ತೆಲಂಗಾಣ ಚುನಾವಣೆಗಾಗಿ ಕರ್ನಾಟಕದಲ್ಲಿ ಹಣ ಸಂಗ್ರಹ: ಕಾಂಗ್ರೆಸ್ ವಿರುದ್ಧ ಬಿಆರ್‌ಎಸ್ ಆರೋಪ

ದೇಶದಲ್ಲಿ ಪಂಚರಾಜ್ಯಗಳಾದ ರಾಜಸ್ತಾನ, ಮಧ್ಯಪ್ರದೇಶ, ತೆಲಂಗಾಣ, ಛತ್ತೀಸ್‌ಗಢ, ಮಿಜೋರಾಂನಲ್ಲಿ ಚುನಾವಣೆ ಘೋಷಣೆ ಆಗಿದ್ದು, ಚುನಾವಣ ಹಿನ್ನೆಲೆಯಲ್ಲಿ ರಾಜ್ಯದಿಂದ ಹಣ ಸಂಗ್ರಹ ಮಾಡುವ ಕೆಲಸ ನಡೆಯುತ್ತಿದೆಯೇ..? ಎಂಬ ಅನುಮಾನಗಳು ಮೂಡತೊಡಗಿವೆ.
ತೆಲಂಗಾಣ ರಾಜ್ಯ ಹಣಕಾಸು ಸಚಿವ ಟಿ.ಹರೀಶ್ ರಾವ್
ತೆಲಂಗಾಣ ರಾಜ್ಯ ಹಣಕಾಸು ಸಚಿವ ಟಿ.ಹರೀಶ್ ರಾವ್

ಹೈದರಾಬಾದ್: ದೇಶದಲ್ಲಿ ಪಂಚರಾಜ್ಯಗಳಾದ ರಾಜಸ್ತಾನ, ಮಧ್ಯಪ್ರದೇಶ, ತೆಲಂಗಾಣ, ಛತ್ತೀಸ್‌ಗಢ, ಮಿಜೋರಾಂನಲ್ಲಿ ಚುನಾವಣೆ ಘೋಷಣೆ ಆಗಿದ್ದು, ಚುನಾವಣ ಹಿನ್ನೆಲೆಯಲ್ಲಿ ರಾಜ್ಯದಿಂದ ಹಣ ಸಂಗ್ರಹ ಮಾಡುವ ಕೆಲಸ ನಡೆಯುತ್ತಿದೆಯೇ..? ಎಂಬ ಅನುಮಾನಗಳು ಮೂಡತೊಡಗಿವೆ.

ಚುನಾವಣೆ ಘೋಷಣೆ ಆದ ಬೆನ್ನಲ್ಲೇ ರಾಜ್ಯದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದು, ಚಿನ್ನದ ವ್ಯಾಪಾರಿಗಳು, ಬಿಲ್ಡರ್‌‌ಗಳು ಹಾಗು ಉದ್ಯಮಿಗಳನ್ನು ಗುರಿಯಾಗಿಸಿ ದಾಳಿ ಮಾಡಲಾಗುತ್ತಿದೆ.

ಸುಮಾರು 200ಕ್ಕೂ ಅಧಿಕಾರಿಗಳ ತಂಡ ಬೆಂಗಳೂರಿನಲ್ಲಿ ಶೋಧ ಕಾರ್ಯ ನಡೆಸಿದ್ದು, ಸುಮಾರು 15 ಸ್ಥಳಗಳಲ್ಲಿ ದಾಖಲೆ ಪತ್ರಗಳ ಪರಿಶೀಲನೆ ನಡೆಸಿದ್ದಾರೆ. ಸಾಕಷ್ಟು ಉದ್ಯಮಿಗಳಿಂದ ಹಣ ವರ್ಗಾವಣೆ ಆಗಿರುವ ಮಾಹಿತಿ ಸಿಕ್ಕಿದೆ ಎನ್ನುವ ಮಾಹಿತಿ ಹೊರ ಬಿದ್ದಿದ್ದು, ಪಂಚ ರಾಜ್ಯಗಳ ಚುನಾವಣೆಗೆ ಫಂಡಿಗ್‌ ಆಗಿರುವ ಶಂಕೆ ವ್ಯಕ್ತವಾಗಿದೆ. ದಾಳಿ ವೇಳೆ 42 ಕೋಟಿ ರುಪಾಯಿ ನಗದು ಪತ್ತೆಯಾಗಿದೆ ಎಂದು ವರದಿಗಳು ತಿಳಿಸಿವೆ.

ಈ ಬೆಳವಣಿಗೆ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ತೆಲಂಗಾಣ ರಾಜ್ಯ ಹಣಕಾಸು ಸಚಿವ ಟಿ.ಹರೀಶ್ ರಾವ್ ಅವರು, ಚುನಾವಣೆ ಹತ್ತಿ ಬರುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಿಲ್ಡರ್ ಗಳು ಹಾಗೂ ಚಿನ್ನಾಭರಣ ವ್ಯಾಪಾರಿಗಳಿಂದ ಕಮಿಷನ್ ಪಡೆದು, ಕಾಂಗ್ರೆಸ್ ಹಣ ಸಂಗ್ರಹಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಕರ್ನಾಟಕದಿಂದ ಬಂದಿರುವ ಅಕ್ರಮ ಹಣದಿಂದ ತೆಲಂಗಾಣದ ಮತದಾರರ ಮೇಲೆ ಪ್ರಭಾವ ಬೀರಲು ಕಾಂಗ್ರೆಸ್ ಬಯಸುತ್ತಿದೆ. ಈ ಹಿಂದೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಗುತ್ತಿಗೆದಾರರಿಂದ ಶೇ.40ರಷ್ಟು ಕಮಿಷನ್ ಪಡೆಯುತ್ತಿತ್ತು ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಕಮಿಷನ್ ಶೇ.50ಕ್ಕೆ ಏರಿದೆ ಎಂದು ಆರೋಪಿಸಿದ್ದಾರೆ.

ಈ ನಡುವ ಕರ್ನಾಟಕದಲ್ಲಿನ ಸಾಧನೆಯು ತೆಲಂಗಾಣದಲ್ಲಿಯೂ ಪುನರಾವರ್ತನೆಗೊಳ್ಳಲಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ ಎಂದು ಕಾಂಗ್ರೆಸ್ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 119 ಸದಸ್ಯ ಬಲದ ತೆಲಂಗಾಣ ವಿಧಾನಸಭೆಗೆ ನವೆಂಬರ್ 30 ರಂದು ಚುನಾವಣೆ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com