ಜೈಲು ಸೇರಿದ ತಂದೆ, ಮಗ; ಮನನೊಂದು ತಾಯಿ ಆತ್ಮಹತ್ಯೆ, ಹೃದಯಾಘಾತದಿಂದ ಪತಿ ಸಾವು

ಕೊಲೆ ಪ್ರಕರಣದಲ್ಲಿ ತಂದೆ ಮತ್ತು ಮಗ ಜೈಲು ಸೇರಿದ ಬಳಿಕ ಮನನೊಂದ ತಾಯಿಯೊಬ್ಬರು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಮೈಸೂರಿನಲ್ಲಿ ಮಂಗಳವಾರ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಮೈಸೂರು: ಕೊಲೆ ಪ್ರಕರಣದಲ್ಲಿ ತಂದೆ ಮತ್ತು ಮಗ ಜೈಲು ಸೇರಿದ ಬಳಿಕ ಮನನೊಂದ ತಾಯಿಯೊಬ್ಬರು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಮೈಸೂರಿನಲ್ಲಿ ಮಂಗಳವಾರ ನಡೆದಿದೆ.

ಇತ್ತ ಪತಿ ಆತ್ಮಹತ್ಯೆಗೆ ಶರಣಾದ ವಿಚಾರ ತಿಳಿದ ಪತಿಗೆ ಜೈಲಿನಲ್ಲೇ ಹೃದಯಾಘಾತವಾಗಿದ್ದು, ಅವರೂ ಕೂಡ ಸಾವನ್ನಪ್ಪಿದ್ದಾರೆ.

ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ಇಂದ್ರಾಣಿ (35) ಎಂದು ಗುರ್ತಿಸಲಾಗಿದೆ. ಮೈಸೂರಿನ ವಿದ್ಯಾನಗರದಲ್ಲಿ ಬಾಲರಾಜ್ ಎಂಬಾತನ ಕೊಲೆಯಾಗಿತ್ತು. ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರು ಸಾಮ್ರಾಟ್ ಮತ್ತು ಆತನ ಪುತ್ರ ತೇಜಸ್‌ನನ್ನು ಬಂಧನಕ್ಕೊಳಪಡಿಸಿದ್ದರು. ಇದರಿಂದ ಖಿನ್ನತೆಗೊಳಗಾಗಿದ್ದ ಇಂದ್ರಾಣಿಯವರು ನೋವು ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಈ ನಡುವೆ ಪ್ರಕರಣದಲ್ಲಿ ಜೈಲು ಸೇರಿದ್ದ ಸಾಮ್ರಾಟ್ ಅವರಿಗೆ ಪತ್ನಿಯ ಆತ್ಮಹತ್ಯೆಯ ವಿಚಾರ ತಿಳಿದಿದ್ದು, ಈ ವೇಳೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಈ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com