ಬೆಂಗಳೂರು: ಲಿವ್-ಇನ್ ಪಾರ್ಟನರ್ ನಿಂದ ಕಿರುಕುಳ; ದೂರು ನೀಡಿದ ಮಹಿಳೆ

ಬೆಂಗಳೂರಿನಲ್ಲಿ ಎಂಎನ್‌ಸಿಯಲ್ಲಿ ಉದ್ಯೋಗಿಯಾಗಿರುವ ಮಹಿಳೆಯೊಬ್ಬರು ತನ್ನ ಲಿವ್-ಇನ್ ಪಾರ್ಟನರ್ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ದೂರು ನೀಡಿರುವುದಾಗಿ ಪೊಲೀಸರು ಗುರುವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರಿನಲ್ಲಿ ಎಂಎನ್‌ಸಿಯಲ್ಲಿ ಉದ್ಯೋಗಿಯಾಗಿರುವ ಮಹಿಳೆಯೊಬ್ಬರು ತನ್ನ ಲಿವ್-ಇನ್ ಪಾರ್ಟನರ್ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ದೂರು ನೀಡಿರುವುದಾಗಿ ಪೊಲೀಸರು ಗುರುವಾರ ತಿಳಿಸಿದ್ದಾರೆ.

ಮಹಿಳೆ ತನ್ನ ಲಿವ್-ಇನ್ ಪಾರ್ಟನರ್ ರಫೀಕ್ ಬಾದಶಾ ವಿರುದ್ಧ ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸದ್ಯ ತನಿಖೆ ನಡೆಯುತ್ತಿದೆ.

ಪೊಲೀಸರ ಪ್ರಕಾರ, ಆರೋಪಿಯು ಫೇಸ್‌ಬುಕ್‌ನಲ್ಲಿ ತಾನೂ ಹಿಂದೂ ಎಂದು ಮತ್ತು ತನ್ನ ಹೆಸರನ್ನು 'ಗುರುಪ್ರಸಾದ್' ಎಂದು ಹೇಳಿಕೊಂಡು ತನ್ನೊಂದಿಗೆ ಗೆಳೆತನ ಬೆಳೆಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

ಫೇಸ್ ಬುಕ್ ನಲ್ಲಿ ಪರಿಚಯವಾದ ಈ ವ್ಯಕ್ತಿ ತನ್ನೊಂದಿಗೆ ಸ್ನೇಹ ಬೆಳೆಸಿದನು ಮತ್ತು ಕೆಲವೇ ದಿನಗಳಲ್ಲಿ ಇಬ್ಬರೂ ಒಟ್ಟಿಗೆ ವಾಸಿಸಲು ಆರಂಭಿಸಿದೆವು ಎಂದು ಮಹಿಳೆ ಹೇಳಿದ್ದಾರೆ.

ನಂತರ ಆತನ ನಿಜವಾದ ಗುರುತು ಪತ್ತೆಯಾಯಿತು ಮತ್ತು ಆತ ಆಟೋ ಚಾಲಕ ಎಂದು ಎಂದು ಪೊಲೀಸರು ತಿಳಿಸಿದ್ದಾರೆ.

ಆದರೂ ಮಹಿಳೆ ಆತನೊಂದಿಗೆ ಸಂಬಂಧವನ್ನು ಮುಂದುವರೆಸಿದ್ದಳು. ಆದರೆ, ಆರೋಪಿ ಕಿರುಕುಳ ನೀಡಲಾರಂಭಿಸಿದ್ದು, ಅದನ್ನು ಸಹಿಸಲಾರದೆ ಪೋಷಕರ ಮನೆಗೆ ಮರಳಿದ್ದು, ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಹಿಳೆ ಒತ್ತಾಯಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com