ಬೆಂಗಳೂರು: ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 5,000 ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ್ದು, ಈ ಆದೇಶ ಕುಡಿಯುನ ನೀರಿಗೆ ಕಾವೇರಿ ನದಿ ನೀರನ್ನೇ ಸಂಪೂರ್ಣವಾಗಿ ಅವಲಂಬಿಸಿರುವ ಬೆಂಗಳೂರಿಗೆ ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಿದೆ.
ಪ್ರಸ್ತುತ ಬೆಂಗಳೂರಿಗರಿಗೆ ಯಾವುದೇ ಸಮಸ್ಯೆಗಳಾಗುವುದಿಲ್ಲ. ಆದರೆ, ಅಕ್ಟೋಬರ್ ತಿಂಗಳಿನಲ್ಲಿ ನಗರದಲ್ಲಿ ಮಳೆಯಾಗದೇ ಹೋದಲ್ಲಿ, ಮೂರು ತಿಂಗಳ ಬಳಿಕ ಸಮಸ್ಯೆಗಳು ಎದುರಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ಎನ್ ಜಯರಾಮ್ ಅವರು ಮಾತನಾಡಿ, ಬೆಂಗಳೂರಿಗೆ ದಿನಕ್ಕೆ 1,450 ಮಿಲಿಯನ್ ಲೀಟರ್ (ಎಂಎಲ್‌ಡಿ) ಅಥವಾ 700 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಇದನ್ನು ಮಂಡ್ಯದ ಟಿಕೆ ಹಳ್ಳಿ ಜಲಾಶಯದಿಂದ ಸುಮಾರು 100 ಕಿಮೀ ದೂರಕ್ಕೆ ಪಂಪ್ ಮಾಡಲಾಗುತ್ತದೆ. ಇದೀಗ ನೀರಿನ ಸಮಸ್ಯೆಗಳು ಇಲ್ಲ ಎಂದು ಹೇಳಿದ್ದಾರೆ.
ಬಿಡಬ್ಲ್ಯೂಎಸ್ಎಸ್'ಬಿ ಮುಖ್ಯ ಇಂಜಿನಿಯರ್ ಸುರೇಶ್ ಅವರು ಪ್ರತಿಕ್ರಿಯೆ ನೀಡಿ, ದೆಹಲಿಯಿಂದ ಬಿಡಬ್ಲ್ಯೂಎಸ್ಎಸ್'ಬಿ ಮುಖ್ಯಸ್ಥರು ನಗರಕ್ಕೆ ವಾಪಸ್ಸಾದ ಬಳಿಕ ಅವರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಸದ್ಯಕ್ಕೆ ಕಬಿನಿ ಮತ್ತು ಕೆಆರ್‌ಎಸ್ ಜಲಾಶಯಗಳಲ್ಲಿ 60 ಟಿಎಂಸಿ ನೀರು ಲಭ್ಯವಿದೆ. ಇದರಲ್ಲಿ 20 ಟಿಎಂಸಿ ಡೆಡ್ ಸ್ಟೋರೇಜ್ ಎಂದು ಪರಿಗಣಿಸಬಹುದು, ಅದನ್ನು ಹೊರತೆಗೆಯಲು ಸಾಧ್ಯವಿಲ್ಲ. ಹೀಗಾಗಿ, ಮಂಡ್ಯ, ಮೈಸೂರು. ಬೆಂಗಳೂರು ಮತ್ತು ಸುತ್ತಮುತ್ತಲಿನ ಕೆಲವು ಪ್ರದೇಶಗಳಿಗೆ 40 ಟಿಎಂಸಿ ಅಡಿ ನೀರು ಹಂಚಿಕೆಯಾಗಿದೆ.
ಬೆಂಗಳೂರಿಗೆ ಪ್ರತಿ ತಿಂಗಳು 1.6 ಟಿಎಂಸಿ ಅಡಿ ನೀರು ಬೇಕಾಗುತ್ತದೆ, ಇದನ್ನು ನಾವು ಯಾವುದೇ ದೊಡ್ಡ ಸಮಸ್ಯೆಯಿಲ್ಲದೆ ಕೆಲವು ತಿಂಗಳುಗಳವರೆಗೆ ಪೂರೈಸಬಹುದು. “8 ಟಿಎಂಸಿ ಅಡಿ ಅಗತ್ಯವಿರುವ 110 ಹಳ್ಳಿಗಳಿಗೆ ಮುಂದಿನ ವರ್ಷದ ಆರಂಭದಲ್ಲಿ ಕಾವೇರಿ ಹಂತ V ಕಾರ್ಯಾರಂಭ ಮಾಡಿದಾಗ ನಿಜವಾದ ಸಮಸ್ಯೆ ಎದುರಾಗಲಿದೆ. ಇದಕ್ಕಾಗಿ ಬೆಂಗಳೂರು ಒಂದಕ್ಕೆ 2.4 ಟಿಎಂಸಿ ನೀರು ಒದಗಿಸಬೇಕಾಗುತ್ತದೆ ಎಂದು ವಿವರಿಸಿದ್ದಾರೆ.
ತಮಿಳುನಾಡಿಗೆ ದಿನಕ್ಕೆ 5,000 ಕ್ಯೂಸೆಕ್‌ಗಳನ್ನು ಪೂರೈಸುವುದರಿಂದ ಹದಿನೈದು ದಿನಗಳಲ್ಲಿ 75,000 ಕ್ಯೂಸೆಕ್ ಅಥವಾ 37 ಟಿಎಂಸಿ ನೀರು ಬಿಡುಗಡೆ ಮಾಡಬೇಕಾಗುತ್ತದೆ. “ಅಕ್ಟೋಬರ್‌ನಲ್ಲಿ ನಗರದಲ್ಲಿ ನಿಯಮಿತವಾಗಿ ಮಳೆ ಬಂದರೆ, ನಾವು ಸುರಕ್ಷಿತವಾಗಿರುತ್ತೇವೆ. ಮಳೆ ಸುರಿಸಿ ದೇವರು ದಯೆ ತೋರದಿದ್ದರೆ ಖಂಡಿತವಾಗಿಯೂ ಮುಂಬರುವ ದಿನಗಳಲ್ಲಿ ನೀರಿಗೆ ಸಮಸ್ಯೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
Advertisement