ಶಾಸಕ ಕೃಷ್ಣಭೈರೇಗೌಡ
ಶಾಸಕ ಕೃಷ್ಣಭೈರೇಗೌಡ

ತಿದ್ದುಪಡಿ ನೋಂದಣಿ ಕಾಯ್ದೆಯಿಂದ ಆಸ್ತಿ ಮಾಲೀಕರಿಗೆ ಲಾಭ; ಫೋರ್ಜರಿ, ಆಸ್ತಿ ವಂಚನೆ ತಡೆಗೆ ನೆರವು: ಸಚಿವ ಕೃಷ್ಣ ಬೈರೇಗೌಡ

ತಿದ್ದುಪಡಿ ರಿಜಿಸ್ಟ್ರೇಷನ್ ಕಾಯ್ದೆಯಿಂದ ಆಸ್ತಿ ಮಾಲೀಕರಿಗೆ ಲಾಭವಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಬೆಂಗಳೂರು: ತಿದ್ದುಪಡಿ ರಿಜಿಸ್ಟ್ರೇಷನ್ ಕಾಯ್ದೆಯಿಂದ ಆಸ್ತಿ ಮಾಲೀಕರಿಗೆ ಲಾಭವಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ನೋಂದಣಿ ಕಾಯಿದೆ 1908ಕ್ಕೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಈ ವರ್ಷ ಜುಲೈ 19ರಂದು ಕರ್ನಾಟಕ ವಿಧಾನಸಭೆ ಅಂಗೀಕರಿಸಿದ ಮಹತ್ವದ ಮಸೂದೆಗೆ ರಾಷ್ಟ್ರಪತಿಗಳ ಅಂಕಿತ ಬೀಳಲಿದೆ. ನಕಲಿ ದಾಖಲೆಗಳನ್ನು ಬಳಸಿ ನೋಂದಣಿ ರದ್ದು ಮಾಡುವ ಹಕ್ಕನ್ನು ಜಿಲ್ಲಾ ರಿಜಿಸ್ಟ್ರಾರ್‌ಗಳಿಗೆ ಅಧಿಕಾರ ನೀಡುವ ಮೂಲಕ ವಂಚನೆ ಮತ್ತು ಸಂತ್ರಸ್ಥರ ಆಸ್ತಿ ಮಾಲೀಕರಿಗೆ ಹೆಚ್ಚಿನ ಪರಿಹಾರವನ್ನು ನೀಡಲು ಮತ್ತು ನಕಲಿ ದಾಖಲೆಗಳಲ್ಲಿ ತೊಡಗಿರುವ ಅಧಿಕಾರಿಗಳಿಗೆ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ನೀಡಲು ನಿರ್ಧರಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ಹೇಳಿದ್ದಾರೆ.

ತಿದ್ದುಪಡಿ ಕಾಯ್ದೆ ಕುರಿತು  TNIE ಜೊತೆ ಮಾತನಾಡಿದ  ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, “ಆಸ್ತಿ ಮಾಲೀಕರಿಗೆ ತಕ್ಷಣದ ಪರಿಹಾರವನ್ನು ಒದಗಿಸುವುದು ಉದ್ದೇಶವಾಗಿದೆ. ಈಗಿನಂತೆ, ವಂಚನೆಯ ಬಲಿಪಶುಗಳಿಗೆ ಅಥವಾ ನಕಲಿ ದಾಖಲೆಗಳನ್ನು ಬಳಸಿದ ಸಂದರ್ಭಗಳಲ್ಲಿ ದಾವೆಯು ಏಕೈಕ ಮಾರ್ಗವಾಗಿದೆ. ಸರ್ಕಾರಿ ಜಮೀನುಗಳಲ್ಲಿಯೂ ಇದು ಸಂಭವಿಸುತ್ತದೆ. ವಿವಿಧ ನ್ಯಾಯಾಲಯಗಳ ಮೂಲಕ ಪರಿಹಾರ ಪಡೆಯಲು 10 ವರ್ಷಗಳವರೆಗೆ ಸಮಯ ತೆಗೆದುಕೊಳ್ಳಬಹುದು. ಅನೇಕ ಮಾಲೀಕರಿಗೆ ಪ್ರಕರಣ ಮುಂದುವರೆಸಲು ಸಂಪನ್ಮೂಲಗಳಿಲ್ಲ, ಇದಕ್ಕಾಗಿ ರಾಜಿಗೆ ಮುಂದಾಗಿ ಅಥವಾ ತಮ್ಮ ಪಾಲಿನ ಒಂದು ಭಾಗವನ್ನು ಕಳೆದುಕೊಳ್ಳುತ್ತಾರೆ. ತಮಿಳುನಾಡು ಈಗಾಗಲೇ ಅಂತಹ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ರೀತಿಯ ವ್ಯವಸ್ಥೆ ರಾಜ್ಯಕ್ಕೂ ಬೇಕಿದೆ ಎಂದು ಹೇಳಿದರು.

