ಶಿವಮೊಗ್ಗ: ಗುಡಿಸಲಿನಲ್ಲಿ ಮಲಗಿದ್ದ ವ್ಯಕ್ತಿಯ ಮೇಲೆ ಹುಲಿ ದಾಳಿ, ಕೈಗೆ ಗಂಭೀರ ಗಾಯ

ಶಿವಮೊಗ್ಗ ಜಿಲ್ಲೆಯ ಮರಾಠಿ ಗ್ರಾಮದಲ್ಲಿ ತನ್ನ ಗುಡಿಸಲಿನೊಳಗೆ ಮಲಗಿದ್ದ ವ್ಯಕ್ತಿಯೊಬ್ಬರ ಮೇಲೆ ಹುಲಿ ದಾಳಿ ಮಾಡಿದೆ. ಗುರುವಾರ ನಸುಕಿನಲ್ಲಿ ಗುಡಿಸಲಿಗೆ ನುಗ್ಗಿದ ಹುಲಿಯು ಗಾಢ ನಿದ್ದೆಯಲ್ಲಿದ್ದ ಗಣೇಶ್ ಮೇಲೆ ದಾಳಿ ಮಾಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಮರಾಠಿ ಗ್ರಾಮದಲ್ಲಿ ತನ್ನ ಗುಡಿಸಲಿನೊಳಗೆ ಮಲಗಿದ್ದ ವ್ಯಕ್ತಿಯೊಬ್ಬರ ಮೇಲೆ ಹುಲಿ ದಾಳಿ ಮಾಡಿದೆ.

ಗುರುವಾರ ನಸುಕಿನಲ್ಲಿ ಗುಡಿಸಲಿಗೆ ನುಗ್ಗಿದ ಹುಲಿಯು ಗಾಢ ನಿದ್ದೆಯಲ್ಲಿದ್ದ ಗಣೇಶ್ ಮೇಲೆ ದಾಳಿ ಮಾಡಿದೆ. ಗಣೇಶ್ ಕಿರುಚಾಡಿ ಸಹಾಯಕ್ಕಾಗಿ ಕೂಗಿದ್ದರಿಂದ ಅಕ್ಕಪಕ್ಕದವರು ಆತನನ್ನು ರಕ್ಷಿಸಲು ಮುಂದಾದಾಗ ಹುಲಿ ಓಡಿ ಹೋಗಿದೆ.

ಕೈಗೆ ಗಂಭೀರ ಗಾಯವಾಗಿರುವ ಗಣೇಶ್ (47) ಅವರನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.

ಸಾಗರ ತಾಲೂಕಿನ ಶರಾವತಿ ಹಿನ್ನೀರಿನಲ್ಲಿ ಈ ಪ್ರದೇಶವಿರುವುದರಿಂದ ಘಟನೆಯ ನಂತರ ಗ್ರಾಮಸ್ಥರು ಮತ್ತು ಈ ಭಾಗದ ಜನರು ಹೊರಗೆ ಹೋಗಲು ಹೆದರುತ್ತಿದ್ದಾರೆ.

ಅರಣ್ಯಾಧಿಕಾರಿಗಳು ಹುಲಿಯ ಸೆರೆಗೆ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com