ಬೆಂಗಳೂರಿನ ಶೇ.95 ರಷ್ಟು ಜನ ಮೆಟ್ರೋ ಬಳಸಲು ಬಯಸುತ್ತಾರೆ: ಸಮೀಕ್ಷೆ

ಬೆಂಗಳೂರಿನ ಸುಮಾರು ಶೇ. 95 ರಷ್ಟು ಜನ ವೈಯಕ್ತಿಕ ವಾಹನಗಳ ಬದಲಾಗಿ ಮೆಟ್ರೋ ರೈಲು  ಬಳಸಲು ಬಯಸುತ್ತಾರೆ ಎಂದು ಬಿ.ಪ್ಯಾಕ್ ಮತ್ತು ವರ್ಲ್ಡ್ ರಿಸೋರ್ಸ್ ಇನ್‌ಸ್ಟಿಟ್ಯೂಟ್(ಡಬ್ಲ್ಯುಆರ್‌ಐ) ನಡೆಸಿದ ಸಮೀಕ್ಷೆಯಿಂದ ತಿಳಿದು...
ಮೆಟ್ರೋ ರೈಲು
ಮೆಟ್ರೋ ರೈಲು

ಬೆಂಗಳೂರು: ಬೆಂಗಳೂರಿನ ಸುಮಾರು ಶೇ. 95 ರಷ್ಟು ಜನ ವೈಯಕ್ತಿಕ ವಾಹನಗಳ ಬದಲಾಗಿ ಮೆಟ್ರೋ ರೈಲು  ಬಳಸಲು ಬಯಸುತ್ತಾರೆ ಎಂದು ಬಿ.ಪ್ಯಾಕ್ ಮತ್ತು ವರ್ಲ್ಡ್ ರಿಸೋರ್ಸ್ ಇನ್‌ಸ್ಟಿಟ್ಯೂಟ್(ಡಬ್ಲ್ಯುಆರ್‌ಐ) ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ.

B.PAC ಮತ್ತು WRI ಸಂಸ್ಥೆಗಳ ಪ್ರತಿನಿಧಿಗಳು ಒಂದು ತಿಂಗಳು ಸಮೀಕ್ಷೆ ನಡೆಸಿದ ನಂತರ, ಈಗ ಅವರು ಸಾರ್ವಜನಿಕರಿಗೆ ಸಾರ್ವಜನಿಕ ಸಾರಿಗೆ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಬಸ್ ಹಾಗೂ ಮೆಟ್ರೋ ಸಾರಿಗೆ ಸೇವೆ ಬಳಸಲು ಪ್ರೇರೇಪಿಸಲು 'ಪರ್ಸನಲ್2ಪಬ್ಲಿಕ್' ಅಭಿಯಾನ ಆರಂಭಿಸಲು ಮುಂದಾಗಿವೆ.

B.PAC ನ ಮ್ಯಾನೇಜಿಂಗ್ ಟ್ರಸ್ಟಿ ಮತ್ತು CEO ರೇವತಿ ಅಶೋಕ್ ಅವರ ಪ್ರಕಾರ, "ಬೆಂಗಳೂರು ನಗರದಾದ್ಯಂತ, ವಿಶೇಷವಾಗಿ ಹೊರ ವರ್ತುಲ ರಸ್ತೆಯಲ್ಲಿ 3,855 ಜನರನ್ನು ಸಮೀಕ್ಷೆಗಾಗಿ ಸಂಪರ್ಕಿಸಲಾಗಿದೆ.  ಅದರಲ್ಲಿ ಶೇ. 95 ರಷ್ಟು ಜನ ಮೆಟ್ರೋ ರೈಲು ಬಳಸಲು ಬಯಸುತ್ತಾರೆ. ಶೇ. 70 ರಷ್ಟು ಜನ ಮನೆಯಿಂದ ಕಚೇರಿಗೆ ಉತ್ತಮ ಸಾರ್ವಜನಿಕ ಸಾರಿಗೆ ಇದ್ದರೆ ತಕ್ಷಣವೇ ಅದನ್ನು ಬಳಸಲು ಸಿದ್ಧರಿರುವುದಾಗಿ ಹೇಳಿದ್ದಾರೆ.

"ಬೆಂಗಳೂರು ನಗರದಲ್ಲಿನ ನಮ್ಮ ಟ್ರಾಫಿಕ್ ಸಮಸ್ಯೆಗಳಿಗೆ ಏಕೈಕ ದೀರ್ಘಕಾಲೀನ ಪರಿಹಾರವೆಂದರೆ ಸಾರ್ವಜನಿಕ ಸಾರಿಗೆ. 2023 ವರ್ಷವು ಬ್ರಾಂಡ್ ಬೆಂಗಳೂರಿಗೆ ಒಂದು ಮೈಲಿಗಲ್ಲು ವರ್ಷವಾಗಲಿದೆ. ಏಕೆಂದರೆ ಮೆಟ್ರೋ ವೈಟ್‌ಫೀಲ್ಡ್ ಅನ್ನು ಉಳಿದ ಭಾಗಗಳಿಗೆ ಸಂಪರ್ಕಿಸುತ್ತಿದೆ. #Personal2Public ಎಂಬುದು ನಾಗರಿಕರ ಆಂದೋಲನವಾಗಿದೆ ಎಂದು ಡಬ್ಲ್ಯುಆರ್‌ಐ ಇಂಡಿಯಾದ ಶ್ರೀನಿವಾಸ್ ಅಲವಿಲ್ಲಿ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com