ಕ್ಯಾನ್ಸರ್ ಪೀಡಿತ ವ್ಯಕ್ತಿಗೆ ಒಂದೇ ದಿನದಲ್ಲಿ ಪಾಸ್‌ಪೋರ್ಟ್ ಒದಗಿಸಿದ ಆರ್‌ಪಿಒ ಅಧಿಕಾರಿಗಳು!

ತುರ್ತು ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಲು ಮುಂದಾಗಿದ್ದ ಕ್ಯಾನ್ಸರ್ ಪೀಡಿತ ನಿವೃತ್ತ ಸರ್ಕಾರಿ ನೌಕರರೊಬ್ಬರ ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ (ಆರ್‌ಪಿಒ)ಗಳು ನೆರವಿಗೆ ಬಂದಿದ್ದು, ಒಂದೇ ದಿನದಲ್ಲಿ ಪಾಸ್‌ಪೋರ್ಟ್ ದೊರೆಯುವಂತೆ ಮಾಡಿದ್ದಾರೆ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ತುರ್ತು ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಲು ಮುಂದಾಗಿದ್ದ ಕ್ಯಾನ್ಸರ್ ಪೀಡಿತ ನಿವೃತ್ತ ಸರ್ಕಾರಿ ನೌಕರರೊಬ್ಬರ ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ (ಆರ್‌ಪಿಒ)ಗಳು ನೆರವಿಗೆ ಬಂದಿದ್ದು, ಒಂದೇ ದಿನದಲ್ಲಿ ಪಾಸ್‌ಪೋರ್ಟ್ ದೊರೆಯುವಂತೆ ಮಾಡಿದ್ದಾರೆ.

ನಿವೃತ್ತ ಸರ್ಕಾರಿ ನೌಕರ ಅರುಣ್ ಕುಮಾರ್ ಶ್ರೀವಾಸ್ತವ್ (70) ಅವರು, ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳಲು ಪ್ರಯತ್ನಿಸುತ್ತಿದ್ದರು. ಈ ವಿಚಾರ ತಿಳಿದ ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿಗಳು, ತಡ ಮಾಡದೆ ಒಂದೇ ದಿನದಲ್ಲಿ ಪಾಸ್ಪೋರ್ಟ್ ಲಭಿಸುವಂತೆ ಮಾಡಿದ್ದಾರೆ.

ಬಹುತೇಕ ಪ್ರಕ್ರಿಯೆಗಳನ್ನು ಅಧಿಕಾರಿಗಳು ಪೂರ್ಣಗೊಳಿಸಿದ್ದು, ಕೇವಲ ಬಯೋಮೆಟ್ರಿಕ್ ಗಾಗಿ ಮಾತ್ರವೇ ಕೋರಮಂಗಲದಲ್ಲಿರುವ ಕೇಂದ್ರ ಕಚೇರಿಕೆ ಬರುವಂತೆ ತಿಳಿಸಿದ್ದಾರೆ. ಅಧಿಕಾರಿಗಳ ಸೂಚನೆ ಬೆನ್ನಲ್ಲೇ, ಕುಟುಂಬಸ್ಥರು ಶ್ರೀವಾಸ್ತವ್ ಅವರನ್ನು ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಒಂದೇ ದಿನದಲ್ಲಿ ಮನೆ ಬಾಗಿಲಿಗೆ ಪಾಸ್ ಪೋರ್ಟ್ ತಲುವಂತೆ ಮಾಡಿದ್ದಾರೆ.

