ಕಾವೇರಿ ನೀರಿನ ಸಮಸ್ಯೆಯನ್ನು ಐತಿಹಾಸಿಕ ದೃಷ್ಟಿಯಲ್ಲಿ ನೋಡಬೇಕು: ಐಪಿಎಸ್ ಅಧಿಕಾರಿ ಸಿ ಚಂದ್ರಶೇಖರ್

ಕಾವೇರಿ ವಿವಾದ ಸಂಬಂಧ 2018ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪು ಹಲವು ಸಂದರ್ಭಗಳಲ್ಲಿ ಪರಿಹಾರವನ್ನು ಒದಗಿಸಿಲ್ಲ. ಪ್ರಮುಖವಾಗಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಕೊರತೆ ಎದುರಾದ ಸಮಯದಲ್ಲಿ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹಂಚಿಕೆ ಮಾಡುವ ಕುರಿತು ಹಲವು ಪ್ರಶ್ನೆಗಳಿದ್ದು, ಈ ನಿಟ್ಟಿನಲ್ಲಿ ಚಿಂತನೆಗಳನ್ನು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕಾವೇರಿ ವಿವಾದ ಸಂಬಂಧ 2018ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪು ಹಲವು ಸಂದರ್ಭಗಳಲ್ಲಿ ಪರಿಹಾರವನ್ನು ಒದಗಿಸಿಲ್ಲ. ಪ್ರಮುಖವಾಗಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಕೊರತೆ ಎದುರಾದ ಸಮಯದಲ್ಲಿ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹಂಚಿಕೆ ಮಾಡುವ ಕುರಿತು ಹಲವು ಪ್ರಶ್ನೆಗಳಿದ್ದು, ಈ ನಿಟ್ಟಿನಲ್ಲಿ ಚಿಂತನೆಗಳನ್ನು ನಡೆಸಬೇಕಿದೆ ಎಂದು ಮಾಜಿ ಐಪಿಎಸ್ ಅಧಿಕಾರಿ ಸಿ ಚಂದ್ರಶೇಖರ್ ಅವರು ಹೇಳಿದ್ದಾರೆ.

ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ (ಬಿ.ಪಿ.ಎ.ಸಿ.) ಶುಕ್ರವಾರ ನಗರದಲ್ಲಿ ಆಯೋಜಿಸಿದ್ದ ‘ಕಾವೇರಿ ವಿವಾದ ಕುರಿತ ಟ್ರೈಯಲ್ ಆ್ಯಂಡ್ ಟ್ರಿಬ್ಯೂಲೈಸೇಷನ್ ಕುರಿತ ಸಂವಾದಲ್ಲಿ ಚಂದ್ರಶೇಖರ್ ಅವರು ಮಾತನಾಡಿದರು.

ಸಂವಾದದಲ್ಲಿ ಕನ್ನಡ ಒಕ್ಕೂಟದ ಮುಖಂಡರು, ಕಾನೂನು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹಾಜರಿದ್ದರು. ಸಂವಾದವು ಕಾವೇರಿ ವಿವಾದವನ್ನು ಸರ್ಕಾರ ಐತಿಹಾಸಿಕ ದೃಷ್ಟಿಯಿಂದ ನೋಡಬೇಕಿದ್ದು, ಪರಿಹಾರ ಕಂಡುಕೊಳ್ಳುವ ಮಹತ್ವವನ್ನು ಒತ್ತಿಹೇಳಿತು.

ಸರ್ಕಾರದ ಮಾಜಿ ಅಧಿಕಾರಿ ಕೆ ಜೈರಾಜ್ ಅವರು ಮಾತನಾಡಿ, ಕುಡಿಯುವ ಮತ್ತು ನೀರಾವರಿ ಎರಡಕ್ಕೂ ಕಾವೇರಿ ನೀರಿನ ಮಹತ್ವವನ್ನು ಒತ್ತಿ ಹೇಳಿದರು, ಸಮಸ್ಯೆಯನ್ನು ಪರಿಹರಿಸಲು ಸರ್ಕಾರದ ಪ್ರಯತ್ನಗಳನ್ನು ಎತ್ತಿ ತೋರಿಸಿದರು. ಕಾವೇರಿ ವಿವಾದದಲ್ಲಿ ಕರ್ನಾಟಕದ ಹಿತಾಸಕ್ತಿಗಳನ್ನು ಪ್ರತಿಪಾದಿಸಲು ಮತ್ತು ರಾಜ್ಯಕ್ಕೆ ನ್ಯಾಯವನ್ನು ಪಡೆಯಲು ಬಲವಾದ ಕಾನೂನು ನಿಲುವಿನ ಅಗತ್ಯವನ್ನೂ ಅವರು ಒತ್ತಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com