ರಾಜ್ಯದ ಬರಪೀಡಿತ ಪ್ರದೇಶಗಳ ರೈತರಿಗೆ ವರದಾನ ಈ ಹೊಸ ಹತ್ತಿ ತಳಿ!

ರಾಜ್ಯ ಬರಗಾಲದಿಂದ ತತ್ತರಿಸುತ್ತಿದ್ದು, ರೈತರು ತಮ್ಮ ನಷ್ಟದಿಂದ ಕಂಗೆಡುತ್ತಿರುವಾಗ, ಹತ್ತಿ ಬೆಳೆಯುತ್ತಿರುವವರ ಮುಖದಲ್ಲಿ ಮಂದಹಾಸ ಮೂಡಿದೆ. ಬರ ಪರಿಸ್ಥಿತಿ ಹತ್ತಿ ಸಂಶೋಧನೆಗೆ ಸಹಾಯಕವಾಗಿದೆ ಎಂಬುದನ್ನು ತೋರುತ್ತದೆ.
ಹತ್ತಿ ಬೇಸಾಯದ ಚಿತ್ರ
ಹತ್ತಿ ಬೇಸಾಯದ ಚಿತ್ರ

ಬೆಂಗಳೂರು: ರಾಜ್ಯ ಬರಗಾಲದಿಂದ ತತ್ತರಿಸುತ್ತಿದ್ದು, ರೈತರು ತಮ್ಮ ನಷ್ಟದಿಂದ ಕಂಗೆಡುತ್ತಿರುವಾಗ, ಹತ್ತಿ ಬೆಳೆಯುತ್ತಿರುವವರ ಮುಖದಲ್ಲಿ ಮಂದಹಾಸ ಮೂಡಿದೆ. ಬರ ಪರಿಸ್ಥಿತಿ ಹತ್ತಿ ಸಂಶೋಧನೆಗೆ ಸಹಾಯಕವಾಗಿದೆ ಎಂಬುದನ್ನು ತೋರುತ್ತದೆ.

ಭಾರತೀಯ ಕೃಷಿ ಸಂಶೋಧನಾ ಸಮಿತಿ ಮತ್ತು  ಕೇಂದ್ರೀಯ ಹತ್ತಿ ಸಂಶೋಧನಾ ಸಂಸ್ಥೆ ಸಂಶೋಧಕರು ಈ ವರ್ಷದ ಆರಂಭದಲ್ಲಿ ಯಾದಗಿರಿ ಮತ್ತು ಧಾರವಾಡದಲ್ಲಿ 175 ಹೆಕ್ಟೇರ್ ಭೂಮಿಯಲ್ಲಿ ಹೆಚ್ಚಿನ ಸಾಂದ್ರತೆಯ ಹತ್ತಿ ಬೆಳೆ ಬೆಳೆಯುವ ನಡೆಸಿದ ಪ್ರಾಯೋಗಿಕ ಅಧ್ಯಯನ ಯಶಸ್ವಿಯಾಗಿದ್ದು, ಬರಪೀಡಿತ ಪ್ರದೇಶಗಳ ರೈತರಿಗೆ ಸಹಾಯಕವಾಗಿದೆ ಎಂಬುದನ್ನು ಗುರುತಿಸಿದ್ದಾರೆ. 

ಈ ಯಶಸ್ಸಿನೊಂದಿಗೆ, ಹತ್ತಿ ಬೆಳೆಯುವ ಎಂಟು ರಾಜ್ಯಗಳಾದ ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಇದನ್ನು ಜಾರಿಗೆ ತರಲು ಸಂಶೋಧಕರು ಕೇಂದ್ರ ಸರ್ಕಾರವನ್ನು ಕೋರಿದ್ದಾರೆ. ಪ್ರಾಯೋಗಿಕ ಅಧ್ಯಯನ ವಿವರಿಸುತ್ತಾ, ದಿ ಇನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಐಸಿಎಆರ್- ಸಿಐಸಿಆರ್  ನಿರ್ದೇಶಕ ಡಾ. ವೈ. ಜಿ ಪ್ರಸಾದ್, ಸಾಮಾನ್ಯವಾಗಿ ಒಂದು ಎಕರೆಯಲ್ಲಿ ಮೂರರಿಂದ ಎಂಟು ಕ್ವಿಂಟಾಲ್ ಹತ್ತಿಯನ್ನು ಕೊಯ್ಲು ಮಾಡಬಹುದು ಎಂದು ಹೇಳಿದರು.

