ಮಹಿಳಾ ಪಿಎಸ್ಐಗೆ ಕಚ್ಚಿ, ಎಎಸ್ಐ ಮೇಲೆ ಚಪ್ಪಲಿ ಎಸೆದ ಮಹಿಳೆ: ಪ್ರಕರಣ ದಾಖಲು

ಮಾಲ್ ನಲ್ಲಿ ಹೈಡ್ರಾಮಾ ಸೃಷ್ಟಿಸಿ, ಪೊಲೀಸರೊಂದಿಗೂ ದುರ್ವರ್ತನೆ ತೋರಿದ ಮಹಿಳೆಯೊಬ್ಬರ ಮೇಲೆ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮಾಲ್ ನಲ್ಲಿ ಹೈಡ್ರಾಮಾ ಸೃಷ್ಟಿಸಿ, ಪೊಲೀಸರೊಂದಿಗೂ ದುರ್ವರ್ತನೆ ತೋರಿದ ಮಹಿಳೆಯೊಬ್ಬರ ಮೇಲೆ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆಯೊಬ್ಬರು ಬೆಳಗಿನ ಜಾವ 2.30ರ ಸುಮಾರಿಗೆ ನೆಕ್ಸಸ್ ಮಾಲ್ ನ 4ನೇ ಮಹಡಿಯಲ್ಲಿ ಅಡ್ಡಾಡುತ್ತಿದ್ದು. ಇದನ್ನು ಕಂಡ ಸಿಬ್ಬಂದಿಗಳೂ ಮಹಿಳೆಯನ್ನು ಅಲ್ಲಿಂದ ಹೊರಡುವಂತೆ ಮನವಿ ಮಾಡಿದರು, ಇದಕ್ಕೆ ಕೆಂಡಾಮಂಡಲಗೊಂಡ ಮಹಿಳೆ ಸಿಬ್ಬಂದಿಯನ್ನು ಬಾಯಿಗೆ ಬಂದಂತೆ ನಿಂದನೆ ಮಾಡಿದ್ದಾಳೆ. ಅಲ್ಲದೆ, ಸಿಬ್ಬಂದಿಗಳ ವಿರುದ್ಧ ಸುಳ್ಳು ಆರೋಪ ಮಾಡಿದ್ದಾಳೆ. ಇದನ್ನು ಕಂಡ ಮಾಲ್'ನ ವ್ಯವಸ್ಥಾಪಕರು ಸಹಾಯಕ್ಕಾಗಿ 112ಗೆ ಕರೆ ಮಾಡಿದ್ದಾರೆ.

ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು, ಮಹಿಳೆಯನ್ನು ಸ್ಥಳದಿಂದ ಹೋಗುವಂತೆ ತಿಳಿಸಿದ್ದಾರೆ. ಆದರೂ ಕೇಳದ ಮಹಿಳೆಯ ಪೊಲೀಸರನ್ನೇ ನಿಂದಿಸಿದ್ದಾಳೆ. ಈ ವೇಳೆ ಪೊಲೀಸರು ಆಕೆಯನ್ನು ಠಾಣೆಗೆ ಕರೆದೊಯ್ದಿದ್ದಾರೆ. ಠಾಣೆಯಲ್ಲಿ ಮಾಲ್ ಸಿಬ್ಬಂದಿ ವಿರುದ್ಧ ಆರೋಪಗಳಿದ್ದರೆ, ದೂರು ನೀಡುವಂತೆ ತಿಳಿಸಿದ್ದಾರೆ. ಈ ವೇಳೆ ಎಎಸ್ಐ ಮೇಲೆ ಚಪ್ಪಲಿ ಎಸೆದಿದ್ದಾಳೆ. ಬಳಿಕ ಠಾಣೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಳೆ. ಈವೇಳೆ ತಡೆಯಲು ಯತ್ನಿಸಿದ ಮಹಿಳಾ ಪಿಎಸ್ಐಗೂ ಕಚ್ಚಿದ್ದಾಳೆ. ಇದೀಗ ಮಹಿಳೆಯ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 324, 353ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ನೆಕ್ಸಸ್ ಮಾಲ್'ನ ಮ್ಯಾನೇಜರ್ ವಿಜಯ್ ಅವರು ಮಾತನಾಡಿ, ಮಹಿಳೆಯನ್ನು ಮಾಲ್ ನಿಂದ ಹೊರಗೆ ಹೋಗುವಂತೆ ಮನವಿ ಮಾಡಿಕೊಂಡಿದ್ದೆವು. ಆದರೆ, ಅವರು ಅಸಭ್ಯ ಭಾಷೆ ಬಳಸಿ ನಿಂದಿಸಿದ್ದರು. ಸಮಸ್ಯೆ ಸೃಷ್ಟಿಯಾಗುವುದು ನಮಗಿಷ್ಟವಿರಲಿಲ್ಲ. ಸಮಯ ಬೆಳಗಿನ 2.30 ಜಾವ ಆಗಿದ್ದರಿಂದ ಮಹಿಳೆಯನ್ನು ಮಾಲ್ ತೊರೆಯುವಂತೆ ತಿಳಿಸಿದ್ದೆವು. ಆದರೆ, ಅವರು ನಮ್ಮ ಮೇಲೆಯೇ ಸುಳ್ಳು ಆರೋಪ ಮಾಡಲು ಶುರು ಮಾಡಿದ್ದರು. ಹೀಗಾಗಿ ನಾವು ಪೊಲೀಸರನ್ನು ಕರೆಯಲೇಬೇಕಾಯಿತು ಎಂದು ಹೇಳಿದ್ದಾರೆ.

ಮಹಿಳೆ ಮತ್ತಿನಲ್ಲಿದ್ದದ್ದು ಮೇಲ್ನೋಟಕ್ಕೆ ತಿಳಿದುಬಂದಿದ್ದು, ವೈದ್ಯಕೀಯ ವರದಿ ಮಾತ್ರ ಅದನ್ನು ದೃಢಪಡಿಸಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com