ಕಾವೇರಿ ವಿವಾದ: ವಿರೋಧ, ಪ್ರತಿಭಟನೆಗಳ ನಡುವೆಯೇ ತಮಿಳುನಾಡಿಗೆ ನೀರು ಬಿಡುಗಡೆ

ತಮಿಳುನಾಡು ರಾಜ್ಯಕ್ಕೆ ಕಾವೇರಿ ನೀರು ಬಿಡದಂತೆ ರಾಜ್ಯದೆಲ್ಲೆಡೆ ಪ್ರತಿಭಟನೆಗಳು ತೀವ್ರಗೊಂಡಿರುವ ನಡುವಲ್ಲೇ ನ್ಯಾಯಾಲಯದ ಆದೇಶಕ್ಕೆ ತಲೆ ಬಾಗಿರುವ ರಾಜ್ಯ ಸರ್ಕಾರ ತಮಿಳುನಾಡು ರಾಜ್ಯಕ್ಕೆ ಕೃಷ್ಣರಾಜಸಾಗರ (ಕೆಆರ್‌ಎಸ್) ಜಲಾಶಯದಿಂದ ಕಾವೇರಿ ನದಿ ನೀರನ್ನು ಬಿಡುಗಡೆ ಮಾಡುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ತಮಿಳುನಾಡು ರಾಜ್ಯಕ್ಕೆ ಕಾವೇರಿ ನೀರು ಬಿಡದಂತೆ ರಾಜ್ಯದೆಲ್ಲೆಡೆ ಪ್ರತಿಭಟನೆಗಳು ತೀವ್ರಗೊಂಡಿರುವ ನಡುವಲ್ಲೇ ನ್ಯಾಯಾಲಯದ ಆದೇಶಕ್ಕೆ ತಲೆ ಬಾಗಿರುವ ರಾಜ್ಯ ಸರ್ಕಾರ ತಮಿಳುನಾಡು ರಾಜ್ಯಕ್ಕೆ ಕೃಷ್ಣರಾಜಸಾಗರ (ಕೆಆರ್‌ಎಸ್) ಜಲಾಶಯದಿಂದ ಕಾವೇರಿ ನದಿ ನೀರನ್ನು ಬಿಡುಗಡೆ ಮಾಡುತ್ತಿದೆ.

ತಮಿಳುನಾಡಿಗೆ ನೀರು ಬಿಡುಗಡೆ ಮಾಡುತ್ತಿರುವ ಬಗ್ಗೆ ನೀರಾವರಿ ಇಲಾಖೆಯ ಅಧಿಕಾರಿಗಳು ತುಟಿಬಿಚ್ಚಿಲ್ಲ. ಆದರೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಮತ್ತು ಸುಪ್ರೀಂ ಕೋರ್ಟ್‌ನ ನಿರ್ದೇಶನಕ್ಕೆ ಅನುಗುಣವಾಗಿ 5,000 ಕ್ಯೂಸೆಕ್‌ಗೂ ಹೆಚ್ಚು ನೀರು ಬಿಡಲಾಗಿದೆ ಎಂದು ಮೂಲಗಳಿದೆ ತಿಳಿದುಬಂದಿದೆ.

ನೀರು ಬಿಡುವ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ. ಆದರೆ, ಶುಕ್ರವಾರ ಸಂಜೆ 5,734 ಕ್ಯೂಸೆಕ್‌ಗೂ ಹೆಚ್ಚು ನೀರು ಬಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಿಶ್ವೇಶ್ವರಯ್ಯ ನಾಲೆಗೆ 2,503 ಕ್ಯೂಸೆಕ್, ಡಿ ದೇವರಾಜ್ ಅರಸ್ ಕಾಲುವೆಗೆ400 ಕ್ಯೂಸೆಕ್ ಮತ್ತು ತಮಿಳುನಾಡು ಕಡೆಗೆ ಹರಿಯುವ ನದಿಗೆ 2,673 ಕ್ಯೂಸೆಕ್ ಮತ್ತು ಉಳಿದ ಕಾಲುವೆಗಳಿಗೆ ನೀರು ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಒಂದೆಡೆ ತಮಿಳುನಾಡಿಗೆ ನೀರು ಬಿಡುಗಡೆ ಮಾಡುತ್ತಿದ್ದರೂ ನೀರಾವರಿ ಇಲಾಖೆ ಅಧಿಕಾರಿಗಳು ಮಾತ್ರ ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿಗಳನ್ನೂ ನೀಡುತ್ತಿಲ್ಲ. ಕೆಆರ್‌ಎಸ್‌ನ ಕಾರ್ಯನಿರ್ವಾಹಕ ಎಂಜಿನಿಯರ್ ಒಬ್ಬರು ಮಾತನಾಡಿ, ತಮಿಳುನಾಡಿಗೆ ನೀರು ಬಿಡಲು ರಾಜ್ಯ ಸರ್ಕಾರದಿಂದ ಯಾವುದೇ ನಿರ್ದೇಶನ ಬಂದಿಲ್ಲ. ಬಿಳಿಗುಂಡ್ಲುವಿನ ಗೇಜಿಂಗ್ ಸ್ಟೇಷನ್‌ನಲ್ಲಿ ನೀರು ಸೋರಿಕೆಯಾಗಿದೆಯೇ ಹೊರತು, ಬಿಡುಗಡೆ ಮಾಡಿದ್ದಲ್ಲ ಎಂದು ಹೇಳಿದ್ದಾರೆ.

ಕೆಆರ್‌ಎಸ್‌ನಲ್ಲಿ ನೀರಿನ ಮಟ್ಟ ಇಂತಿದೆ....

  • ಪೂರ್ಣ ಜಲಾಶಯದ ಮಟ್ಟ- 124.80 ಅಡಿ
  • ಪ್ರಸ್ತುತ ನೀರಿನ ಮಟ್ಟ- 97.02 ಅಡಿ
  • ಒಳಹರಿವು- 5,845 ಕ್ಯೂಸೆಕ್
  • ಹೊರ ಹರಿವು- 5,734 ಕ್ಯೂಸೆಕ್
  • ನದಿಯಲ್ಲಿ- 2,673 ಕ್ಯೂಸೆಕ್
  • ವಿಸಿ ಕಾಲುವೆ- 2,503 ಕ್ಯೂಸೆಕ್
  • ಡಿಡಿ ಅರಸು ಕಾಲುವೆ - 400 ಕ್ಯೂಸೆಕ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com