Bengaluru air pollution: ದೆಹಲಿ ಹಾದಿಯಲ್ಲಿ ಬೆಂಗಳೂರು? ಗಾಳಿಯ ಗುಣಮಟ್ಟದಲ್ಲಿ ಕುಸಿತ; ಹವಾಮಾನ ವರದಿ

ವಾಯುಮಾಲಿನ್ಯ (Air Pollution)ದ ವಿಚಾರವಾಗಿ ಸದಾ ಸುದ್ದಿಯಲ್ಲಿರುವ ದೇಶದ ರಾಜಧಾನಿ ದೆಹಲಿ (Delhi) ಹಾದಿಯಲ್ಲೇ ಕರ್ನಾಟಕ (Karnataka) ರಾಜಧಾನಿ ಬೆಂಗಳೂರು ದಾಪುಗಾಲಿರಿಸುತ್ತಿದ್ದು, ಸಿಲಿಕಾನ್ ಸಿಟಿಯ ಗಾಳಿಯ ಗುಣಮಟ್ಟ (Air Quality Index) ಕಳಪೆ ಮಟ್ಟಕ್ಕೆ ಕುಸಿಯುತ್ತಿದೆ ಎಂದು ವರದಿಯೊಂದು ಹೇಳಿದೆ.
ಬೆಂಗಳೂರು ವಾಯು ಮಾಲಿನ್ಯ (ಸಂಗ್ರಹ ಚಿತ್ರ)
ಬೆಂಗಳೂರು ವಾಯು ಮಾಲಿನ್ಯ (ಸಂಗ್ರಹ ಚಿತ್ರ)

ಬೆಂಗಳೂರು: ವಾಯುಮಾಲಿನ್ಯ (Air Pollution)ದ ವಿಚಾರವಾಗಿ ಸದಾ ಸುದ್ದಿಯಲ್ಲಿರುವ ದೇಶದ ರಾಜಧಾನಿ ದೆಹಲಿ (Delhi) ಹಾದಿಯಲ್ಲೇ ಕರ್ನಾಟಕ (Karnataka) ರಾಜಧಾನಿ ಬೆಂಗಳೂರು ದಾಪುಗಾಲಿರಿಸುತ್ತಿದ್ದು, ಸಿಲಿಕಾನ್ ಸಿಟಿಯ ಗಾಳಿಯ ಗುಣಮಟ್ಟ (Air Quality Index) ಕಳಪೆ ಮಟ್ಟಕ್ಕೆ ಕುಸಿಯುತ್ತಿದೆ ಎಂದು ವರದಿಯೊಂದು ಹೇಳಿದೆ.

ಖಾಸಗಿ ಹವಾಮಾನ ಸಂಸ್ಥೆ ಆ್ಯಕ್ಯು ವೆದರ್ (Accu Weather) ಈ ಬಗ್ಗೆ ವರದಿ ಮಾಡಿದ್ದು, ಬೆಂಗಳೂರಿನ (Bengaluru) ಇಂದಿನ ಗಾಳಿಯ ಗುಣಮಟ್ಟ (Air Quality Index)ವನ್ನು ತಲುಪಿದೆ. ಇದು ಸೂಕ್ಷ್ಮ ಸಮುದಾಯದ ಜನರ ಗುಂಪುಗಳಿಗೆ ಅನಾರೋಗ್ಯಕರವಾಗಿದೆ. ಉಸಿರಾಟದ ತೊಂದರೆ ಅಥವಾ ಗಂಟಲಿನ ಕಿರಿಕಿರಿಯಂತಹ ರೋಗಲಕ್ಷಣಗಳನ್ನು ನೀವು ಅನುಭವಿಸುತ್ತಿದ್ದರೆ ಅನಾವಶ್ಯಕ ಹೊರಗಿನ ಓಡಾಟ ತಪ್ಪಿಸಿ ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ.

ಬೆಂಗಳೂರಿನ ಇಂದಿನ ವಾಯು ಗುಣಮಟ್ಟ PM 2.6 (Fine Particulate Matter) 75 ಆಗಿದ್ದು, PM 10 (Particulate Matter)ನ ಪ್ರಮಾಣ 51ರಷ್ಟಿದೆ. ಈ ಎರಡೂ ಅಂಶಗಳ ಪ್ರಮಾಣ ಕಳಪೆ ಎಂದು ಆ್ಯಕ್ಯುವೆದರ್ (Accu Weather) ವರದಿ ಮಾಡಿದೆ.

ಉಳಿದಂತೆ ನಗರದಲ್ಲಿನ ಗಾಳಿಯಲ್ಲಿನ ಎನ್ಒ2 (NO2-Nitrogen Dioxide) ಪ್ರಮಾಣ 23ರಷ್ಟಿದ್ದು, ಇದು ಉತ್ತಮ ಪ್ರಮಾಣದಲ್ಲಿದೆ. ಅಂತೆಯೇ ಓಜೋನ್ (O3-Ozone)ದ ಪ್ರಮಾಣ 13ರಷ್ಟಿದ್ದು, ಕಾರ್ಬನ್ ಮಾನಾಕ್ಸೈಡ್ (CO-Carbon Monoxide) 2ರಷ್ಟಿದ್ದು, ಈ ಎರಡೂ ಅಂಶಗಳ ಪ್ರಮಾಣ ಉತ್ತಮವಾಗಿದೆ ಎಂದು ಆ್ಯಕ್ಯು ವೆದರ್ ವರದಿ ಮಾಡಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com