ನಿಷೇಧಿತ ಸ್ಥಳಗಳಲ್ಲಿ ಧೂಮಪಾನ: 15 ದಿನಗಳಲ್ಲಿ 960 ಪ್ರಕರಣ ದಾಖಲು

ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿದವರ ವಿರುದ್ಧ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯಿದೆ, 2003 ಅಡಿಯಲ್ಲಿ 15 ದಿನಗಳಲ್ಲಿ 960 ಪ್ರಕರಣ ದಾಖಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿದವರ ವಿರುದ್ಧ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯಿದೆ, 2003 ಅಡಿಯಲ್ಲಿ 15 ದಿನಗಳಲ್ಲಿ 960 ಪ್ರಕರಣ ದಾಖಲಾಗಿದೆ.

ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಮಾತನಾಡಿ, ಧೂಮಪಾನದ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಪೊಲೀಸರು ಹೋಟೆಲ್‌ಗಳು, ಪಬ್‌ಗಳು, ಬಾರ್ ಮತ್ತು ರೆಸ್ಟೋರೆಂಟ್‌ಗಳು ಮತ್ತು ಸಿಗರೇಟ್ ಅಂಗಡಿಗಳಿಗೆ ಭೇಟಿ ನೀಡಿ ನಿಯಮಗಳನ್ನು ಅನುಸರಿಸುತ್ತಿದ್ದಾರೆಯೇ ಎಂದು ಪರಿಶೀಲನೆ ನಡೆಸುತ್ತಿದ್ದಾರೆ. ನಿಯಮ ಉಲ್ಲಂಘನೆಗಳ ಪರಿಶೀಲಿಸಲು ಸುಮಾರು 1,051 ಸ್ಥಳಗಳನ್ನು ಪರಿಶೀಲಿಸಿದ್ದಾರೆಂದು ಹೇಳಿದ್ದಾರೆ.

ಹಲವರಿಗೆ ಕಾಯ್ದೆ ಕುರಿತು ಮಾಹಿತಿ ಇಲ್ಲ ಎಂಬುದು ತಿಳಿದುಬಂದಿದೆ. ಹಲವೆಡೆ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ. ಹೀಗಾಗಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ನಿಯಮ ಉಲ್ಲಂಘನೆ ಮಾಡಿದವರು ದಂಡ ಪಾವತಿಸಬೇಕು. ಕೆಲವು ಉಲ್ಲಂಘನೆಗಳಿಗೆ ರಡು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಧೂಮಪಾನಿಗಳಿಂದ ಸಾರ್ವಜನಿಕರಿಗೆ, ಮಕ್ಕಳಿಗೆ ವೃದ್ಧರಿಗೆ ಸೇರಿದಂತೆ ಹಲವರಿಗೆ ತೊಂದರೆಯಾಗುತ್ತಿದೆ. ಪ್ರಮುಖವಾಗಿ ಬೀದಿ ಬದಿ ಇರುವ ಅಂಗಡಿಗಳಲ್ಲಿ ರಸ್ತೆಯಲ್ಲಿ  ಧೂಮಪಾನಿಗಳು ಹೊಗೆಯುಗುಳುತ್ತಿದ್ದರೆ, ಸಾರ್ವಜನಿಕರು ಮೂಗು ಮುಚ್ಚಿಕೊಳ್ಳಯವ ಸ್ಥತಿ ನಿರ್ಮಾಣವಾಗುತ್ತಿದೆ. ಹೀಗಾಗಿ ನಗರ ಪೊಲೀಸರು ಸಿಗರೇಟ್ ಆ್ಯಂಡ್ ಅಥರ್ ಟೊಬಾಕೋ ಪ್ರೋಡಕ್ಟ್ ಆಕ್ಟ್ ನ್ನು ನಗರ ಪಲೀಸರು ಬಿಗಿಗೊಳಿಸಿದ್ದು, ಒಟ್ಟು 1051  ಕಡೆ ಪರಿಶೀಲನೆ ನಡೆಸಿ, 960 ಪ್ರಕರಣಗಳನ್ನು ದಾಖಲಿಸಿದ್ದಾರೆ. 4698 ಕಡೆ ಧೂಮಪಾನಕ್ಕೆ ಸಂಬಂಧಿಸಿದಂತೆ ಪೋಸ್ಟರ್ ಗಳನ್ನ ಹಾಕಿದ್ದಾರೆಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com