ಇದೇ ರೀತಿಯ ಸಮಸ್ಯೆಯಲ್ಲಿರುವ ಕುಟುಂಬವೊಂದು TNIEಗೆ ಸಿಕ್ಕಿದ್ದು, ತನ್ನ ಆಸ್ತಿ ಮೇಲಿನ ಮಾಲೀಕತ್ವ ಸ್ಥಾಪನೆಗಾಗಿ ಕಳೆದ ಎರಡು ವರ್ಷಗಳಿಂದ ಹೋರಾಟ ನಡೆಸುತ್ತಿದೆ. ವಿಪರ್ಯಾಸವೆಂದರೆ ದಿನೇಶ್ ಬಾಳಿಗಾ ಮತ್ತು ಪತ್ನಿ ದಿವ್ಯಾ ತಮ್ಮ ಮನೆಯನ್ನು ತಮ್ಮ ಹೆಸರಿಗೆ ಮರು ನೋಂದಣಿ ಮಾಡಲು 2.5 ಲಕ್ಷ ರೂಪಾಯಿಗಳನ್ನು ಮುದ್ರಾಂಕ ಶುಲ್ಕವಾಗಿ ಪಾವತಿಸಬೇಕಾಗುತ್ತದೆ. ಜೆಪಿ ನಗರದ 4ನೇ ಹಂತದಲ್ಲಿರುವ ಪಾಂಡುರಂಗನಗರದಲ್ಲಿರುವ 'ಆಡೆಲ್ ಹೈಟ್ಸ್' ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ದಂಪತಿಗಳು ನಾಲ್ಕು ಫ್ಲಾಟ್‌ಗಳನ್ನು ಪಡೆದಿದ್ದಾರೆ. 

ಈ ಕುರಿತು ಮಾತನಾಡಿದ ಬಾಳಿಗಾ ಅವರು, “ನಾವು ಮೂರು ಫ್ಲಾಟ್‌ಗಳನ್ನು ಮಾರಾಟ ಮಾಡಿದ್ದೇವೆ, ಅದನ್ನು ನಾವು 75 ಲಕ್ಷ ರೂಪಾಯಿ ಎಂದು ಅಂದಾಜಿಸಿದೆವು. ನಾವು ಅನೇಕ ಖರೀದಿದಾರರನ್ನು ತಿರಸ್ಕರಿಸಿದರೂ, ಕೀರ್ತನಾ ಎಂಬುವವರು ಮನೆಗೇ ಬಂದು 5,000 ರೂ ಠೇವಣಿ ಪಾವತಿಸಿದರು. ಹೀಗಾಗಿ ನಾವು ಅವರಿಗೆ ಮನೆಯ ದಾಖಲೆಗಳ ಪ್ರತಿಗಳನ್ನು ನೀಡಿದೆವು. ಅದರೆ ಬಳಿಕ ನಂತರ ಅವರು ಎಂದಿಗೂ ಕಾಣಿಸಲೇ ಇಲ್ಲ. ಒಂದು ವರ್ಷದ ನಂತರ, ನಮ್ಮ ಮನೆ ಮಾಲೀಕರ ಸಂಘದಿಂದ ನನಗೆ ಕರೆ ಬಂತು, ಶ್ರೀಧರ್ ಎಂಬ ವ್ಯಕ್ತಿ ಅವರನ್ನು ಭೇಟಿಯಾಗಿ ಅವರ ಪತ್ನಿ (ಅರ್ಚನಾ ಆರ್) ಮನೆಯನ್ನು ಖರೀದಿಸಿದ್ದಾರೆ ಮತ್ತು ಅವರು ಒಂದೆರಡು ದಿನಗಳಲ್ಲಿ ಹೋಗುತ್ತಾರೆ ಎಂದು ಹೇಳಿದರು" ಎಂದು ಅವರು ವಿವರಿಸಿದರು. ನಂತರ ನಕಲಿ ಮತ್ತು ವಂಚಿಸುವ ಜಾಲವನ್ನು ಬಿಚ್ಚಿಟ್ಟರು. ಸರಣಿ ಅಪರಾಧಿ ಮಹಿಳೆ, ಬಿಟಿಎಂ ಸಬ್ ರಿಜಿಸ್ಟ್ರಾರ್ ಕಚೇರಿಯ ಉದ್ಯೋಗಿ ಮತ್ತು ಮಲ್ಲೇಶ್ವರಂನಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್ ಉದ್ಯೋಗಿಯ ಸಹಾಯವನ್ನು ಪಡೆದಿದ್ದು, ಅವರು 69 ಲಕ್ಷ ರೂಪಾಯಿ ಸಾಲವನ್ನು ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ತಿಳಿದು ಆಘಾತವಾಯಿತು ಎಂದು ಬಾಳಿಗಾ ಹೇಳಿದ್ದಾರೆ.

