ರಾಜ್ಯದಲ್ಲಿ ವಿದ್ಯುತ್ ಕ್ಷಾಮ: ಪರಿಸ್ಥಿತಿ ಎದುರಿಸಲು 'ಬ್ಲ್ಯೂ ಎನರ್ಜಿ' ಉತ್ಪಾದಿಸುವತ್ತ ರಾಜ್ಯ ಸರ್ಕಾರ ಚಿಂತನೆ!

ಬರದ ಬೆನ್ನಲ್ಲೇ ರಾಜ್ಯದಲ್ಲಿ ವಿದ್ಯುತ್ ಕ್ಷಾಮ ಕೂಡ ತಲೆದೋರಿದ್ದು, ಪರಿಸ್ಥಿತಿ ಎದುರಿಸಲು ರಾಜ್ಯ ಸರ್ಕಾರ ಬ್ಲ್ಯೂ ಎನರ್ಜಿಯತ್ತ ಮುಖ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬರದ ಬೆನ್ನಲ್ಲೇ ರಾಜ್ಯದಲ್ಲಿ ವಿದ್ಯುತ್ ಕ್ಷಾಮ ಕೂಡ ತಲೆದೋರಿದ್ದು, ಪರಿಸ್ಥಿತಿ ಎದುರಿಸಲು ರಾಜ್ಯ ಸರ್ಕಾರ ಬ್ಲ್ಯೂ ಎನರ್ಜಿಯತ್ತ ಮುಖ ಮಾಡಿದೆ.

ಬ್ಲ್ಯೂ ಎನರ್ಜಿ ಎಂದರೆ ಸಮುದ್ರದ ನೀರಿನಿಂದ ವಿದ್ಯುತ್ ಉತ್ಪಾದಿಸುವುದಾಗಿದೆ. ರಾಜ್ಯದಲ್ಲಿ ಇದೀಗ ವಿದ್ಯುತ್ ಅಭಾವ ಎದುರಾಗಿರುವ ಹಿನ್ನೆಲೆಯಲ್ಲಿ ಈ ಆಯ್ಕೆಯನ್ನು ರಾಜ್ಯ ಸರ್ಕಾರ ಪರಿಶೀಲನೆ ನಡೆಸುತ್ತಿದೆ.

ಈ ನಿಟ್ಟಿನಲ್ಲಿ ಇಂಧನ ಸಚಿವ  ಕೆಜೆ ಜಾರ್ಜ್ ಅವರು ನೆದರ್ಲ್ಯಾಂಡ್ಸ್ ಮೂಲದ ಕ್ಲೀನ್ ಎನರ್ಜಿ ಟೆಕ್ನಾಲಜಿ ಕಂಪನಿ ರೆಡ್‌ಸ್ಟಾಕ್‌ನ ಪ್ರತಿನಿಧಿಗಳು, ಅದರ ಅಧ್ಯಕ್ಷ ಪಿಜೆಎಫ್‌ಎಂ ಪೀಟರ್ ಹ್ಯಾಕ್ ಮತ್ತು ನಿರ್ದೇಶಕಿ ಗೀತಾ ಸಿಂಗ್ ಅವರೊಂದಿಗೆ ಸಭೆ ನಡೆಸಿದ್ದು, ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ.

ನೆದರ್‌ಲ್ಯಾಂಡ್‌ನ ತಂಡದೊಂದಿಗೆ ಸಭೆ ನಡೆಸಿದ್ದೇನೆ. ಅಲ್ಲಿ ಸಮುದ್ರದ ನೀರು ಬಳಸಿಕೊಂಡು ವಿದ್ಯುತ್ ಶಕ್ತಿ ಉತ್ಪಾದಿಸುತ್ತಿದ್ದಾರೆ. ಮಂಗಳೂರಿನ ಪ್ರಾಯೋಗಿಕ ಯೋಜನೆ ಕೈಗೊಳ್ಳಲು ಅನುಮತಿ ಕೋರಿದ್ದಾರೆ. ಮಂಗಳೂರಿಗೆ ಹೋಗಿ ಪರಿಶೀಲನೆ ನಡೆಸುವಂತೆ ತಿಳಿಸಲಾಗಿದೆ. ಈ ಕುರಿತು ಮುಖ್ಯಮಂತ್ರಿಗಳೊಂದಿಗೂ ಮಾತುರತೆ ನಡೆಸಲಾಗುವುದು ಎಂದು ಕೆಜೆ ಜಾರ್ಜ್ ಅವರು ಹೇಳಿದ್ದಾರೆ.

ಭಾರತದ ಯಾವುದೇ ರಾಜ್ಯವೂ ಈ ಆಯ್ಕೆ ಬಗ್ಗೆ ಚಿಂತನೆ ನಡೆಸಿಲ್ಲ. ಪ್ರಯತ್ನವನ್ನೂ ಮಾಡಿಲ್ಲ. ರಾಜ್ಯದಲ್ಲಿ ಅನೇಕ ನದಿಗಳಿವೆ. ಪ್ರಾಯೋಗಿಕ ಯೋಜನೆಗೆ ಕಂಪನಿಯೇ ಖರ್ಚುವೆಚ್ಚಗಳನ್ನು ನೋಡಿಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.

ಈ ನಡುವೆ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಗುರುವಾರ ಇಂಧನ ಇಲಾಖೆ ಹಿರಿಯ ಅಧಿಕಾರಿಗಳು ಮತ್ತು ಸೋಲಾರ್ ಪಂಪ್ (ಐಪಿ) ತಯಾರಕರೊಂದಿಗೆ ಸಭೆ ನಡೆಸಿದರು. ಈ ವೇಳೆ ಕೃಷಿಗೆ ಸೋಲಾರ್ ಐಪಿ ಸೆಟ್‌ಗಳ ಅಗತ್ಯ ಕುರಿತು ಚರ್ಚೆ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com