ಬೆಂಗಳೂರು: ವಿಜಯ ದಶಮಿ ಪ್ರಯುಕ್ತ ಪ್ರವಾಸಿಗರಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದ್ದು, ಈ ಬಾರಿಯ ವಿಜಯ ದಶಮಿಯಂದು (ಅಕ್ಟೋಬರ್ 24) ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನ ತೆರೆದಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಮಾನ್ಯವಾಗಿ ಪ್ರತಿ ಮಂಗಳವಾರ ಉದ್ಯಾನವನವನ್ನು ಮುಚ್ಚಲಾಗುತ್ತದೆ. ಆದರೆ, ಈಬಾರಿ ಮಂಗಳವಾರವೇ ವಿಜಯದಶಮಿ ಇರುವುದರಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನ (ಬಿಬಿಪಿ) ಅಕ್ಟೋಬರ್ 24ರಂದು ತೆರೆದಿರಲಿದೆ.
ಉದ್ಯಾನದ ಎಲ್ಲಾ ಘಟಕಗಳಾದ ಮೃಗಾಲಯ, ಸಫಾರಿ ಮತ್ತು ಬಟರ್‌ಫ್ಲೈ ಪಾರ್ಕ್‌ಗಳು ಸಾರ್ವಜನಿಕರಿಗೆ ತೆರೆದಿರುತ್ತವೆ ಎಂದು ಬಿಬಿಪಿ ಪ್ರಕಟಣೆಯಲ್ಲಿ ತಿಳಿಸಿದೆ.
Advertisement