
ಬೆಂಗಳೂರು: ನಗರದ ಖಾಸಗಿ ವಿಶ್ವವಿದ್ಯಾನಿಲಯದ 20 ವರ್ಷದ ಪದವಿ ವಿದ್ಯಾರ್ಥಿನಿಯೊಬ್ಬರಿಗೆ ಇತ್ತೀಚೆಗೆ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಚಾಲಕ ಲೈಂಗಿಕ ಕಿರುಕುಳ ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸೆಪ್ಟೆಂಬರ್ 30ರಂದು ಸಂಜೆ ಬ್ರಿಗೇಡ್ ರಸ್ತೆಯಲ್ಲಿರುವ ತನ್ನ ಸೋದರ ಸಂಬಂಧಿಯ ಇದ್ದ ಸ್ಥಳಕ್ಕೆ ತೆರಳಲು ರ‍್ಯಾಪಿಡೋ ಬೈಕ್ ಬುಕ್ ಮಾಡಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.
'ಆಜಾಸ್ ಅಹ್ಮದ್ ಎಂದು ಗುರುತಿಸಲಾದ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಇನ್ನೂ ಬಂಧಿಸಿಲ್ಲ' ತನಿಖೆಯ ಭಾಗವಾಗಿ ಅಧಿಕಾರಿಯೊಬ್ಬರು ಹೇಳಿದರು.
'ಚಾಲಕನು ಥಟ್ಟನೆ ಸಿಗ್ನಲ್ ಒಂದರಲ್ಲಿ ವಾಹನವನ್ನು ನಿಲ್ಲಿಸಿದನು. ಈ ವೇಳೆ ನನ್ನ ಕಾಲಿಗೆ ಏನೋ ಬಡಿದಂತಾಯಿತು. ಆದ್ದರಿಂದ ನಾನು ವೇಗವನ್ನು ಕಡಿಮೆ ಮಾಡಲು ವಿನಂತಿಸಿದೆ. ಅದಕ್ಕೆ ಪ್ರತಿಯಾಗಿ ಆತನ ಪಾದವನ್ನು ಮುಟ್ಟಿದರು. ಆರಂಭದಲ್ಲಿ ಕಾಳಜಿಯಿಂದ ಮುಟ್ಟಿರಬೇಕು ಎಂದುಕೊಂಡೆ. ನಂತರ, ಆತ ಲ್ಯಾಂಗ್‌ಫೋರ್ಡ್ ರಸ್ತೆ ಬಳಿ ಬಂದು ನನ್ನ ತೊಡೆಗಳನ್ನು ಮುಟ್ಟಿದ ಮತ್ತು ನನ್ನ ಹೆಸರನ್ನು ಕೇಳಿದ. ಉತ್ತರಿಸಲು ನನಗೆ ತುಂಬಾ ಹೆದರಿಕೆಯಾಯಿತು' ಎಂದು ಸಂತ್ರಸ್ತೆ ತಿಳಿಸಿದ್ದಾರೆ.
'ನಂತರ ಆತ ನನ್ನನ್ನು ದೂರದ ಮಾರ್ಗದ ಮೂಲಕ ಕರೆದೊಯ್ದು, ರೆಸಿಡೆನ್ಸಿ ರಸ್ತೆಯಲ್ಲಿ ಬಿಟ್ಟನು. ಅದು ನನ್ನ ಉದ್ದೇಶಿತ ಡ್ರಾಪ್-ಆಫ್ ಪಾಯಿಂಟ್ ಆಗಿರಲಿಲ್ಲ. ಆದರೆ, ನಾನು ಭಯಗೊಂಡಿದ್ದರಿಂದ ಕೆಳಗೆ ಇಳಿದೆ. ನಾನು ಆತನ ರ‍್ಯಾಪಿಡೋ QR ಕೋಡ್ ಅನ್ನು ಕೇಳಿದಾಗ, ಅವನು ನನ್ನ ಹೆಸರು ತಿಳಿದುಕೊಳ್ಳಲು ಬೇರೆ ಅಪ್ಲಿಕೇಶನ್ ಮೂಲಕ ಆತನಿಗೆ ಹಣ ಪಾವತಿಸಲು ಒತ್ತಾಯಿಸಿದನು. ನಾನು ಬ್ರಿಗೇಡ್ ರಸ್ತೆಯಲ್ಲಿರುವ ನನ್ನ ಸಹೋದರನ ಸ್ಥಳಕ್ಕೆ ನಡೆದುಕೊಂಡು ಹೋಗಬೇಕಾಯಿತು' ಎಂದು ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾರೆ.
'ನಾನು ಘಟನೆಯ ಬಗ್ಗೆ ನನ್ನ ಸಹೋದರನಿಗೆ ತಿಳಿಸಿದೆ. ನಾನು ಗೂಗಲ್ ಪೇ ವಹಿವಾಟಿನಲ್ಲಿ ಆತನ ನಂಬರ್ ಅನ್ನು ಹೊಂದಿದ್ದರಿಂದ, ನನ್ನ ಸಹೋದರ ಆತನಿಗೆ ಕರೆ ಮಾಡಿದರು' ಎಂದರು.
ಬಳಿಕ ಸಂತ್ರಸ್ತೆ ಮತ್ತು ಆಕೆಯ ಸಹೋದರ ಈ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸರಿಗೆ ದೂರು ನೀಡಿದ್ದು, ರ‍್ಯಾಪಿಡೋ ಬೈಕ್ ಸರ್ವೀಸ್ ಅನ್ನು ಸಂಪರ್ಕಿಸಿದ್ದಾರೆ. ಸದ್ಯ ಚಾಲಕನನ್ನು ಅಮಾನತು ಮಾಡಲಾಗಿದೆ ಎಂದು ವರದಿಯಾಗಿದೆ. ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣವನ್ನು ಅಶೋಕನಗರ ಪೊಲೀಸರಿಗೆ ವರ್ಗಾಯಿಸಿದ್ದಾರೆ. ಸಂತ್ರಸ್ತೆಯು ಬಿಹಾರದ ಪಾಟ್ನಾ ಮೂಲದವರಾಗಿದ್ದು, 2022ರ ಫೆಬ್ರುವರಿಯಿಂದ ಶಾಂತಿನಗರದ ಪಿಜಿಯಲ್ಲಿ ವಾಸಿಸುತ್ತಿದ್ದಾರೆ.
Advertisement