ಏರೋ ಇಂಡಿಯಾ 2023 ಹಿನ್ನೆಲೆ: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸೇವೆಯಲ್ಲಿ ವ್ಯತ್ಯಯ

'ಏರೋ ಇಂಡಿಯಾ-2023′ ವೈಮಾನಿಕ ಪ್ರದರ್ಶನ ನಡೆಯಲಿರುವ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್‌)ದ ವಿಮಾನಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: 'ಏರೋ ಇಂಡಿಯಾ-2023′ ವೈಮಾನಿಕ ಪ್ರದರ್ಶನ ನಡೆಯಲಿರುವ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್‌)ದ ವಿಮಾನಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಏರೋ ಇಂಡಿಯಾ ಶೋ ಪ್ರಯುಕ್ತ ನಡೆಸಲಾಗುವ ತಾಲೀಮು ಮತ್ತು ಪ್ರದರ್ಶನ ಫೆ. 13ರಿಂದ 17ರವರೆಗೆ ವಿವಿಧ ಅವಧಿಯಲ್ಲಿ ನಡೆಯಲಿದ್ದು, ಆ ಸಮಯದಲ್ಲಿ ಸುರಕ್ಷತೆ ದೃಷ್ಟಿಯಿಂದ ಕೆಐಎಎಲ್'ನಲ್ಲಿ ವಿಮಾನಗಳ ಹಾರಾಟದಲ್ಲಿ ವ್ಯತ್ಯಯಗಳು ಕಂಡು ಬರಲಿದೆ ಎಂದು ತಿಳಿದುಬಂದಿದೆ.

ಏರೋ ಇಂಡಿಯಾ ಶೋ ಯಶಸ್ಸಿಗೆ ಈ ಕ್ರಮಗಳು ಅನಿವಾರ್ಯವಾಗಿದೆ. ವೇಳಾಪಟ್ಟಿ ಪರಿಷ್ಕರಣೆ ಅಥವಾ ವಿಮಾನಗಳ ಸೇವೆ ರದ್ಧತಿಯು ವಿಮಾನ ನಿಲ್ದಾಣ ಮಾರ್ಗದಲ್ಲಿ ಸಂಚರಿಸುವ ಟ್ಯಾಕ್ಸಿ ಮತ್ತು ಬಸ್‌ಗಳ ಮೇಲೆ ಒತ್ತಡ ಬೀಳಲಿದೆ.

ವಿಮಾನ ನಿಲ್ದಾಣದಿಂದ ಬಿಡುಗಡೆಯಾದ ಮಾಹಿತಿಯ ಪ್ರಕಾರ, ಈ ಸಮಯದಲ್ಲಿ ವಿಮಾನಗಳು ಕಾರ್ಯನಿರ್ವಹಿಸುವುದಿಲ್ಲ:
ಫೆಬ್ರವರಿ 8 ರಿಂದ 11: ಬೆಳಿಗ್ಗೆ 9 ರಿಂದ 12 ರವರೆಗೆ ಮತ್ತು ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ
ಫೆಬ್ರವರಿ 12 ಮತ್ತು 13: ಬೆಳಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ
ಫೆಬ್ರವರಿ 14 ಮತ್ತು 15: ಮಧ್ಯಾಹ್ನ 12 ರಿಂದ 2.30 ರವರೆಗೆ
ಫೆಬ್ರವರಿ 15 ಮತ್ತು 17: ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಮಧ್ಯಾಹ್ನ 2 ರಿಂದ 5 ರವರೆಗೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com