ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಿಚಾಂಗ್ ಚಂಡಮಾರುತ ಎಫೆಕ್ಟ್: ಕರ್ನಾಟಕ-ತಮಿಳುನಾಡು ನಡುವಿನ ರೈಲು ಸಂಚಾರದಲ್ಲಿ ಅಡಚಣೆ

ಮಿಚಾಂಗ್ ಚಂಡಮಾರುತವು ತಮಿಳುನಾಡು-ಕರ್ನಾಟಕದ ನಡುವೆ ಚಲಿಸುವ 40ಕ್ಕೂ ಹೆಚ್ಚು ರೈಲುಗಳ ಸಂಚಾರದ ಮೇಲೆ ಪರಿಣಾಮ ಬೀರಿದೆ.
Published on

ಬೆಂಗಳೂರು: ಮಿಚಾಂಗ್ ಚಂಡಮಾರುತವು ತಮಿಳುನಾಡು-ಕರ್ನಾಟಕದ ನಡುವೆ ಚಲಿಸುವ 40ಕ್ಕೂ ಹೆಚ್ಚು ರೈಲುಗಳ ಸಂಚಾರದ ಮೇಲೆ ಪರಿಣಾಮ ಬೀರಿದೆ.

ಚಂಡಮಾರುತದ ಪರಿಣಾಮ ದಕ್ಷಿಣ ರೈಲ್ವೆ ಒಂಬತ್ತು ರೈಲುಗಳನ್ನು ರದ್ದುಗೊಳಿಸಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ರದ್ದಾದ ರೈಲುಗಳು ಇಂತಿವೆ...
ಡಾ ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು-ಚೆನ್ನೈ ಸೆಂಟ್ರಲ್ (ರೈಲು ಸಂಖ್ಯೆ 20607/20608); ಡಾ ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು-ಚೆನ್ನೈ ಸೆಂಟ್ರಲ್ (ರೈಲು ಸಂಖ್ಯೆ 12007/12008); ಡಾ ಎಂಜಿಆರ್ ಚೆನ್ನೈ ಸೆಂಟ್ರಲ್-ಕೆಎಸ್ಆರ್ ಬೆಂಗಳೂರು-ಚೆನ್ನೈ ಸೆಂಟ್ರಲ್ (ರೈಲು ಸಂಖ್ಯೆ 22625/22626); ಡಾ ಎಂಜಿಆರ್ ಚೆನ್ನೈ-ಸೆಂಟ್ರಲ್-ಕೆಎಸ್ಆರ್ ಬೆಂಗಳೂರು-ಚೆನ್ನೈ ಸೆಂಟ್ರಲ್ (ರೈಲು ಸಂಖ್ಯೆ 12639/12640) ಮತ್ತು ಕೆಎಸ್ಆರ್ ಬೆಂಗಳೂರು-ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ (ರೈಲು ಸಂಖ್ಯೆ. 12608). ಕೆಎಸ್‌ಆರ್ ಬೆಂಗಳೂರು-ನ್ಯೂ ಟಿನ್‌ಸುಕಿಯಾ (ಟ್ರೇನ್ ಸಂಖ್ಯೆ 22501) ಮತ್ತು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್-ಅಗರ್ತಲಾ (ರೈಲು ಸಂಖ್ಯೆ 12503) ರದ್ದುಗೊಂಡ ರೈಲುಗಳಾಗಿವೆ.

ದಕ್ಷಿಣ ಭಾರತದಲ್ಲಿ ಮಳೆ, ತೀವ್ರ ಪ್ರವಾಹ ಸೃಷ್ಟಿಸಿರುವ ಮಿಚಾಂಗ್ ಚಂಡಮಾರುತ ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಮಿಚಾಂಗ್' ಚಂಡಮಾರುತವು ಇಂದು ಆಂಧ್ರಪ್ರದೇಶದ ನೆಲ್ಲೂರು ಮತ್ತು ಮಚಲಿಪಟ್ಟಣಂ ನಡುವೆ ಭೂಕುಸಿತವನ್ನು ಉಂಟುಮಾಡುವ ಸಾಧ್ಯತೆಯಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com