ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬಿಸಿಲಿನ ಝಳದಿಂದ ರೈಲು ಹಳಿಗೆ ಹೊಂದಿಕೊಂಡಿರುವ ರಬ್ಬರ್‌ಗೆ ಬೆಂಕಿ; 15 ನಿಮಿಷ ನಮ್ಮ ಮೆಟ್ರೋ ಸಂಚಾರ ಸ್ಥಗಿತ!

ಮೆಟ್ರೋ ಹಳಿಗೆ ಹೊಂದಿಕೊಂಡಂತೆ ಇರುವ ರಬ್ಬರ್‌ಗೆ ಬೆಂಕಿ ಹೊತ್ತುಕೊಂಡ ಕಾರಣ ನೇರಳೆ ಮಾರ್ಗದಲ್ಲಿ ಸುಮಾರು 15 ನಿಮಿಷಗಳ ಕಾಲು ರೈಲು ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ತೊಂದರೆಗೀಡಾದರು. ಸೋಮವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು, ರೈಲುಗಳ ಸಂಚಾರದಲ್ಲಿ 30 ನಿಮಿಷಗಳವರೆಗೆ ವಿಳಂಬ ಉಂಟಾಯಿತು. 

ಬೆಂಗಳೂರು: ಮೆಟ್ರೋ ಹಳಿಗೆ ಹೊಂದಿಕೊಂಡಂತೆ ಇರುವ ರಬ್ಬರ್‌ಗೆ ಬೆಂಕಿ ಹೊತ್ತುಕೊಂಡ ಕಾರಣ ನೇರಳೆ ಮಾರ್ಗದಲ್ಲಿ ಸುಮಾರು 15 ನಿಮಿಷಗಳ ಕಾಲು ರೈಲು ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ತೊಂದರೆಗೀಡಾದರು. ಸೋಮವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು, ರೈಲುಗಳ ಸಂಚಾರದಲ್ಲಿ 30 ನಿಮಿಷಗಳವರೆಗೆ ವಿಳಂಬ ಉಂಟಾಯಿತು. 

ತೀವ್ರವಾದ ಬಿಸಿಲಿನ ಝಳದಿಂದಾಗಿ ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದ ಉದ್ದಕ್ಕೂ ಹಳಿಗಳ ಮೇಲೆ ಹಾಕಲಾದ ರಬ್ಬರ್‌ಗೆ ಬೆಂಕಿ ಹೊತ್ತುಕೊಂಡಿದೆ. ಅಲರ್ಟ್ ಸ್ಟೇಷನ್ ಮ್ಯಾನೇಜರ್ ಇದನ್ನು ಗಮನಿಸಿ ಮಾಹಿತಿ ನೀಡಿದ್ದು, ಅಲ್ಲಿಗೆ ಸಮೀಪಿಸುತ್ತಿದ್ದ ರೈಲನ್ನು ನಿಲ್ಲಿಸಲಾಗಿದೆ ಎಂದು ಮೂಲವೊಂದು ತಿಳಿಸಿದೆ.

ಬೈಯಪ್ಪನಹಳ್ಳಿ, ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣ ಮತ್ತು ನಾಡಪ್ರಭು ಕೆಂಪೇಗೌಡ ಮೆಟ್ರೊ ನಿಲ್ದಾಣಗಳ ಪ್ಲಾಟ್‌ಫಾರ್ಮ್‌ಗಳಲ್ಲಿ ಹೆಚ್ಚಿನ ಜನಸಂದಣಿ ಕಂಡುಬಂದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮೆಟ್ರೋದ ಮೂಲವೊಂದು ಹೇಳುವಂತೆ, 'ರೈಲಿನ ಮೂಲಕ ಹಾದುಹೋಗುವ ರಿಟರ್ನ್ ಕರೆಂಟ್‌ನಿಂದಾಗಿ ನಾವು ಟ್ರ್ಯಾಕ್ ಫಿಟ್ಟಿಂಗ್‌ನಲ್ಲಿ ರಬ್ಬರ್ ಇನ್ಸುಲೇಶನ್ ಅನ್ನು ಒದಗಿಸಿದ್ದೇವೆ' ಎಂದಿದೆ.

