ಬೆಂಗಳೂರಿನಲ್ಲಿ UPI ಮೂಲಕ ರಸ್ತೆ ಬದಿ ತರಕಾರಿ ಖರೀದಿಸಿದ ಜರ್ಮನಿ ಸಚಿವ, ಭಾರತದ ಡಿಜಿಟಲ್ ಪೇಮೆಂಟ್ ಕ್ರಾಂತಿಗೆ ಶ್ಲಾಘನೆ!

ಜಿ-20 ಶೃಂಗಸಭೆಗಾಗಿ ಬೆಂಗಳೂರಿಗೆ ಆಗಮಿಸಿರುವ ಜರ್ಮನಿಯ ಸಚಿವರೊಬ್ಬರು ರಸ್ತೆಬದಿ ತರಕಾರಿ ಖರೀದಿ ಮಾಡಿ ಯುಪಿಐ ಮೂಲಕ ಹಣ ಪಾವತಿ ಮಾಡಿದ್ದಾರೆ.
UPI ಮೂಲಕ ರಸ್ತೆ ಬದಿ ತರಕಾರಿ ಖರೀಸಿದಿಸಿದ ಜರ್ಮನಿ ಸಚಿವ
UPI ಮೂಲಕ ರಸ್ತೆ ಬದಿ ತರಕಾರಿ ಖರೀಸಿದಿಸಿದ ಜರ್ಮನಿ ಸಚಿವ
Updated on

ಬೆಂಗಳೂರು: ಜಿ-20 ಶೃಂಗಸಭೆಗಾಗಿ ಬೆಂಗಳೂರಿಗೆ ಆಗಮಿಸಿರುವ ಜರ್ಮನಿಯ ಸಚಿವರೊಬ್ಬರು ರಸ್ತೆಬದಿ ತರಕಾರಿ ಖರೀದಿ ಮಾಡಿ ಯುಪಿಐ ಮೂಲಕ ಹಣ ಪಾವತಿ ಮಾಡಿದ್ದಾರೆ.

ಹೌದು.. ಜರ್ಮನಿಯ ಡಿಜಿಟಲ್ ಮತ್ತು ಸಾರಿಗೆಯ ಫೆಡರಲ್ ಮಂತ್ರಿ, ವೋಲ್ಕರ್ ವಿಸ್ಸಿಂಗ್ ಅವರು UPI (ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ಪಾವತಿಗಳ ಸರಳತೆಯನ್ನು ನೇರವಾಗಿ ಅನುಭವಿಸಲು ಸಾಧ್ಯವಾಗಿದ್ದು, ಮಾತ್ರವಲ್ಲದೇ ಭಾರತದ ಡಿಜಿಟಲ್ ಪೇಮೆಂಟ್ ಪಯಣವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಈ ವಿಚಾರವಾಗಿ ಭಾರತದಲ್ಲಿನ ಜರ್ಮನ್ ರಾಯಭಾರ ಕಚೇರಿ ಟ್ವೀಟ್ ಮಾಡಿದ್ದು, ಭಾರತದ ಡಿಜಿಟಲ್ ಮೂಲಸೌಕರ್ಯವನ್ನು ಹೊಗಳಿರುವ ಅವರು ಅದನ್ನು ದೇಶದ ಯಶಸ್ಸಿನ ಕಥೆಗಳಲ್ಲಿ ಒಂದಾಗಿದೆ ಎಂದು ಬಣ್ಣಿಸಿದ್ದಾರೆ.

ಅಂತೆಯೇ ಭಾರತದಲ್ಲಿನ ಜರ್ಮನ್ ರಾಯಭಾರ ಕಚೇರಿಯು ವಿಸ್ಸಿಂಗ್ ದಿನಸಿ ವಸ್ತುಗಳನ್ನು ಖರೀದಿಸುವ ಮತ್ತು ಪಾವತಿಗಳನ್ನು ಮಾಡಲು UPI ಬಳಸುವ ವೀಡಿಯೊಗಳು ಮತ್ತು ಚಿತ್ರಗಳನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದೆ.

ಪೋಸ್ಟ್‌ನಲ್ಲಿ, "ಭಾರತದ ಯಶಸ್ಸಿನ ಕಥೆಯೆಂದರೆ ಡಿಜಿಟಲ್ ಮೂಲಸೌಕರ್ಯ. UPI ಪ್ರತಿಯೊಬ್ಬರನ್ನು ಸೆಕೆಂಡುಗಳಲ್ಲಿ ವಹಿವಾಟು ಮಾಡಲು ಅನುವು ಮಾಡಿಕೊಡುತ್ತದೆ. ಲಕ್ಷಾಂತರ ಭಾರತೀಯರು ಇದನ್ನು ಬಳಸುತ್ತಿದ್ದಾರೆ. ಫೆಡರಲ್ ಡಿಜಿಟಲ್ ಮತ್ತು ಸಾರಿಗೆ ಸಚಿವ @Wissing ಅವರು UPI ಪಾವತಿಗಳ ಸರಳತೆಯನ್ನು ಮೊದಲು ಅನುಭವಿಸಲು ಸಾಧ್ಯವಾಯಿತು. ಡಿಜಿಟಲ್ ಪಾವತಿ ಸೇವೆಯಿಂದ ಅವರ ತುಂಬಾ ಆಕರ್ಷಿತರಾದರು ಎಂದು ಹೇಳಿದೆ.

