ಮೈಸೂರು: ಜಮೀನಿಗೆ ಹೋಗಿದ್ದ ಬಾಲಕನ ಮೇಲೆ ಹುಲಿ ದಾಳಿ, ಕೊಂದು ತಿಂದ ವ್ಯಾಘ್ರ!

ರಾಜ್ಯದಲ್ಲಿ ಮತ್ತೆ ಹುಲಿ ದಾಳಿ ಪ್ರಕರಣ ವರದಿಯಾಗಿದ್ದು ಮೈಸೂರಿನಲ್ಲಿ 7 ವರ್ಷದ ಬಾಲಕನೊಬ್ಬ ಹುಲಿ ದಾಳಿಗೆ ಬಲಿಯಾಗಿದ್ದಾನೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು: ರಾಜ್ಯದಲ್ಲಿ ಮತ್ತೆ ಹುಲಿ ದಾಳಿ ಪ್ರಕರಣ ವರದಿಯಾಗಿದ್ದು ಮೈಸೂರಿನಲ್ಲಿ 7 ವರ್ಷದ ಬಾಲಕನೊಬ್ಬ ಹುಲಿ ದಾಳಿಗೆ ಬಲಿಯಾಗಿದ್ದಾನೆ. 

ಎಚ್ ಡಿ ಕೋಟೆ ತಾಲೂಕಿನ ಕಲ್ಲಹಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಮೃತ ಬಾಲಕ ಚರಣ್ ನಾಯಕ್ ಎಂದು ತಿಳಿದುಬಂದಿದೆ. 

ತಂದೆ ಕೃಷ್ಣಾಕರ ಜೊತೆ ಚರಣ್ ನಾಯಕ್ ಜಮೀನಿಗೆ ತೆರಳಿದ್ದನು. ಜಮೀನಿನಲ್ಲಿ ಆಟ ಆಡಿ ಸುಸ್ತಾಗಿದ್ದ ಆತ ಮರದ ಕೆಳಗೆ ಕುಳಿತು ವಿಶ್ರಾಂತಿ ಪಡೆಯುತ್ತಿದ್ದನು. ಈ ವೇಳೆ ಹುಲಿ ದಾಳಿ ಮಾಡಿ ಕೂಗಳತೆ ದೂರಕ್ಕೆ ಬಾಲಕನನ್ನು ಎಳೆದೊಯ್ದು ಕೊಂದು ತಿಂದು ಹಾಕಿದೆ.

ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹುಲಿ ದಾಳಿಯಿಂದ ಕಂಗಾಲಾಗಿರುವ ಪೋಷಕರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಬಾಲಕನ ಮೃತದೇಹ ತೆಗೆಯಲು ಕುಟುಂಬಸ್ಥರು ನಿರಾಕರಿಸಿದ್ದು ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com