರೆಡ್ಡಿ ಅವರು ಸಾರ್ವಜನಿಕರು ಆ ರಸ್ತೆಗಳನ್ನು ಬಳಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿತ್ತು.

ರೆಡ್ಡಿ ಅವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಮೂಲಕ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠವು, ಮೇಲ್ಮನವಿಯನ್ನು ವಜಾಗೊಳಿಸಿದೆ. 

ಸಂಬಂಧಿತ ಬಡಾವಣೆಯಲ್ಲಿರುವ ರಸ್ತೆಗಳನ್ನು ಬಡಾವಣೆಯ ನಿವಾಸಿಗಳು ಮತ್ತು ಇತರ ಸಾರ್ವಜನಿಕರು ಬಳಸಬಹುದು ಎನ್ನುವ ಏಕಸದಸ್ಯ ಪೀಠದ ತರ್ಕವನ್ನು ಒಪ್ಪಿಕೊಂಡಿರುವ ಈ ವಿಷಯದಲ್ಲಿ ನಾವು ಮಧ್ಯೆ ಪ್ರವೇಶಿಸುವುದಿಲ್ಲ ಎಂದಿದೆ. 

ಲೇಔಟ್ ಯೋಜನೆಯನ್ನು ಮಂಜೂರು ಮಾಡುವಾಗ ಸಕ್ಷಮ ಪ್ರಾಧಿಕಾರವು ಅಳವಡಿಸಿದ ಷರತ್ತು ಸಂಖ್ಯೆ 11ಕ್ಕೆ ಇದು ಬದ್ಧವಾಗಿದೆ. ಷರತ್ತು ಸಂಖ್ಯೆ 11ರ ಪ್ರಕಾರ, ರಸ್ತೆಗಳು ಮತ್ತು ಸಾರ್ವಜನಿಕ ಸೌಕರ್ಯಗಳನ್ನು ನಾಗರಿಕ ಸಂಸ್ಥೆಯ ಅಧಿಕಾರಿಗಳು ನಿರ್ವಹಿಸುತ್ತಾರೆ ಮತ್ತು ಇದು ಎಲ್ಲಾ ಸಾರ್ವಜನಿಕರಿಗೂ ಬಳಕೆಗೆ ಮುಕ್ತವಾಗಿರುತ್ತದೆ. ಹೀಗಾಗಿ, ಷರತ್ತು ಸಂಖ್ಯೆ 11 ರ ಪಾವಿತ್ರ್ಯತೆಯನ್ನು ಎತ್ತಿಹಿಡಿದಿರುವ ಹೈಕೋರ್ಟ್‌ನ ಹಿಂದಿನ ಆದೇಶವನ್ನು ಪೀಠವು ಉಲ್ಲೇಖಿಸಿದೆ.

ಲೇಔಟ್‌ನಲ್ಲಿರುವ ರಸ್ತೆಗಳು ಅದರ ನಿವಾಸಿಗಳಿಗೆ ಮಾತ್ರ ಮೀಸಲಾಗಿವೆ ಮತ್ತು ಆದ್ದರಿಂದ ಸಾರ್ವಜನಿಕರು ಇದನ್ನು ಬಳಸಲು ಹಕ್ಕಿಲ್ಲ ಎನ್ನುವ ಮೇಲ್ಮವಿದಾರರ ವಾದವನ್ನು ಲೇಔಟ್ ಯೋಜನೆಯನ್ನು ಅನುಮೋದಿಸುವಾಗ ಸಕ್ಷಮ ಪ್ರಾಧಿಕಾರ ನೀಡುವ ಷರತ್ತು-11ರ ಅನುಪಸ್ಥಿತಿಯಲ್ಲಿ ನಾವು ಪ್ರಶಂಸಿಸುತ್ತೇವೆ. ಆದರೆ, ಇದು ಹಾಗಲ್ಲ ಎಂದು ಪೀಠ ಹೇಳಿದೆ.