ಕೂಡಲೇ ಬಾಳಿಗಾ ದಂಪತಿ ಪೊಲೀಸರನ್ನು ಸಂಪರ್ಕಿಸಿದ್ದು, ಹೊಸ ಖರೀದಿದಾರರಿಗೆ ನೀಡಲಾದ ಬ್ಯಾಂಕ್ ಸಾಲದ ಚೆಕ್ ಅನ್ನು ತಡೆ ಹಿಡಿದಿದ್ದಾರೆ. ಮತ್ತು ಮನೆಯ ಬೀಗವನ್ನು ಬದಲಾಯಿಸಿದ್ದಾರೆ. "ಮೋಸದ ವಹಿವಾಟನ್ನು ರದ್ದುಗೊಳಿಸುವ ಮೂಲಕ ಮತ್ತು ಬ್ಯಾಂಕ್ ಹೈಪೋಥಿಕೇಶನ್ ಅನ್ನು ರದ್ದುಗೊಳಿಸುವ ಮೂಲಕ ನಮ್ಮ ಮನೆಯನ್ನು ಹಿಂಪಡೆಯಲು ತಾವು ಅನುಭವಿಸಿದ ಪ್ರಕ್ಷುಬ್ಧ ಪ್ರಯಾಣವನ್ನು ವಿವರಿಸಿದ್ದಾರೆ. ಅಲ್ಲದೇ ರಿಯಲ್ ಎಸ್ಟೇಟ್ ಫೋರ್ಜರಿ ಮತ್ತು ಸಡಿಲವಾದ ಪರಿಶೀಲನೆ ಪ್ರಕ್ರಿಯೆಗಳ ಸಂಕೀರ್ಣತೆಯ ವಿವರ ನೀಡಿದ್ದಾರೆ. 

ಈ ಗ್ಯಾಂಗ್ ನಕಲಿ ಬಿಬಿಎಂಪಿ ತೆರಿಗೆ ದಾಖಲೆಗಳು, ಪ್ಯಾನ್ ಮತ್ತು ಆಧಾರ್ ಕಾರ್ಡ್‌ಗಳನ್ನು ಸಲ್ಲಿಸಿದೆ. ಸೇಲ್ ಡೀಡ್ ಅಪ್ಲಿಕೇಶನ್ ಅನ್ನು ಬೆಂಬಲಿಸಲು ಅವರು ಯಾವುದೇ ಆನ್‌ಲೈನ್ ಹಣಕಾಸು ವಹಿವಾಟಿನ ವಿವರಗಳನ್ನು ಒದಗಿಸಿಲ್ಲ. ಸಹಿಗಳ ವಿಧಿವಿಜ್ಞಾನ ವಿಶ್ಲೇಷಣೆಯು ಹದಿನೈದು ದಿನಗಳ ಹಿಂದೆ ಬಂದಿತು ಎಂದು ಬಾಳಿಗಾ ಹೇಳಿದರು.

ಸಿಟಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ ನಂತರ ಪುಟ್ಟೇನಹಳ್ಳಿ ಠಾಣೆಯ ಪೊಲೀಸರು ಮತ್ತು ಮುದ್ರಾಂಕ ಮತ್ತು ನೋಂದಣಿ ಇಲಾಖೆ ದಂಪತಿಗೆ ತಮ್ಮ ಆಸ್ತಿಯನ್ನು ಹಿಂಪಡೆಯಲು ಸಹಾಯ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

Related Stories

No stories found.

Advertisement

X
Kannada Prabha
www.kannadaprabha.com