ಕರ್ನಾಟಕದ ಅತಿ ದೊಡ್ಡ ಶವಾಗಾರಕ್ಕೆ ಬೇಕಾಗಿದೆ ಕಾಯಕಲ್ಪ!

ರಾಜ್ಯದಲ್ಲೇ 48 ಶವಗಳ ಕ್ಯಾಬಿನೆಟ್‌ ಗಳ ಅತ್ಯಧಿಕ ಸಾಮರ್ಥ್ಯವನ್ನು ಹೊಂದಿರುವ ನಗರದ ವಿಕ್ಟೋರಿಯಾ ಆಸ್ಪತ್ರೆಯ ಬೃಹತ್ ಶವಾಗಾರಕ್ಕೆ ಮೂಲಸೌಕರ್ಯ ಸುಧಾರಣೆಯ ಅಗತ್ಯವಿದೆ.
ವಿಕ್ಟೋರಿಯಾ ಆಸ್ಪತ್ರೆ ಶವಾಗಾರ
ವಿಕ್ಟೋರಿಯಾ ಆಸ್ಪತ್ರೆ ಶವಾಗಾರ

ಬೆಂಗಳೂರು: ರಾಜ್ಯದಲ್ಲೇ 48 ಶವಗಳ ಕ್ಯಾಬಿನೆಟ್‌ ಗಳ ಅತ್ಯಧಿಕ ಸಾಮರ್ಥ್ಯವನ್ನು ಹೊಂದಿರುವ ನಗರದ ವಿಕ್ಟೋರಿಯಾ ಆಸ್ಪತ್ರೆಯ ಬೃಹತ್ ಶವಾಗಾರಕ್ಕೆ ಮೂಲಸೌಕರ್ಯ ಸುಧಾರಣೆಯ ಅಗತ್ಯವಿದೆ.

ಶವಾಗಾರದ ಕಟ್ಟಡವು ತುಂಬಾ ಹಳೆಯದಾಗಿದ್ದು ನವೀಕರಣದ ಅಗತ್ಯವಿದೆ. ಭಾರೀ ಮಳೆಯ ಸಮಯದಲ್ಲಿ ಸೀಲಿಂಗ್ ಸೋರಿಕೆಯನ್ನು ತಪ್ಪಿಸಲು ಆಗಾಗ್ಗೆ ರಿಪೇರಿ ಮಾಡಲಗುತ್ತದೆ, ಇದರ ಬದಲು ಮಳೆಗಾಲ ಆರಂಭಕ್ಕೆ ಮುನ್ನವೇ ಸೋರಿಕೆಯಾಗುವುದನ್ನು  ದುರಸ್ತಿ ಮಾಡಬೇಕು ಎಂದು ಫೋರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯರು ಮನವಿ ಮಾಡಿದ್ದಾರೆ.

ಆದಾಗ್ಯೂ, ಭವಿಷ್ಯದಲ್ಲಿ, ಹೊಸ ಮೂಲಸೌಕರ್ಯವನ್ನು ಸ್ಥಾಪಿಸಲು ಕಟ್ಟಡವನ್ನು ಕೆಡವಬೇಕಾಗಬಹುದು. ಶವಾಗಾರವು ವಾರ್ಷಿಕವಾಗಿ 1,000 ಅಪರಿಚಿತ ದೇಹಗಳನ್ನು ಸಂಗ್ರಹಿಸುತ್ತದೆ, ಅದರಲ್ಲಿ 800 ಸಹಜ ಸಾವುಗಳು ಮತ್ತು ಉಳಿದವು ಆಕಸ್ಮಿಕವಾಗಿವೆ, ರೈಲ್ವೆ ಇಲಾಖೆಯಿಂದ  ಹೆಚ್ಚಿನ ಶವಗಳು ಬರುತ್ತವೆ ಎಂದಿದ್ದಾರೆ.