ಆದಾಗ್ಯೂ, ಷರತ್ತು 11 ಜಾರಿಯಲ್ಲಿದ್ದರೂ ಸಹ, ನಿವಾಸಿಗಳಿಗೆ ವಿಶೇಷ ರಿಯಾಯಿತಿಗಳನ್ನು ಕೋರಲು ಅವಕಾಶವಿದೆ. ನಿವಾಸಿಗಳು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬಹುದು ಅಥವಾ ಸಂಚಾರದ ಮೂಲಕ ರಸ್ತೆಗಳ ಬಳಕೆಯನ್ನು ನಿರ್ಬಂಧಿಸಲು ಅಥವಾ ನಿಯಂತ್ರಿಸಲು ವಿಶೇಷ ಅನುಮತಿಗಳನ್ನು ಪಡೆಯಬಹುದು. 

ಷರತ್ತು-11ರ ನಿಬಂಧನೆಗೆ ಒಳಪಟ್ಟು ರಸ್ತೆಗಳನ್ನು ಬಿಟ್ಟುಕೊಟ್ಟರೂ, ವಿಶೇಷ ರಿಯಾಯಿತಿಗಳನ್ನು ಪಡೆಯಲು ಕಾನೂನಿನಲ್ಲಿ ಯಾವುದೇ ಅಡೆತಡೆಯಿಲ್ಲ. ನಿವಾಸಿಗಳು ಕೆಲವು ರಸ್ತೆಗಳು ಮತ್ತು ಸಾರ್ವಜನಿಕ ಸೌಕರ್ಯದ ಸ್ಥಳಗಳ ಮೇಲಿನ ನಿಯಂತ್ರಣವನ್ನು ಬಿಟ್ಟುಕೊಟ್ಟಿದ್ದರೂ ಸಹ, ಸಾರ್ವಜನಿಕರು ಅಥವಾ ಹೊರಗಿನವರು ಈ ರಸ್ತೆಗಳನ್ನು ಸ್ವಯಂಚಾಲಿತವಾಗಿ ಬಳಸಲು ಸಾಧ್ಯವಿಲ್ಲ. ಅಂತಹ ಬಳಕೆಗೆ ವಿಶೇಷ ಅನುಮತಿ ಅಥವಾ ಸಂದರ್ಭಗಳ ಅಗತ್ಯವಿದೆ. ನಿರ್ದಿಷ್ಟ ಸನ್ನಿವೇಶಗಳು ಮತ್ತು ಕಾಳಜಿಗಳನ್ನು ಪರಿಹರಿಸಲು ಕಾನೂನಿನಲ್ಲಿ ಅವಕಾಶವಿದೆ ಪೀಠ ಹೇಳಿದೆ. 

ಆದರೆ, ಒಮ್ಮೆ ರಸ್ತೆಗಳನ್ನು ನಾಗರಿಕ ಸಂಸ್ಥೆಗಳಿಗೆ ಬಿಟ್ಟುಕೊಟ್ಟರೆ, ಅದರ ಮೇಲೆ ಮೂಲ ಮಾಲೀಕರಿಗೆ ಯಾವುದೇ ಹಕ್ಕಿರುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.

ಒಮ್ಮೆ ಭೂಸ್ವಾಧೀನಪಡಿಸಿಕೊಂಡರೆ, ಭೂ ಮಾಲೀಕರು ಅಥವಾ ಬಡಾವಣೆಯ ಡೆವಲಪರ್‌ಗೆ ಯಾವುದೇ ಹಕ್ಕು ಇರುವುದಿಲ್ಲ ಎಂಬುದನ್ನು ನಾವು ಸ್ಪಷ್ಟಪಡಿಸಬೇಕಾಗಿದೆ. ಇದಕ್ಕೂ ಮೊದಲು ಅವರು ಹಕ್ಕನ್ನು ಹೊಂದಿದ್ದರು ಎಂದು ಪೀಠ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com