ಕಳ್ಳತನ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ರಾಜ್ಯ
ಬೆಂಗಳೂರಿನಲ್ಲಿ ಖದೀಮನ ಕೈಚಳಕ: ಮಗಳ ಮದುವೆಗೆ ಕೂಡಿಟ್ಟ 3.5 ಕೆಜಿ ಚಿನ್ನ, 10 ಲಕ್ಷ ರೂ. ನಗದು ಕಳ್ಳತನ!
ಮನೆಯಲ್ಲಿ ಯಾರೂ ಇಲ್ಲದಿರುವ ವೇಳೆ ಬಂದ ಕಳ್ಳನೊಬ್ಬ ಬೀಗ ಮುರಿದು, 3.5 ಕೆ.ಜಿ ಚಿನ್ನ ಹಾಗೂ 10 ಲಕ್ಷ ನಗದು ಕಳ್ಳತನ ಮಾಡಿ ಎಸ್ಕೇಪ್ ಆಗಿರುವ ಘಟನೆ ತಿಲಕ್ ನಗರದ ಎಸ್ಆರ್ ಕೆ ಗಾರ್ಡನ್ನಲ್ಲಿ ನಡೆದಿದೆ.
ಬೆಂಗಳೂರು: ಮನೆಯಲ್ಲಿ ಯಾರೂ ಇಲ್ಲದಿರುವ ವೇಳೆ ಬಂದ ಕಳ್ಳನೊಬ್ಬ ಬೀಗ ಮುರಿದು, 3.5 ಕೆ.ಜಿ ಚಿನ್ನ ಹಾಗೂ 10 ಲಕ್ಷ ನಗದು ಕಳ್ಳತನ ಮಾಡಿ ಎಸ್ಕೇಪ್ ಆಗಿರುವ ಘಟನೆ ತಿಲಕ್ ನಗರದ ಎಸ್ಆರ್ ಕೆ ಗಾರ್ಡನ್ನಲ್ಲಿ ನಡೆದಿದೆ.
ಮನೆಯವರೆಲ್ಲ ರಾಮನಗರಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ. ಇನ್ನೂ ಕಳ್ಳತನಕ್ಕೆ ಒಳಗಾದ ಮನೆಯವರು ಮಗಳ ಮದುವೆ ಕೂಡ ಫಿಕ್ಸ್ ಮಾಡಿದ್ದರಂತೆ. ಹಾಗಾಗಿ ಆಭರಣ ಹಾಗೂ ಹಣವನ್ನು ಮನೆಯಲ್ಲಿ ಇಟ್ಟು ಹೋಗಿದ್ದರು.
ರಾಮನಗರದಿಂದ ಮರಳಿ ಮನೆಗೆ ಬಂದು ನೋಡಿದ ಕೂಡಲೇ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಘಟನಾ ಸ್ಥಳಕ್ಕೆ ತಿಲಕ್ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದ ವೇಳೆ ಮನೆಗೆ ಓರ್ವ ವ್ಯಕ್ತಿ ಬಂದಿರುವುದು ಗೊತ್ತಾಗಿದೆ. ಸದ್ಯ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿದ್ದ ಕಳ್ಳನಿಗಾಗಿ ಬಲೆ ಬೀಸಿದ್ದಾರೆ.