ಬೆಂಗಳೂರು ನಗರ ರೈಲು ನಿಲ್ದಾಣ, ಉಪ್ಪಾರಪೇಟೆ ಪೊಲೀಸ್ ಠಾಣೆ, ಕಲಾಸಿಪಾಳ್ಯಂ ಮತ್ತು ಕೆಆರ್ ಮಾರುಕಟ್ಟೆ ಬಸ್ ನಿಲ್ದಾಣದ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಕರಣಗಳು ಕಂಡುಬರುತ್ತವೆ ಎಂದು ಫೋರೆನ್ಸಿಕ್ ಮೆಡಿಸಿನ್ ವಿಭಾಗದ ಪ್ರಾಧ್ಯಾಪಕ ಮತ್ತು ಎಚ್‌ಒಡಿ ಡಾ.ಎಸ್.ವೆಂಕಟ ರಾಘವ ಹೇಳಿದ್ದಾರೆ.

ರೈಲ್ವೇ ಹಳಿಗಳ ಮೇಲಿನ ಆತ್ಮಹತ್ಯೆ ಪ್ರಕರಣಗಳು ಮತ್ತು ರೈಲು ಹತ್ತುವಾಗ ಅಥವಾ ಪ್ಲಾಟ್‌ಫಾರ್ಮ್ ದಾಟುವಾಗ ಜನರು ಹಳಿ ಮೇಲೆ ಬೀಳುವ ಅಪಘಾತ ಪ್ರಕರಣಗಳು ಸಹ ನಿಯಮಿತವಾಗಿ ಕಂಡುಬರುತ್ತವೆ. ಇದಲ್ಲದೆ, ಬೆಂಗಳೂರಿನಲ್ಲಿ ರಸ್ತೆ ಅಪಘಾತ ಪ್ರಕರಣಗಳು, ದ್ವಿಚಕ್ರ ವಾಹನಗಳ ಅಪಘಾತ ಪ್ರಕರಣಗಳು ಹೆಚ್ಚಿನ  ಪ್ರಮಾಣದಲ್ಲಿ ನಡೆಯುತ್ತಿವೆ.

ದ್ವಿಚಕ್ರ ವಾಹನ ಸವಾರರಿಗಿಂತ ಕಾರು ಚಾಲಕರು ಸುರಕ್ಷಿತವಾಗಿರುವುದರಿಂದ ರಸ್ತೆಗಳಲ್ಲಿ ಹೆಚ್ಚು ಜಾಗರೂಕರಾಗಿರಿ ಎಂದು ಅವರು ಜನರಿಗೆ ಮನವಿ ಮಾಡಿದ್ದಾರೆ. ಮಾರ್ಚ್‌ನಿಂದ ಇಲ್ಲಿಯವರೆಗೆ 92 ರಸ್ತೆ ಅಪಘಾತ ಸಾವಿನ ಪ್ರಕರಣಗಳು ಆಸ್ಪತ್ರೆಯಲ್ಲಿ ವರದಿಯಾಗಿವೆ.

ಶವಾಗಾರದಲ್ಲಿ ಈ ಜನರನ್ನು ಗುರುತಿಸಲು ಯಾರೂ ಬರುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಭಾನುವಾರ, ಆಸ್ಪತ್ರೆಯಲ್ಲಿ 23 ಸಾವುಗಳಲ್ಲಿ 12 ಗುರುತಿಸಲಾಗಿಲ್ಲ. ಪ್ರತಿ ತಿಂಗಳು ಸುಮಾರು 100 ಇಂತಹ ಪ್ರಕರಣಗಳು ಕಂಡುಬರುತ್ತವೆ.

ಪ್ರಸ್ತುತ, ಶವಾಗಾರದಲ್ಲಿ  ಸ್ಥಳಾವಕಾಶದ ಕೊರತೆಯಿಲ್ಲ, ಗುರುತಿಸಲಾಗದ ಶವಗಳು ರಾತ್ರಿಯಿಡೀ ಉಳಿಯುತ್ತವೆ.  ಅಪರಿಚಿತ ದೇಹಗಳು ಸುಮಾರು 20 ದಿನಗಳಿಂದ ಒಂದು ತಿಂಗಳವರೆಗೆ ಉಳಿಯುತ್ತವೆ, ಹೀಗಾಗಿ ಈ ಅಂಶವನ್ನು ಪರಿಗಣಿಸಬೇಕು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com