ಇದರಿಂದ ಕ್ಷಣಮಾತ್ರದಲ್ಲಿ ಕಿಡಿಗಳು ಹೊತ್ತಿಕೊಂಡಿವೆ. ಬೆಳಗ್ಗೆ 9 ಗಂಟೆ ಸುಮಾರಿಗೆ ಬೈಯಪ್ಪನಹಳ್ಳಿಯಿಂದ ಸ್ವಾಮಿ ವಿವೇಕಾನಂದ ರಸ್ತೆಯ ನಿಲ್ದಾಣಕ್ಕೆ ರೈಲು ಬರುತ್ತಿದ್ದಂತೆ ನಿಲ್ದಾಣದ ವ್ಯವಸ್ಥಾಪಕರು ಕಿಡಿಗಳನ್ನು ಗಮನಿಸಿದ್ದಾರೆ. ಅವರು ತಕ್ಷಣ ನಿಯಂತ್ರಣ ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದಾರೆ ಮತ್ತು ರೈಲನ್ನು ತಕ್ಷಣವೇ ನಿಲ್ಲಿಸಲಾಗಿದೆ. ಘಟನೆ ನಡೆದ ಸ್ಥಳಕ್ಕಿಂತ 10 ಮೀಟರ್ ದೂರದಲ್ಲಿ ರೈಲನ್ನು ನಿಲ್ಲಿಸಲಾಗಿದೆ.

ನಂತರ ಬೆಂಕಿಯನ್ನು ಆರಿಸಲಾಯಿತು. ನಮ್ಮ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಸುರಕ್ಷಿತವಾಗಿದೆಯೇ ಎಂದು ಪರಿಶೀಲಿಸಿದರು ಮತ್ತು ನಂತರ ರೈಲು ಹಾದುಹೋಗಲು ಅವಕಾಶ ನೀಡಲಾಯಿತು ಎಂದು ಅವರು ಹೇಳಿದರು.

ಮುನ್ನೆಚ್ಚರಿಕೆ ಕ್ರಮವಾಗಿ, ಕಾರ್ಯಾಚರಣೆಯನ್ನು ಅಲ್ಪಾವಧಿಗೆ ಸ್ಥಗಿತಗೊಳಿಸಲಾಯಿತು. 'ಅಪ್ ಮತ್ತು ಡೌನ್ ಎರಡೂ ದಿಕ್ಕಿನಲ್ಲಿ ಪವರ್ ಬ್ಲಾಕ್ ಅನ್ನು ತೆಗೆದುಕೊಳ್ಳಲಾಗಿದೆ. ಆದ್ದರಿಂದ, ಸ್ವಾಮಿ ವಿವೇಕಾನಂದ ರಸ್ತೆಯ (ಇಂದಿರಾನಗರ ಮತ್ತು ಬೈಯಪ್ಪನಹಳ್ಳಿ) ಮೊದಲು ಮತ್ತು ನಂತರದ ನಿಲ್ದಾಣಗಳಲ್ಲಿನ ರೈಲುಗಳ ಸಂಚಾರದ ಮೇಲೆ ಪರಿಣಾಮ ಉಂಟಾಯಿತು. ಕ್ಯಾಸ್ಕೇಡಿಂಗ್ ಪರಿಣಾಮವಾಗಿ ಇತರ ನಿಲ್ದಾಣಗಳಲ್ಲಿನ ರೈಲುಗಳ ಮೇಲೂ ಪ್ರಭಾವ ಉಂಟಾಯಿತು' ಎಂದು ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿಎಲ್ ಯಶವಂತ ಚವಾಣ್ ಕಾರ್ಯಾಚರಣೆಯಲ್ಲಿ ಅಡಚಣೆಯನ್ನು ದೃಢಪಡಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com