ಬೆಂಗಳೂರು: ಬೇರೆ ಸಂಬಂಧ ಶಂಕೆ, ಬರ್ತ್ ಡೇ ದಿನವೇ ಕೇಕ್ ಕಟ್ ಮಾಡಿಸಿ, ಯುವತಿಯ ಕತ್ತು ಕೊಯ್ದ ಪ್ರಿಯಕರ!

ಪ್ರೇಯಸಿಯ ಹುಟ್ಟುಹಬ್ಬವನ್ನು ಆಚರಿಸಿ, ಖುಷಿಯಲ್ಲಿ ಕೇಕ್ ಕತ್ತರಿಸಿ ಬಳಿಕ ಬೇರೆ ಸಂಬಂಧ ಶಂಕೆ ಮೇರೆಗೆ ಆಕೆಯ ಕುತ್ತಿಗೆ ಕೊಯ್ದು ಹತ್ಯೆ ಮಾಡಿದ ಧಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಪ್ರೇಯಸಿಯ ಹುಟ್ಟುಹಬ್ಬವನ್ನು ಆಚರಿಸಿ, ಖುಷಿಯಲ್ಲಿ ಕೇಕ್ ಕತ್ತರಿಸಿ ಬಳಿಕ ಬೇರೆ ಸಂಬಂಧ ಶಂಕೆ ಮೇರೆಗೆ ಆಕೆಯ ಕುತ್ತಿಗೆ ಕೊಯ್ದು ಹತ್ಯೆ ಮಾಡಿದ ಧಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಲಗ್ಗೆರೆಯಲ್ಲಿ ಈ ಘಟನೆ ನಡೆದಿದ್ದು, ನವ್ಯ (24) ಕೊಲೆಯಾದ ಯುವತಿಯಾಗಿದ್ದಾಳೆ. ಆಕೆಯ ಪ್ರಿಯಕರ ಪ್ರಶಾಂತ್ ಈ ದಾರುಣ ಹತ್ಯೆ ಮಾಡಿದ್ದು, ಹತ್ಯೆಗೆ ಅಕೆಯ ಮೇಲಿನ ಅನುಮಾನವೇ ಕಾರಣ ಎಂದು ಹೇಳಲಾಗಿದೆ.

ಮೂಲಗಳ ಪ್ರಕಾರ, ಪೊಲೀಸ್ ಇಲಾಖೆಗೆ ಆಂತರಿಕ ಭದ್ರತಾ ವಿಭಾಗದಲ್ಲಿ ಕ್ಲರ್ಕ್ ಆಗಿದ್ದ ನವ್ಯ, ಕಳೆದ ಆರು ವರ್ಷಗಳಿಂದ ಪ್ರಶಾಂತ್ ಎಂಬುವವನನ್ನ ಪ್ರೀತಿಸುತ್ತಿದ್ದಳು. ನವ್ಯ ಹಾಗೂ ಪ್ರಶಾಂತ್ ಇಬ್ಬರು ಕನಕಪುರ ಮೂಲದ ದೂರ ಸಂಬಂಧಿಕರು. ಕಳೆದ ಮಂಗಳವಾರ ನವ್ಯ ಬರ್ತಡೇ ಇತ್ತು. ಅಂದು ಬ್ಯುಸಿ ಇದ್ದೇನೆಂದು ಹೇಳಿದ್ದ ಪ್ರಶಾಂತ್ ನಿನ್ನೆ(ಏ.14) ಬರ್ತಡೇ ಸೆಲೆಬ್ರೇಷನ್​ಗೆ ಪ್ಲಾನ್ ಮಾಡಿ ಅದರಂತೆ ರಾತ್ರಿ ಕೇಕ್ ಕಟ್ಟು ಮಾಡಿ ಕೇಕ್‌ ತಿನ್ನಿಸಿದ್ದ.

ಬಳಿಕ ಹರಿತವಾದ ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ. ಇನ್ನು ಮೃತ ಯುವತಿಯ ಶವವನ್ನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಸದ್ಯ ಪೊಲೀಸರು ಆರೋಪಿಯನ್ನ ಬಂಧಿಸಿ ತನಿಖೆ ಮುಂದುವರೆಸಿದ್ದಾರೆ. ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಅನುಮಾನದ ಹುಚ್ಚಿನಿಂದ ಕೊಲೆ
ಇತ್ತೀಚೆಗೆ ಮೃತ ಯುವತಿ ಬೇರೆಯವರ ಜೊತೆ ಚಾಟಿಂಗ್ ಮಾಡುತ್ತಾ ಇದ್ದಳು ಎಂದು ಪ್ರಶಾಂತ್ ಅನುಮಾನಿಸಿದ್ದನಂತೆ. ಇದೇ ಕಾರಣಕ್ಕೆ ಇಬ್ಬರ ಮಧ್ಯೆ ಪದೇ ಪದೇ ಜಗಳ ಆಗುತ್ತಿಂತೆ. ಇದೀಗ ಅನುಮಾನದ ಮೇಲೆ ಬರ್ತಡೇ ಆಚರಿಸಿ ಬಳಿಕ ಚಾಕುವಿನಿಂದ ಕತ್ತು ಸೀಳಿ ಕೊಲೆ ಮಾಡಿದ್ದಾನೆ.

ಕತ್ತುಕೊಯ್ದು ನಾಲ್ಕು ಗಂಟೆ ಶವದ ಪಕ್ಕದಲ್ಲೇ ಕುಳಿತಿದ್ದ ಭೂಪ
ಇನ್ನು ನವ್ಯಾಳನ್ನು ಹತ್ಯೆ ಮಾಡಿದ ಬಳಿಕ ಮುಂದೇನು ಮಾಡಬೇಕು ಎಂದು ತೋಚದ ಪ್ರಶಾಂತ್ ಬರೊಬ್ಬರಿ ನಾಲ್ಕು ಗಂಟೆ ಆಕೆಯ ಶವದ ಪಕ್ಕದಲ್ಲೇ ಕುಳಿತಿದ್ದ. ಬಳಿಕ ಸಮೀಪದ ಠಾಣೆಗೆ ವಿಷಯ ತಿಳಿಸಿ ಶರಣಾಗಿದ್ದಾನೆ. ಈತನ ಹೇಳಿಕೆ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಈತನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com