ನಗರದ ಶಿಕ್ಷಣ ಸಂಸ್ಥೆಯಿಂದ ವಕ್ಫ್ ಬೋರ್ಡ್'ಗೆ ಸೇರಿದ ಭೂಮಿ ದುರ್ಬಳಕೆ: ಸಾಮಾಜಿಕ ಕಾರ್ಯಕರ್ತ ಸೈಯದ್ ಅಶ್ರಫ್ ಆರೋಪ

ಶಾಹೀನ್ ಫಾಲ್ಕನ್ ಎಜುಕೇಶನ್ ಟ್ರಸ್ಟ್ ಮುಖ್ಯಸ್ಥ ಅಬ್ದುಲ್ ಮನ್ನಾನ್ ಸೇಠ್, ಅವರ ಪತ್ನಿ ಮತ್ತು ಪುತ್ರ ಅಬ್ದುಲ್ ಸುಭಾನ್ ವಕ್ಫ್ ಬೋರ್ಡ್'ಗೆ ಸೇರಿದ ಭೂಮಿಯನ್ನು ದುರ್ಬಳಕೆ ಮಾಡಿದ್ದಾರೆಂದು ಸಾಮಾಜಿಕ ಕಾರ್ಯಕರ್ತ ಸೈಯದ್ ಅಶ್ರಫ್ ಆರೋಪಿಸಿದ್ದು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಶಾಹೀನ್ ಫಾಲ್ಕನ್ ಎಜುಕೇಶನ್ ಟ್ರಸ್ಟ್ ಮುಖ್ಯಸ್ಥ ಅಬ್ದುಲ್ ಮನ್ನಾನ್ ಸೇಠ್, ಅವರ ಪತ್ನಿ ಮತ್ತು ಪುತ್ರ ಅಬ್ದುಲ್ ಸುಭಾನ್ ವಕ್ಫ್ ಬೋರ್ಡ್'ಗೆ ಸೇರಿದ ಭೂಮಿಯನ್ನು ದುರ್ಬಳಕೆ ಮಾಡಿದ್ದಾರೆಂದು ಸಾಮಾಜಿಕ ಕಾರ್ಯಕರ್ತ ಸೈಯದ್ ಅಶ್ರಫ್ ಆರೋಪಿಸಿದ್ದು, ಈ ಕುರಿತು ಸಿಐಡಿ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೀದರ್ ಜಿಲ್ಲೆಯ ಹಳದಕೇರಿ ಗ್ರಾಮದ ಸರ್ವೆ 85ರಲ್ಲಿ ಹಜರತ್ ಸೈಯದ್ ಶಾ ಅಲಿ ದರ್ಗಾ ಅವರಿಗೆ ಸೇರಿದ ಭೂಮಿಯನ್ನು ಈ ಶಿಕ್ಷಣ ಸಂಸ್ಥೆ ಅಕ್ರಮವಾಗಿ ನೋಂದಣಿ ಮಾಡಿಕೊಂಡಿದೆ. ಈ ಕುರಿತು ರಾಜ್ಯ ಸರ್ಕಾರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳನ್ನು ನಡೆಸುತ್ತಿರುವ ಶಾಹೀನ್ ಫಾಲ್ಕನ್ ಎಜುಕೇಶನ್ ಟ್ರಸ್ಟ್‌ಗೆ ವಕ್ಫ್ ಮಂಡಳಿಗೆ ಸೇರಿದ ಭೂಮಿಯನ್ನು ಅತ್ಯಂತ ಕಡಿಮೆ ಬಾಡಿಗೇಕೆ ನೀಡಲಾಗುತ್ತಿದೆ ಎಂದು ಇದೇ ವೇಳೆ ಪ್ರಶ್ನಿಸಿದರು.

ಈ ನಡುವೆ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಶಾಹೀನ್ ಫಾಲ್ಕನ್ ಎಜುಕೇಶನ್ ಟ್ರಸ್ಟ್‌ನ ಎಂಡಿ ಅಬ್ದುಲ್ ಸುಭಾನ್ ಅವರು, ಸಂಸ್ಥೆಯು ಯಾವುದೇ ತಪ್ಪು ಮಾಡಿಲ್ಲ. ಬೀದರ್‌ನಲ್ಲಿರುವ ಜಮೀನು ವಕ್ಫ್‌ ಮಂಡಳಿಗೆ ಸೇರಿದ್ದಲ್ಲ. 1976ರಲ್ಲಿ ಸಾಗುವಳಿದಾರರಾಗಿದ್ದ ದೇವಿದಾಸ್ ಎಂಬುವವರು ಭೂಮಿಯನ್ನು ನೀಡಿದ್ದರು. 2017 ರಲ್ಲಿ ದೇವಿದಾಸ್ ಅವರ ಮಗ ಪ್ರೇಮ್ ಕುಮಾರ್ ಅವರಿಂದ ಭೂಮಿಯನ್ನು ಖರೀದಿಸಿದ್ದೇವೆ, ಈ ಭೂಮಿ ವಕ್ಫ್ ಮಂಡಳಿಗೆ ಸೇರಿದ ಆಸ್ತಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com