ಇನ್ನು ಜರ್ಮನ್ ರಾಯಭಾರ ಕಚೇರಿಯ ಟ್ವೀಟ್ ಗೆ ಹಲವರು ಪ್ರತಿಕ್ರಿಯಿಸಿದ್ದು, 'ಭಾರತದ ಡಿಜಿಟಲ್ ಆರ್ಥಿಕ ಕ್ರಾಂತಿಯ ಭಾಗವಾಗಿದ್ದಕ್ಕಾಗಿ ವಿಸ್ಸಿಂಗ್‌ಗೆ ಧನ್ಯವಾದಗಳು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೋರ್ವ ಬಳಕೆದಾರರು, "ನಗದು-ಮಾತ್ರ ವಹಿವಾಟುಗಳೊಂದಿಗೆ ಹೆಣಗಾಡುತ್ತಿರುವ ಜರ್ಮನಿಯಲ್ಲಿರುವ ಜರ್ಮನ್ ವ್ಯಾಪಾರಿಗಳು ಮತ್ತು ಅಂಗಡಿಯವರಿಗೆ ಇದು ಆಶೀರ್ವಾದವಾಗಿದೆ ಎಂದು ಹೇಳುವ ಮೂಲಕ ಜರ್ಮನಿಯಲ್ಲೂ ಡಿಜಿಟಲ್ ಪಾವತಿಗಾಗಿ ಒತ್ತಾಯಿಸಿದ್ದಾರೆ. ಮತ್ತೋರ್ವ ಬಳಕೆದಾರರು "UPI ಗೋಸ್ ಗ್ಲೋಬಲ್! ಜರ್ಮನಿ ಯಾವಾಗ UPI ಪ್ಲಾಟ್‌ಫಾರ್ಮ್‌ಗೆ ಸೇರುತ್ತದೆ?" ಪ್ರಶ್ವಿಸಿದ್ದಾರೆ.

G20 ಡಿಜಿಟಲ್ ಮಂತ್ರಿಗಳ ಸಭೆಯಲ್ಲಿ ಭಾಗವಹಿಸಲು ಆಗಸ್ಟ್ 19 ರಂದು ಪಾಲ್ಗೊಳ್ಳಲು ವಿಸ್ಸಿಂಗ್ ಅವರು ಬೆಂಗಳೂರಿಗೆ ಬಂದಿದ್ದರು.

ಗಮನಾರ್ಹವಾಗಿ, ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಭಾರತದ ವೇಗದ ಪಾವತಿ ವ್ಯವಸ್ಥೆಯಾಗಿದೆ. ಇದು ಗ್ರಾಹಕರಿಗೆ ರೌಂಡ್-ದಿ-ಕ್ಲಾಕ್ ಪಾವತಿಗಳನ್ನು ತ್ವರಿತವಾಗಿ ಮಾಡಲು ಅನುಕೂಲ ಮಾಡುತ್ತದೆ. ಇದು ಗ್ರಾಹಕರು ರಚಿಸಿದ ವರ್ಚುವಲ್ ಪಾವತಿ ವಿಳಾಸವನ್ನು (VPA) ಬಳಸುತ್ತದೆ. ಇಲ್ಲಿಯವರೆಗೆ, ಶ್ರೀಲಂಕಾ, ಫ್ರಾನ್ಸ್, ಯುಎಇ ಮತ್ತು ಸಿಂಗಾಪುರವು ಉದಯೋನ್ಮುಖ ಫಿನ್‌ಟೆಕ್ ಮತ್ತು ಪಾವತಿ ಪರಿಹಾರಗಳಲ್ಲಿ ಭಾರತದೊಂದಿಗೆ ಪಾಲುದಾರಿಕೆ ಮಾಡಿಕೊಂಡಿವೆ. ಯುಪಿಐ ಪಾವತಿ ಕಾರ್ಯವಿಧಾನವನ್ನು ಬಳಸಲು ಭಾರತ ಮತ್ತು ಫ್ರಾನ್ಸ್ ಒಪ್ಪಿಕೊಂಡಿವೆ ಎಂದು ಜುಲೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com