ಅನ್ಯಭಾಷಿಕರು ಕನ್ನಡ ಕಲಿಯುವುದು ಈಗ ಇನ್ನಷ್ಟು ಸುಲಭ; ಆನ್‌ಲೈನ್ ಮೂಲಕವೇ ಉಚಿತ ತರಗತಿ!

ಇನ್ನೇನು ಕನ್ನಡ ರಾಜ್ಯೋತ್ಸವ (ನವೆಂಬರ್ 1) ಆಚರಣೆಗೆ ರಾಜ್ಯ ಸಜ್ಜಾಗುತ್ತಿರುವಾಗ, ನೀವು ಅನ್ಯಭಾಷಿಕರಾಗಿದ್ದು, ಉಚಿತವಾಗಿ ಕನ್ನಡ ಭಾಷೆಯನ್ನು ಕಲಿಯಲು ಇಚ್ಚಿಸುತ್ತಿದ್ದರೆ ಇದೀಗ ನಿಮ್ಮ ಆದ್ಯತೆಯ ಭಾಷೆಯ ಮೂಲಕವೇ ಕನ್ನಡ ಕಲಿಯಬಹುದು. 
ಕನ್ನಡ ಭಾಷೆ
ಕನ್ನಡ ಭಾಷೆ
Updated on

ಬೆಂಗಳೂರು: ಇನ್ನೇನು ಕನ್ನಡ ರಾಜ್ಯೋತ್ಸವ (ನವೆಂಬರ್ 1) ಆಚರಣೆಗೆ ರಾಜ್ಯ ಸಜ್ಜಾಗುತ್ತಿರುವಾಗ, ನೀವು ಅನ್ಯಭಾಷಿಕರಾಗಿದ್ದು, ಉಚಿತವಾಗಿ ಕನ್ನಡ ಭಾಷೆಯನ್ನು ಕಲಿಯಲು ಇಚ್ಚಿಸುತ್ತಿದ್ದರೆ ಇದೀಗ ನಿಮ್ಮ ಆದ್ಯತೆಯ ಭಾಷೆಯ ಮೂಲಕವೇ ಕನ್ನಡ ಕಲಿಯಬಹುದು. 

ಕನ್ನಡ ಆನ್‌ಲೈನ್ ಟ್ಯೂಷನ್ಸ್ ಮತ್ತು ಸರ್ಜಾಪುರ ರೆಸಿಡೆಂಟ್ ವೆಲ್‌ಫೇರ್ ಅಸೋಸಿಯೇಷನ್‌ನ ಉಪಕ್ರಮವಾದ ‘ಟಾಕ್ ಕನ್ನಡ ಬೋಲ್ಡ್‌ಲಿ’ (Talk Kannada Boldly) ಮೂಲಕ ಕನ್ನಡ ಕಲಿಯಬಹುದು. ಪ್ರಪಂಚದ ಯಾವುದೇ ಭಾಗದವರೂ ಇದಕ್ಕೆ ಉಚಿತವಾಗಿ ಪ್ರವೇಶ ಪಡೆಯಬಹುದಾಗಿದ್ದು, ಆನ್‌ಲೈನ್ ತರಗತಿಗಳನ್ನು ನಡೆಸಲಾಗುತ್ತದೆ. ಐದು ಚಾನಲ್‌ಗಳಲ್ಲಿ ಯಾವುದಕ್ಕಾದರೂ ಸೇರಿಕೊಳ್ಳಬಹುದು. ವೇದಿಕೆಯು ಕನ್ನಡ ಕಲಿಕೆಯನ್ನು ಪ್ರೋತ್ಸಾಹಿಸುತ್ತದೆ ಮತ್ತು ನಿಯಮಿತ ಬಳಕೆಗಾಗಿ ಭಾಷೆಯನ್ನು ಕಲಿಯಲು ಸಹಾಯ ಮಾಡುತ್ತದೆ.

ಕಾರ್ಯಕ್ರಮದ ಸಂಯೋಜಕ ಜಗದೀಶ ಕೊಟ್ಟೂರಶೆಟ್ಟರ ಮಾತನಾಡಿ, 'ಶಾಲೆಯಲ್ಲಿ ಕನ್ನಡ ಓದುವುದನ್ನು ಕಲಿತಿದ್ದರೂ, ತಪ್ಪು ಮಾಡುವ ಭಯದಿಂದ ಅನ್ಯಭಾಷಿಕರು ಕನ್ನಡದಲ್ಲಿ ಮಾತನಾಡಲು ಹಿಂಜರಿಯುತ್ತಾರೆ. ಶಾಲಾ ವಿದ್ಯಾರ್ಥಿಗಳು ಸಹ ಭಾಷೆಯನ್ನು ಓದಲು ಕಲಿಯುತ್ತಾರೆ. ಆದರೆ, ವಾಕ್ಯಗಳನ್ನು ರೂಪಿಸಲು ಬರುವುದಿಲ್ಲ. ಈ ಕಾರ್ಯಕ್ರಮದ ಸಹಾಯದಿಂದ ನಾವು ಇದನ್ನು ಬದಲಾಯಿಸಲು ಬಯಸಿದ್ದೇವೆ' ಎಂದರು.

ವೇದಿಕೆಯಲ್ಲಿರುವ ಅನುಭವಿ ಮಾಡರೇಟರ್‌ಗಳು ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಅಥವಾ ಮಲಯಾಳಂ ಸೇರಿ ಯಾವುದೇ ಇತರ ಭಾಷೆಗಳ ಮೂಲಕ ಕನ್ನಡವನ್ನು ಸುಲಭವಾಗಿ ಕಲಿಸುತ್ತಾರೆ. 

'ಮಾಡರೇಟರ್‌ಗಳು ಹೆಚ್ಚು ಅನುಭವ ಇರುವ ಶಿಕ್ಷಕರಾಗಿದ್ದು, ಕನ್ನಡ ಮತ್ತು ಆಯ್ದ ಭಾಷೆಗಳ ಮೇಲೆ ವಿಶೇಷ ಹಿಡಿತ ಹೊಂದಿದ್ದಾರೆ. ಆಟೋ ಚಾಲಕರು ಅಥವಾ ಸರ್ಕಾರಿ ಕಚೇರಿ ನೌಕರರೊಂದಿಗೆ ಸಂವಾದ ನಡೆಸಲು ಕಾರ್ಯಕ್ರಮವು ಸಹಾಯ ಮಾಡುತ್ತದೆ ಎಂದು ಕೊಟ್ಟೂರಶೆಟ್ಟರ್ ಹೇಳಿದರು. 

ನವೆಂಬರ್ 1 ರಂದು ಪ್ರಾರಂಭವಾದ ನಂತರ, ಪ್ರತಿ ಭಾನುವಾರ ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ಸೆಷನ್‌ಗಳನ್ನು ನಡೆಸಲಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ, kannadaonlinetuitions.com ಗೆ ಭೇಟಿ ನೀಡಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com