ಕಾರ್‌ಪೂಲಿಂಗ್ ನಿಷೇಧವಿಲ್ಲ, ಆದರೆ ನಿಯಂತ್ರಿಸಲಾಗುವುದು: ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವ ಕಾರ್‌ಪೂಲಿಂಗ್ ಪರ ಮತ್ತು ವಿರುದ್ಧ ವ್ಯಾಪಕ ಚರ್ಚೆಗಳ ನಡುವೆಯೇ ಅದನ್ನು ನಿಷೇಧಿಸುವುದಿಲ್ಲ. ಬದಲಿಗೆ ನಿಯಂತ್ರಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ರಾಮಲಿಂಗಾ ರೆಡ್ಡಿ
ರಾಮಲಿಂಗಾ ರೆಡ್ಡಿ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವ ಕಾರ್‌ಪೂಲಿಂಗ್ ಪರ ಮತ್ತು ವಿರುದ್ಧ ವ್ಯಾಪಕ ಚರ್ಚೆಗಳ ನಡುವೆಯೇ ಅದನ್ನು ನಿಷೇಧಿಸುವುದಿಲ್ಲ. ಬದಲಿಗೆ ನಿಯಂತ್ರಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಮಂಗಳವಾರ ಆ್ಯಪ್ ಆಧಾರಿತ ಕಾರ್ಪೂಲಿಂಗ್ ಕಂಪನಿಗಳ ಪ್ರತಿನಿಧಿಗಳೊಂದಿಗೆ ಸಾರಿಗೆ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್‌ಪೂಲಿಂಗ್ ಅನ್ನು ನಿಷೇಧಿಸುವುದಿಲ್ಲ, ಆದರೆ ನಿಯಂತ್ರಿಸಲಾಗುವುದು. ಈ ಸಂಬಂಧ  ರಾಜ್ಯ ಸಾರಿಗೆ ಇಲಾಖೆ 10 ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದರು.

ಈ ಬಗ್ಗೆ TNIE ಯೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ, “ರಾಜ್ಯ ಸರ್ಕಾರವು ಕಾರ್‌ಪೂಲಿಂಗ್‌ಗೆ ಒಲವು ತೋರುತ್ತಿದೆ. ಏಕೆಂದರೆ ಇದು ಟ್ರಾಫಿಕ್ ಅನ್ನು ನಿಗ್ರಹಿಸಲು, ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ಜನರಿಗೆ ಕಡಿಮೆ ವೆಚ್ಚದಲ್ಲಿ ಪ್ರಯಾಣಿಸಲು ಇದು ಅನುವು ಮಾಡಿಕೊಡುತ್ತದೆ. ನಾವು ಕಾರ್ ಪೂಲಿಂಗ್ ಮೇಲೆ ನಿಷೇಧ ಹೇರಿಲ್ಲ. ಆದಾಗ್ಯೂ, ವೈಟ್‌ಬೋರ್ಡ್‌ಗಳನ್ನು ಹೊಂದಿರುವ ವಾಣಿಜ್ಯೇತರ ವಾಹನಗಳನ್ನು ಬಳಸಲಾಗುವುದಿಲ್ಲವಾದ್ದರಿಂದ ಕಾರ್‌ಪೂಲಿಂಗ್ ವ್ಯವಸ್ಥೆಗೆ ನಿಯಂತ್ರಣದ ಅಗತ್ಯವಿದೆ ಎಂದು ಹೇಳಿದರು.

