ಕೋವಿಡ್ ಹೆಚ್ಚಳ: ತುರ್ತು ಪರಿಸ್ಥಿತಿ ನಿಭಾಯಿಸಲು ಬಿಎಂಸಿಆರ್ ಐ, ಬಿಬಿಎಂಪಿ ಸನ್ನದ್ಧ!

ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳು ಮತ್ತು ರಾಜ್ಯ ಸರ್ಕಾರದ ನಿರ್ದೇಶನದಂತೆ, ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ)  ಕೋವಿಡ್ ಶಂಕಿತರಿಗಾಗಿ  ಪ್ರತ್ಯೇಕ ಚಿಕಿತ್ಸೆ ಪ್ರದೇಶ ಸ್ಥಾಪನೆ ಸಾರಿ ಮತ್ತು ಐಎಲ್ಐ ರೋಗಿಗಳಿಂದ ಗಂಟಲು ಸ್ವ್ಯಾಬ್ ಸಂಗ್ರಹಿಸುವಂತಹ  ಸಿದ್ಧತೆಗಳನ್ನು ಪ್ರಾರಂಭಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳು ಮತ್ತು ರಾಜ್ಯ ಸರ್ಕಾರದ ನಿರ್ದೇಶನದಂತೆ, ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ)  ಕೋವಿಡ್ ಶಂಕಿತರಿಗಾಗಿ  ಪ್ರತ್ಯೇಕ ಚಿಕಿತ್ಸೆ ಪ್ರದೇಶ ಸ್ಥಾಪನೆ ಸಾರಿ ಮತ್ತು ಐಎಲ್ಐ ರೋಗಿಗಳಿಂದ ಗಂಟಲು ಸ್ವ್ಯಾಬ್ ಸಂಗ್ರಹಿಸುವಂತಹ  ಸಿದ್ಧತೆಗಳನ್ನು ಪ್ರಾರಂಭಿಸಿದೆ.

ಪ್ರಕರಣಗಳ ಸಂಖ್ಯೆ ಹೆಚ್ಚಾದಂತೆ, ಆಸ್ಪತ್ರೆ ಆವರಣದಲ್ಲಿ ಪ್ರತ್ಯೇಕ ತಪಾಸಣಾ ಪ್ರದೇಶಕ್ಕೆ ವ್ಯವಸ್ಥೆ ಮಾಡಲಾಗಿದೆ. ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ಮೈಕ್ರೋಬಯಾಲಜಿ ವಿಭಾಗದಲ್ಲಿ ಪ್ರತಿದಿನ ಕೋವಿಡ್ ಗಾಗಿ ನಿಯಮಿತ ಪರೀಕ್ಷೆ ನಡೆಯುತ್ತಿದೆ.

ಈ ಮಧ್ಯೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇದುವರೆಗೆ 1,791 ಆರ್ ಟಿಪಿಸಿಆರ್ ಮತ್ತು 472 Rat ಪರೀಕ್ಷೆಗಳನ್ನು ನಡೆಸಲಾಗಿದೆ ಮತ್ತು 93 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಪ್ರಕರಣಗಳನ್ನು ಎದುರಿಸಲು ಬಿಬಿಎಂಪಿ ಆರೋಗ್ಯ ಇಲಾಖೆ ಸನ್ನದ್ಧವಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

ವಿವಿಧ ವಿಭಾಗಗಳ ಮೂಲಕ ಅಗತ್ಯ ಸಿಬ್ಬಂದಿ ಮತ್ತು ಸಲಕರಣೆಗಳನ್ನು ಕ್ರೋಡೀಕರಿಸಿ ರೋಗಿಗಳ ಆರೈಕೆಗೆ ಬಳಸಿಕೊಳ್ಳಲಾಗುತ್ತಿದೆ. ಸಾಕಷ್ಟು ವೈದ್ಯರು, ದಾದಿಯರು, ತಂತ್ರಜ್ಞರು, ಅರೆವೈದ್ಯಕೀಯ ಸಿಬ್ಬಂದಿ ಮತ್ತು ವೆಂಟಿಲೇಟರ್‌ಗಳು, ಪಿಪಿಇ ಕಿಟ್‌ಗಳು, ಎನ್ -95 ಮಾಸ್ಕ್‌ಗಳು, ಆಕ್ಸಿಜನ್ ಸಿಲಿಂಡರ್‌ಗಳು, ಲಿಕ್ವಿಡ್ ಆಕ್ಸಿಜನ್ ಟ್ಯಾಂಕ್‌ಗಳು, ಆಕ್ಸಿಜನ್ ಜನರೇಟರ್‌ಗಳು ಆಮ್ಲಜನಕದ ಸಾಂದ್ರೀಕರಣ ಇತ್ಯಾದಿ ಉಪಕರಣಗಳಿವೆ ಎಂದು ಬಿಬಿಎಪಿ ಮತ್ತು ಬಿಎಂಸಿಆರ್ ಐ ಎರಡೂ ಹೇಳಿಕೊಂಡಿವೆ.

ಡಿಸೆಂಬರ್ 22 ರಂದು ವರದಿಯಾದ ಒಟ್ಟು ಪಾಸಿಟಿವ್ ಪ್ರಕರಣಗಳು: 78

ಒಟ್ಟು ಸಕ್ರಿಯ ಪ್ರಕರಣಗಳು: 175 (ICU ನಲ್ಲಿ 6, ಸಾಮಾನ್ಯ ಹಾಸಿಗೆಯಲ್ಲಿ 7, 162 ಮನೆಯಲ್ಲಿ ಪ್ರತ್ಯೇಕತೆ)
ಒಟ್ಟು ಪರೀಕ್ಷೆಗಳು: 2,366
ಒಟ್ಟು ಸಾವು: 1
ಪಾಸಿಟಿವ್ ದರ: ಶೇ. 3.29 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com