ಹೊಸಪೇಟೆ: ಟಿಇಟಿ ಪರೀಕ್ಷೆ ವೇಳೆ ಬುರ್ಖಾ ಧರಿಸಿ ಬಂದ ಪರೀಕ್ಷಾರ್ಥಿಗಳಿಗೆ ಪ್ರವೇಶ ನಿರಾಕರಣೆ, ಕೆಲಕಾಲ ಗೊಂದಲ ಸೃಷ್ಟಿ

ಹೊಸಪೇಟೆಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಭಾನುವಾರ ಇಬ್ಬರು ಪರೀಕ್ಷಾರ್ಥಿಗಳು ಬುರ್ಖಾ ಧರಿಸಿ ಪರೀಕ್ಷಾ ಕೊಠಡಿ ಪ್ರವೇಶಿಸಿದ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಬುರ್ಖಾ ತೊಟ್ಟು ಪರೀಕ್ಷಾ ಕೇಂದ್ರಕ್ಕೆ ಬಂದಿರುವ ಯುವತಿಯರು.
ಬುರ್ಖಾ ತೊಟ್ಟು ಪರೀಕ್ಷಾ ಕೇಂದ್ರಕ್ಕೆ ಬಂದಿರುವ ಯುವತಿಯರು.

ಹೊಸಪೇಟೆ: ಹೊಸಪೇಟೆಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಭಾನುವಾರ ಇಬ್ಬರು ಪರೀಕ್ಷಾರ್ಥಿಗಳು ಬುರ್ಖಾ ಧರಿಸಿ ಪರೀಕ್ಷಾ ಕೊಠಡಿ ಪ್ರವೇಶಿಸಿದ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಬುರ್ಖಾ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಬಂದ ಬಂದ ಯುವತಿಯವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿಯಮಗಳಲ್ಲಿ ಬುರ್ಖಾ ಧರಿಸುವುದರ ಕುರಿತು ಷರತ್ತುಗಳು ಇವೆಯೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಈ ವೇಳೆ ಹಾಲ್ ಟಿಕೆಟ್‌ನಲ್ಲಿ ನಿಯಮಗಳನ್ನು ನಮೂದಿಸಲಾಗಿದ್ದು, ಅಭ್ಯರ್ಥಿಗಳು ಅದನ್ನು ಅನುಸರಿಸಬೇಕು ಎಂದು ಅಧಿಕಾರಿಗಳು ತಿಳಿಸಿದರು.

ಬಳಿಕ ಬುರ್ಖಾ ತೆಗೆಯಲು ಯುವತಿಯರು ಒಪ್ಪಿಸಿದರು. ನಂತರ ಅವರನ್ನು ಪರೀಕ್ಷೆಗೆ ಹಾಜರಾಗುವ ಮೊದಲು ಕಾಯ್ದಿರಿಸಲಾಗಿದ್ದ ತರಗತಿಗೆ ಕಳುಹಿಸಲಾಯಿತ. ಬಳಿಕ ಯುವತಿಯರು ಬುರ್ಖಾ ತೆಗೆದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com