‘ಕಾರ್ಪೂಲಿಂಗ್‌ಗಾಗಿ ನಿಯಮ ರೂಪಿಸಬೇಕು’: ತೇಜಸ್ವಿ ಸೂರ್ಯ
“ರಾಜ್ಯದ ಸಾರಿಗೆ ಇಲಾಖೆಯು ‘ಕಾರ್ ಪೂಲಿಂಗ್’ ಮತ್ತು ‘ರೈಡ್ ಸ್ಪ್ಲಿಟಿಂಗ್’ ನಡುವೆ ಗೊಂದಲಕ್ಕೊಳಗಾಗಿದೆ. ಖಾಸಗಿ ವೈಟ್‌ಬೋರ್ಡ್ ವಾಹನದ ಮಾಲೀಕರು ತಮ್ಮ ಆಯ್ಕೆಯ ಗಮ್ಯಸ್ಥಾನಕ್ಕೆ ಹೋದಾಗ ಮತ್ತು ಅದೇ ಮಾರ್ಗದಲ್ಲಿ ಕೆಲವು ಸಹ-ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಾರೆ. ಸಹ ಪ್ರಯಾಣಿಕರು ಪ್ರಯಾಣ ವೆಚ್ಚವನ್ನು ಹಂಚಿಕೊಳ್ಳುತ್ತಾರೆ ಇದನ್ನೇ ಕಾರ್‌ಪೂಲಿಂಗ್ ಎಂದು ಕರೆಯಲಾಗುತ್ತದೆ. ಆದರೆ ಇದರಿಂದ ಚಾಲಕ ಅಥವಾ ಮಾಲೀಕರು ಯಾವುದೇ ಲಾಭವನ್ನು ಗಳಿಸುವುದಿಲ್ಲ. ಆದರೆ ಪ್ರಯಾಣದ ವೆಚ್ಚವನ್ನು ಪ್ರಯಾಣಿಕರ ನಡುವೆ ಹಂಚಿಕೊಳ್ಳುತ್ತಾರೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

"ಉಬರ್ ಪೂಲ್ ಮತ್ತು ಓಲಾ ಶೇರ್‌ನಂತಹ ಖಾಸಗಿ ಅಗ್ರಿಗೇಟರ್‌ಗಳು ಮಾಡುತ್ತಿರುವ ರೈಡ್-ಸ್ಪ್ಲಿಟಿಂಗ್‌ನಲ್ಲಿ, ನಿರ್ದಿಷ್ಟ ಮಾರ್ಗವನ್ನು ತೆಗೆದುಕೊಳ್ಳುವ ಪ್ರಯಾಣಿಕರನ್ನು ಆಯ್ಕೆ ಮಾಡಲಾಗುತ್ತದೆ ಮತ್ತು ಸವಾರಿಯ ವೆಚ್ಚವನ್ನು ಹಂಚಿಕೊಳ್ಳಲಾಗುತ್ತದೆ. ಇದು ಹಳದಿ ಬೋರ್ಡ್ ಟ್ಯಾಕ್ಸಿ ನಡೆಸುವ ಬಾಡಿಗೆ ಚಾಲಕರಿಂದ ಲಾಭಕ್ಕಾಗಿ ತೆಗೆದುಕೊಳ್ಳುವ ಚಟುವಟಿಕೆಯಾಗಿದೆ ಎಂದು ಅವರು ಹೇಳಿದರು. ಸರ್ಕಾರವು ನಿಯಮಾವಳಿಗಳನ್ನು ರೂಪಿಸಬೇಕು ಮತ್ತು ಕಾರ್‌ಪೂಲಿಂಗ್ ಅನ್ನು ನಿಷೇಧಿಸಬಾರದು. ಬೆಂಗಳೂರು ತನ್ನ ದಟ್ಟಣೆಯನ್ನು ನಿರ್ವಹಿಸಲು ಹೆಣಗಾಡುತ್ತಿದೆ ಮತ್ತು ಸಾರ್ವಜನಿಕ ಸಾರಿಗೆಯ ಮೂಲಕ ಚಲನಶೀಲತೆಯನ್ನು ಒದಗಿಸುವುದು ಸರ್ಕಾರದ ನೀತಿ ಉದ್ದೇಶವಾಗಿರಬೇಕೇ ಹೊರತು ವಾಹನಗಳನ್ನು ನಿಯಂತ್ರಿಸುವುದಲ್ಲ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com