ಅಧಿಕಾರಿಗಳ ಈ ಕೆಲಸಕ್ಕೆ ಅರುಣ್ ಕುಮಾರ್ ಶ್ರೀವಾಸ್ತವ್ ಅವರ ಪುತ್ರ ಹಾಗೂ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಮತ್ತು ಲೇಖಕರಾಗಿರುವ  ಕುಶ್ ಶ್ರೀವಾಸ್ತವ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಂದೆಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೆ, ಅವರ ದೇಹ ಉತ್ತಮ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿಲ್ಲ. ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಡುವ ಆತಂಕ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಾಗೆ ಕರೆದೊಯ್ಯಲು ಬಯಸಿದ್ದೆವು. ನನ್ನ ಸಹೋದರ ಅಮೆರಿಕಾದಲ್ಲಿಯೇ ಇದ್ದಾನೆ. ತಂದೆ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಪಾಸ್ಪೋರ್ಟ್ ಶೀಘ್ರಗತಿಯಲ್ಲಿ ಸಿಕ್ಕಿದರೆ, ವೀಸಾಕ್ಕೆ ಅರ್ಜಿ ಸಲ್ಲಿಸಲು ಸಹಾಯಕವಾಗುತ್ತದೆ ಎಂದು ಹೇಳಿದ್ದಾರೆ.

ಇದೇ ವೇಳೆ ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ ಕೆ ಕೃಷ್ಣ ಅವರನ್ನು ಶ್ರೀವಾಸ್ತವ ಅವರು ಶ್ಲಾಘಿಸಿದ್ದಾರೆ.

ಆಗಸ್ಟ್ 25 ರಂದು ತಮ್ಮ ತಂದೆಯ ಪರಿಸ್ಥಿತಿಯನ್ನು ವಿವರಿಸಿ ಮೇಲ್ ಕಳುಹಿಸಿದ್ದೆ. ಅರ್ಜಿ ತೆಗೆದುಕೊಂಡು ಸಾಮಾನ್ಯದಂತೆ ಕಚೇರಿಗೆ ಬರುವಂತೆ ಅವರು ಸೂಚಿಸಲಿಲ್ಲ. ತಂದೆಗೆ ಸೋಂಕು ತಗುಲುವ ಸಾಧ್ಯತೆಗಳು ಹೆಚ್ಚಿತ್ತು. ಹೀಗಾಗಿ ಸೋಮವಾರ ಅಥವಾ ಬುಧವಾರ ಬರುವಂತೆ ದೂರವಾಣಿ ಕರೆ ಮಾಡಿ ತಿಳಿಸಿದ್ದರು. 40 ನಿಮಿಷದಲ್ಲಿ ಪ್ರಕ್ರಿಯೆ ಪೂರ್ಣಗೊಂಡಿತು ಎಂದು ತಿಳಿಸಿದ್ದಾರೆ.

ಪಾಸ್ಪೋರ್ಟ್ ಕಚೇರಿಯ ಸಿಬ್ಬಂದಿಗಳು ಸಾಕಷ್ಟು ಸಹಾಯ ಮಾಡಿದರು. ಕಚೇರಿಯಲ್ಲಿರುವ ಪ್ರತಿಯೊಬ್ಬ ಸಿಬ್ಬಂದಿ ಇಷ್ಟೊಂದು ಸಹಾಯಕ ರೀತಿಯಲ್ಲಿರುವುದನ್ನು ನೋಡಿ ಬಹಳ ಸಂತೋಷವಾಯಿತು. ಇಂತಹ ಪರಿಸ್ಥಿತಿಗಳು ಹಿರಿಯ ನಾಗರೀಕರು ಒತ್ತಡಕ್ಕೊಳಗಾಗುವುದನ್ನು ನಿಯಂತ್ರಿಸುತ್ತದೆ. ಪೋಸ್ಪೋರ್ಟ್ ಪಡೆಯಲು ಬೆರಳಚ್ಚುಗಳು ಮತ್ತು ಫೋಟೋ ಕಡ್ಡಾಯವಾಗಿದ್ದು, ಅದನ್ನು ತಪ್ಪಿಸಲು ಸಾಧ್ಯವಿಲ್ಲ. ಕಚೇರಿಗೆ ಹೋದಾಗ ಅತ್ಯಂಕ ಕಡಿಮೆ ಸಮಯದಲ್ಲಿ ಪ್ರಕ್ರಿಯೆ ಪೂರ್ಣಗೊಂಡಿತ್ತು. ಶೀಘ್ರಗತಿಯಲ್ಲಿಯೇ ನಮಗೆ ಪಾಸ್ಪೋರ್ಟ್ ದೊರೆತಿತ್ತು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com