ಆದರೆ ಹೆಚ್ಚಿನ ಸಾಂದ್ರತೆಯ ಕೃಷಿಯೊಂದಿಗೆ, ಇಳುವರಿ ಶೇ. 37ರಿಂದ 50 ರಷ್ಟು  ಹೆಚ್ಚು ಇರುತ್ತದೆ. ಸಾಮಾನ್ಯವಾಗಿ ಒಂದು ಹೆಕ್ಟೇರ್‌ನಲ್ಲಿ 18,000 ಸಸಿಗಳನ್ನು ನೆಡಲಾಗುತ್ತದೆ, ಆದರೆ ಪ್ರಾಯೋಗಿಕ ಯೋಜನೆಯಡಿ 74,000 ಸಸಿಗಳನ್ನು ನೆಡಲಾಗಿದೆ. ಸಸಿ ವೇಗವಾಗಿ ಮತ್ತು ಜೋಡಿಸಲಾದ ರೀತಿಯಲ್ಲಿಬೆಳೆಯುತ್ತದೆ, ಆದ್ದರಿಂದ ಹತ್ತಿ ತೆಗೆಯುವುದು ಸುಲಭವಾಗಿದೆ ಎಂದರು. 

ಬರಪೀಡಿತ ಪ್ರದೇಶಗಳಲ್ಲಿ ಲಘು ಮಣ್ಣಿನಲ್ಲಿ (ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವೂ ಕಡಿಮೆ ಇರುವ ಆಳವಿಲ್ಲದ ಮಣ್ಣು) ಸಸಿಗಳನ್ನು ಬೆಳೆಸಲಾಗಿದ್ದು, ಇದು ಕೃಷಿಗೆ ಸೂಕ್ತವಾಗಿದೆ ಎಂದು ಕಂಡುಬಂದಿದೆ. ತಾತ್ತ್ವಿಕವಾಗಿ, ಹತ್ತಿ ಗಿಡವು 180 ದಿನಗಳಲ್ಲಿ ಕೊಯ್ಲಿಗೆ ಸಿದ್ಧವಾಗಲಿದೆ, ಆದರೆ ಹೊಸ ರೂಪದಲ್ಲಿ ಅದು 150 ದಿನಗಳಲ್ಲಿ ಸಿದ್ಧವಾಗಿದೆ.

ಸಸಿಗಳ ನಡುವಿನ ಅಂತರವು 19x15cm ಎಂದು ಪ್ರಸಾದ್ ಹೇಳಿದರು.ಇದು ಬಿಟಿ ಹತ್ತಿಯಲ್ಲ, ಹೊಸ ಹೈಬ್ರಿಡ್ ತಳಿ ಎಂದು ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಮುಖ್ಯಸ್ಥ ರಾಜೇಶ್ ಎಸ್ ಪಾಟೀಲ್ ಹೇಳಿದ್ದಾರೆ. ವಾಡಿಕೆ ಪದ್ಧತಿಗೆ ವಿರುದ್ಧವಾಗಿ ಈ ವರ್ಷ ಆಗಸ್ಟ್ ನಲ್ಲಿ ಕರ್ನಾಟಕದಲ್ಲಿ ಬಿತ್ತನೆ ಕಾರ್ಯ ನಡೆದಿದೆ. ಹೊಸ ಹೆಚ್ಚಿನ ಸಾಂದ್ರತೆಯ ಕೃಷಿ ರೈತರಿಗೆ ಸಹಾಯ ಮಾಡುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com