ನಮ್ಮ ಮೆಟ್ರೋ ರೈಲಿನಲ್ಲಿ ಸ್ಟಂಟ್ಸ್ ಮಾಡಿದ ವಿದ್ಯಾರ್ಥಿಗಳಿಗೆ ದಂಡ ವಿಧಿಸಿದ ಅಧಿಕಾರಿಗಳು!

ಮೆಟ್ರೋ ರೈಲಿನೊಳಗೆ ಹ್ಯಾಂಡಲ್‌ ಹಿಡಿದು ಸ್ಟಂಟ್ ಮಾಡಿದ ವಿದ್ಯಾರ್ಥಿಗೆ ಬಿಎಂಆರ್‌ಸಿಎಲ್‌ ರೂ.500 ದಂಡ ವಿಧಿಸಿ, ಎಚ್ಚರಿಕೆ ನೀಡಿದೆ.
ಮೆಟ್ರೋ ರೈಲಿನಲ್ಲಿ ಸ್ಟಂಟ್ ಮಾಡುತ್ತಿರುವ ವಿದ್ಯಾರ್ಥಿಗಳು.
ಮೆಟ್ರೋ ರೈಲಿನಲ್ಲಿ ಸ್ಟಂಟ್ ಮಾಡುತ್ತಿರುವ ವಿದ್ಯಾರ್ಥಿಗಳು.

ಬೆಂಗಳೂರು: ಮೆಟ್ರೋ ರೈಲಿನೊಳಗೆ ಹ್ಯಾಂಡಲ್‌ ಹಿಡಿದು ಸ್ಟಂಟ್ ಮಾಡಿದ ವಿದ್ಯಾರ್ಥಿಗೆ ಬಿಎಂಆರ್‌ಸಿಎಲ್‌ ರೂ.500 ದಂಡ ವಿಧಿಸಿ, ಎಚ್ಚರಿಕೆ ನೀಡಿದೆ.

ಮೂವರು ವಿದ್ಯಾರ್ಥಿಗಳು ಖಾಸಗಿ ವಿಶ್ವವಿದ್ಯಾನಿಲಯದಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೂವರೂ ದಾಸರಹಳ್ಳಿಯಲ್ಲಿ ಮೆಟ್ರೋ ರೈಲು ಹತ್ತಿ ಯಲಚೇನಹಳ್ಳಿಗೆ ಹೋಗುತ್ತಿದ್ದರು. ಜೆ.ಪಿ.ನಗರ ನಿಲ್ದಾಣ ದಾಟಿ ಯಲಚೇನಹಳ್ಳಿಗೆ ತೆರಳುತ್ತಿದ್ದ ವೇಳೆ ಚಲಿಸುತ್ತಿದ್ದ ರೈಲಿನೊಳಗೆ ಸ್ಟಂಟ್ ಮಾಡಿದ್ದಾರೆ. ಸ್ಟಂಟ್ ವೇಳೆ ಹ್ಯಾಂಡಲ್‌ಬಾರ್‌ಗಳನ್ನು ಹಿಡಿದಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ಮಂಗಳವಾರ ರಾತ್ರಿ 11ರ ಸುಮಾರಿಗೆ ಹಸಿರು ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳು ಮೆಟ್ರೋದಲ್ಲಿನ ಹ್ಯಾಂಡಲ್‌ಗಳನ್ನು ಹಿಡಿದು ರೋಲಿಂಗ್‌ ಕಸರತ್ತು ಮಾಡಿದ್ದಾರೆ. ವಿದ್ಯಾರ್ಥಿಗಳ ಕಸರತ್ತನ್ನು ವಿಡಿಯೋ ಮಾಡಿದ ಮೆಟ್ರೋ ಸಿಬ್ಬಂದಿ ಅದನ್ನು ಯಲಚೇನಹಳ್ಳಿ ಭದ್ರತಾ ಸಿಬ್ಬಂದಿಗೆ ತೋರಿಸಿದ್ದಾರೆ.

ಅದೇ ನಿಲ್ದಾಣದಲ್ಲಿ ಸಿಬ್ಬಂದಿ ವಿದ್ಯಾರ್ಥಿಗಳನ್ನು ತಡೆದು ರೂ.500 ದಂಡ ವಿಧಿಸಿದ್ದಾರೆ. ಅಲ್ಲದೆ, ಮೆಟ್ರೋದಲ್ಲಿ ಈ ರೀತಿಯ ವರ್ತನೆ ತೋರದಂತೆ ಎಚ್ಚರಿಕೆ ಕೂಡ ನೀಡಿದ್ದಾರೆ.

ವಿಡಿಯೋದಲ್ಲಿ ಒಬ್ಬ ವಿದ್ಯಾರ್ಥಿ ಮೆಟ್ರೋ ರೈಲಿನ ಪರಿಕರಕ್ಕೆ ಹಾನಿ ಆಗುವಂತೆ ವರ್ತಿಸಿರುವುದು ಕಂಡು ಬಂದಿದೆ. ಹೀಗಾಗಿ ಆತನಿಗೆ ರೂ.500 ದಂಡ ವಿಧಿಸಲಾಗಿದೆ ಎಂದು ಬಿಎಂಆರ್‌ಸಿಎಲ್‌ ಕಾರ್ಯಾಚರಣೆ ಹಾಗೂ ನಿರ್ವಹಣೆ ವಿಭಾಗದ ಮುಖ್ಯಸ್ಥ ಶಂಕರ್‌ ತಿಳಿಸಿದ್ದಾರೆ.

ಹೊಡೆದಿದ್ದಾರೆ. ಅಂತಹ ಸಾಹಸಗಳಲ್ಲಿ ತೊಡಗಿದಾಗ ಅವರು ಮೇಲಿನ ಹ್ಯಾಂಡಲ್‌ಬಾರ್‌ಗಳನ್ನು ಹಿಡಿದಿದ್ದರು, ”ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com