ಸಾಮಾನ್ಯ ಜ್ಞಾನದಿಂದ ಸೈಬರ್ ಅಪರಾಧವನ್ನು ಎದುರಿಸಬಹುದು: ನಗರ ಪೊಲೀಸ್ ಆಯುಕ್ತ

ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಳ್ಳುವ ಬಗ್ಗೆ ಎಲ್ಲಿಯವರೆಗೆ ಜನರು ನಿರ್ಲಕ್ಷ್ಯ ತೋರುತ್ತಿರುತ್ತಾರೋ ಅಲ್ಲಿಯವರೆಗೂ ಸೈಬರ್‌ ಕ್ರೈಂ ಮುಂದುವರಿಯುತ್ತದೆ ಎಂದು ಪೊಲೀಸ್‌ ಆಯುಕ್ತ ಬಿ ದಯಾನಂದ ಅವರು ಶನಿವಾರ ಹೇಳಿದರು.
ನಗರ ಪೊಲೀಸ್ ಆಯುಕ್ತ ಬಿ ದಯಾನಂದ್
ನಗರ ಪೊಲೀಸ್ ಆಯುಕ್ತ ಬಿ ದಯಾನಂದ್
Updated on

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಳ್ಳುವ ಬಗ್ಗೆ ಎಲ್ಲಿಯವರೆಗೆ ಜನರು ನಿರ್ಲಕ್ಷ್ಯ ತೋರುತ್ತಿರುತ್ತಾರೋ ಅಲ್ಲಿಯವರೆಗೂ ಸೈಬರ್‌ ಕ್ರೈಂ ಮುಂದುವರಿಯುತ್ತದೆ ಎಂದು ಪೊಲೀಸ್‌ ಆಯುಕ್ತ ಬಿ ದಯಾನಂದ ಅವರು ಶನಿವಾರ ಹೇಳಿದರು.

ಶನಿವಾರ ನಡೆದ ಮಾಸಿಕ ಜನಸಂಪರ್ಕ ಸಭೆ ಸಂವಾದ ಕಾರ್ಯಕ್ರಮದಲ್ಲಿ ಆಗ್ನೇಯ ವಿಭಾಗದ ವ್ಯಾಪ್ತಿಯ ಕೋರಮಂಗಲ, ಇಲೆಕ್ಟ್ರಾನಿಕ್ ಸಿಟಿ ಮತ್ತು ಮಡಿವಾಳ ನಿವಾಸಿಗಳೊಂದಿಗೆ ಆಯುಕ್ತರು ಮಾತುಕತೆ ನಡೆಸಿದರು.

ಈ ವೇಳೆ ತಮ್ಮ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧ, ರಸ್ತೆ ಅಪಘಾತಗಳು ಮತ್ತು ಮಾದಕ ದ್ರವ್ಯ ಸೇವನೆಯ ಘಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು.

“ಮಾದಕ ದ್ರವ್ಯ ಸೇವನೆಯು ಸಮಾಜಕ್ಕೆ ಅಪಾಯವಾಗಿದೆ. ಸುಲಭ ಲಭ್ಯತೆಯು ಬಳಕೆಯನ್ನು ಸಾಮಾನ್ಯಗೊಳಿಸಿದೆ, ವಿಶೇಷವಾಗಿ ಯುವ ಪೀಳಿಗೆಯಲ್ಲಿ. ಗೆಳೆಯರ ಒತ್ತಡ ಮತ್ತು ಕುತೂಹಲ, ಇತರರ ಪ್ರಭಾವದಿಂದ ಮಾದಕ ದ್ರವ್ಯ ಸೇವನೆ ಮಾಡುತ್ತಿರುವುದು ಹೆಚ್ಚುತ್ತಿದೆ. ಪೊಲೀಸ್ ಇಲಾಖೆಯು ಬೆಂಗಳೂರನ್ನು ಮಾದಕ ದ್ರವ್ಯ ಮುಕ್ತ ನಗರವನ್ನಾಗಿ ಮಾಡಲು ನಿರಂತರವಾಗಿ ಶ್ರಮಿಸುತ್ತಿದೆ. ಈ ಹೋರಾಟಕ್ಕೆ ಜನರ ಒಳಗೊಳ್ಳುವಿಕೆ ಮುಖ್ಯವಾಗುತ್ತದೆ. ಜವಾಬ್ದಾರಿಯುತ ನಾಗರಿಕರಾಗಿ ನಾವು ಮಾದಕ ದ್ರವ್ಯ ಸೇವನೆಯಿಂದ ದೂರವಿರಬೇಕು ಎಂದು ದಯಾನಂದ ಅವರು ಹೇಳಿದರು.
 
