ಬ್ರ್ಯಾಂಡ್ ಬೆಂಗಳೂರು ನಿರ್ಮಾಣ ಕಾರ್ಯ ಶೀಘ್ರದಲ್ಲೇ ಪ್ರಾರಂಭ: ಡಿಕೆ.ಶಿವಕುಮಾರ್

ಬ್ರ್ಯಾಂಡ್ ಬೆಂಗಳೂರು’ಗೆ ಸಂಬಂಧಿಸಿದಂತೆ ಸುಮಾರು 70,000 ಸಲಹೆಗಳು ಬಂದಿದ್ದು, ಸಭೆ ಬಳಿಕ ನಿರ್ಮಾಣ ಕೆಲಸಗಳನ್ನು ಪ್ರಾರಂಭಿಸಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಮತ್ತು ನಗರ ಯೋಜನಾ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಗುರುವಾರ ಹೇಳಿದರು.
ಡಿಕೆ.ಶಿವಕುಮಾರ್
ಡಿಕೆ.ಶಿವಕುಮಾರ್

ಬೆಂಗಳೂರು: ಬ್ರ್ಯಾಂಡ್ ಬೆಂಗಳೂರುಗೆ ಸಂಬಂಧಿಸಿದಂತೆ ಸುಮಾರು 70,000 ಸಲಹೆಗಳು ಬಂದಿದ್ದು, ಸಭೆ ಬಳಿಕ ನಿರ್ಮಾಣ ಕೆಲಸಗಳನ್ನು ಪ್ರಾರಂಭಿಸಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಮತ್ತು ನಗರ ಯೋಜನಾ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಗುರುವಾರ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ಟೋಬರ್ 9 ರಂದು ದೊಡ್ಡ ಪ್ರಮಾಣಲ್ಲಿ ಸಭೆ ನಡೆಯಲಿದ್ದು, ಬಳಿಕ ನಿರ್ಮಾಣ ಕಾರ್ಯಗಳು ಪ್ರಾರಂಭಗೊಳ್ಳಲಿವೆ ಎಂದು ಹೇಳಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಎಂಜಿನಿಯರ್‌ಗಳು ಟ್ರಾಫಿಕ್ ಪೊಲೀಸರ ನೆರವಿನೊಂದಿಗೆ ಗುಂಡಿಗಳನ್ನು ತ್ವರಿತವಾಗಿ ಸರಿಪಡಿಸುವುದು, ರಸ್ತೆ ಗುಂಡಿಗಳಿಂದ ಯಾವುದೇ ಅಪಘಾತವಾಗದಂತೆ ಕ್ರಮ ವಹಿಸುವುದು, ರಸ್ತೆ ಗುಂಡಿಗಳ ಕುರಿತು ಸಾರ್ವಜನಿಕರು ಬಿಬಿಎಂಪಿ ಆಯುಕ್ತರಿಗೂ ಮಾಹಿತಿ ನೀಡಬಹುದು ಎಂದು ತಿಳಿಸಿದರು.

ಇನ್ನು ಕೆಲವೇ ದಿನಗಳಲ್ಲಿ ಮಳೆ ಆರಂಭವಾಗಲಿದ್ದು, ಮಳೆ ನೀರು ಚರಂಡಿ ಕಟ್ಟಿಕೊಂಡು ಕೊಳಚೆ ನೀರು ನಿಲ್ಲುವ ಸಮಸ್ಯೆ ಬಗೆಹರಿಸಲು ಎಲ್ಲಾ ಎಂಜಿನಿಯರ್‌ಗಳು ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ನವೆಂಬರ್ 30ರೊಳಗೆ ಎಲ್ಲಾ ರಸ್ತೆ ಗುಂಡಿಗಳ ಮುಚ್ಚಿಸುವಂತೆಯೂ ಸೂಚಿಸಲಾಗಿದೆ.

ಸರಕಾರ ಪ್ರತಿ ಕಿ.ಮೀ.ಗೆ 10 ಕೋಟಿ ವೆಚ್ಚದಲ್ಲಿ 350 ಕಿ.ಮೀ ಉದ್ದದ ಟೆಂಡರ್‌ಶುರ್ ರಸ್ತೆಗಳನ್ನು ನಿರ್ಮಿಸಿದೆ. ಆದರೆ, ಈ ರಸ್ತೆಯಲ್ಲಿ ಭೂಗತ ಕೇಬಲ್‌ಗಳ ಹಾಕಲು ಅವಕಾಶವಿದ್ದಲು ಅವುಗಳನ್ನು ಬಳಕೆ ಮಾಡಲಾಗುತ್ತಿಲ್ಲ. ಇದನ್ನು ಪ್ರತಿಯೊಬ್ಬರೂ ಬಳಸಿಕೊಳ್ಳಬೇಕು. ಇವುಗಳನ್ನು ಕಾನೂನು ಬದ್ಧವಾಗಿ ಬಳಕೆ ಮಾಡದಿದ್ದರೆ, ಅಧಿಕಾರಿಗಳು ಕೇಬಲ್ ಗಳನ್ನು ಕತ್ತರಿಸುತ್ತಾರೆಂದು ಎಚ್ಚರಿಕೆ  ನೀಡಿದ್ದಾರೆ.

ಇದೇ ವೇಳೆ ವಿಪತ್ತು ನಿರ್ವಹಣೆ ಹಾಗೂ ನಗರ ಪ್ರವಾಹ ತಡೆಗೆ ವಿಶ್ವಬ್ಯಾಂಕ್ ಗೆ 3 ಸಾವಿರ ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮೂಲಸೌಕರ್ಯಗಳ ಪೂರ್ಣಗೊಳಿಸಲು ಸರ್ಕಾರ ಸಿದ್ಧವಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ 250 ಕೋಟಿ ರೂಪಾಯಿಗಳ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದರು.

ಹೊರವರ್ತುಲ ರಸ್ತೆಯಲ್ಲಿ ಇತ್ತೀಚೆಗೆ ಟ್ರಾಫಿಕ್ ಸಮಸ್ಯೆ ಎದುರಾಗಿ ಟೀಕೆಗಳು ವ್ಯಕ್ತವಾಗಿದ್ದ ಕುರಿತು ಪ್ರತಿಕ್ರಿಯೆ ನೀಡಿ, ಯೋಜನಾ ಆಯೋಗ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಹೇಳಿದರು.

ಸ್ಯಾಟಲೈಟ್ ಸಿಟಿ ನಿರ್ಮಾಣದ ಕುರಿತು ಮಾತನಾಡಿ, ಆದ್ಯತೆ ಮೇರೆಗೆ ಪ್ರಸ್ತುತ ಬಿಡದಿಯಲ್ಲಿ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಈ ಕುರಿತು ಶಾಸಕರು ಹಾಗೂ ಸಂಸದರೊಂದಿಗೆ ಚರ್ಚಿಸಿದ್ದೇವೆಂದು ಸ್ಪಷ್ಟಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com