ಸೈಬರ್ ಅಪರಾಧ ಪ್ರಕರಣಗಳ ಹೆಚ್ಚಳದ ಕುರಿತು ಮಾತನಾಡಿ, ಸಾಮಾನ್ಯ ಜ್ಞಾನದ ಮಹತ್ವವನ್ನು ಒತ್ತಿ ಹೇಳಿದರು.

ಜೀವನದಲ್ಲಿ ಯಾವುದೂ ಉಚಿತವಾಗಿ ಸಿಗುವುದಿಲ್ಲ. ಜನರು ಇಂತಹ ವಿಷಯಗಳನ್ನು ಸಾಮಾನ್ಯವೆಂದು ತೆಗೆದುಕೊಳ್ಳಬಾರದು. ವಿಶೇಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವಾಗ ಯಾರನ್ನು ನಂಬಬೇಕು ಎಂಬುದರ ಬಗ್ಗೆ ವಿವೇಚನೆ ಹೊಂದಿರುವುದು ಬಹಳ ಮುಖ್ಯ. ಯಾರಾದರೂ ಸೈಬರ್ ಅಪರಾಧಕ್ಕೆ ಬಲಿಯಾದರೆ, ಅದನ್ನು ತ್ವರಿತವಾಗಿ ವರದಿ ಮಾಡುವುದು ಮುಖ್ಯವಾಗುತ್ತದೆ. ಯಾವುದೇ ಹಣವನ್ನು ಬಹು ಖಾತೆಗಳಿಗೆ ವರ್ಗಾಯಿಸುವ ಮೊದಲು ಪೊಲೀಸರು ತ್ವರಿತವಾಗಿ ತನಿಖೆಯನ್ನು ಪ್ರಾರಂಭಿಸಲು ಮತ್ತು ಮೂಲ ಖಾತೆಯನ್ನು ನಿರ್ಬಂಧಿಸಲು ಇದು ಶಕ್ತಗೊಳಿಸುತ್ತದೆ ಎಂದು ತಿಳಿಸಿದರು.

ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗುವಂತೆ ಮಾಡಲು ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಠಾಣೆಗಳು ಮತ್ತು ಸೈಬರ್ ಎಕನಾಮಿಕ್ ಮತ್ತು ನಾರ್ಕೋಟಿಕ್ಸ್ (ಸಿಇಎನ್) ಕೇಂದ್ರಗಳಲ್ಲಿ ಸೈಬರ್ ದೂರುಗಳನ್ನು ದಾಖಲಿಸುವ ಆಯ್ಕೆಯನ್ನು ಕೂಡ ಪರಿಚಯಿಸಿದ್ದೇವೆಂದು ಹೇಳಿದರು.

ಸಂವಾದದ ವೇಳೆ ನಗರದ ಜನತೆ ಟ್ರಾಫಿಕ್ ವ್ಯವಸ್ಥೆ ಬಗ್ಗೆಯೂ ಕಳವಳ ವ್ಯಕ್ತಪಡಿಸಿದರು. ಇದೇ ವೇಳೆ ಹೆಚ್ಚುತ್ತಿರುವ ರಸ್ತೆ ಅಪಘಾತ ಕುರಿತಂತೆಯೂ ಮಾತುಕತೆ ನಡೆಯಿತು.

ಮುಂಜಾಗ್ರತಾ ಕ್ರಮವಾಗಿ ಹಂಪ್‌ಗಳನ್ನು ಗುರುತಿಸಲು ಮತ್ತು ಚಾಲಕರನ್ನು ಮೇಲ್ವಿಚಾರಣೆ ಮಾಡಲುವಂತೆ ಒತ್ತಾಯಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com