ಇಂಧನ ಸಪ್ತಾಹಕ್ಕೆ ಪ್ರಧಾನಿ ಮೋದಿ ಚಾಲನೆ: ಅವಳಿ ಕುಕ್​ಟಾಪ್ ಸೋಲಾರ್ ಕುಕ್ಕರ್​ ಲೋಕಾರ್ಪಣೆ

ನೆಲಮಂಗಲ ಹತ್ತಿರದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ( ಬಿಐಇಸಿ)ದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾರತ ಇಂಧನ ಸಪ್ತಾಹ–2023ಕ್ಕೆ ಚಾಲನೆ ನೀಡಿದ್ದಾರೆ.
ಇಂಧನ ಸಪ್ತಾಹಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ.
ಇಂಧನ ಸಪ್ತಾಹಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ.

ಬೆಂಗಳೂರು: ನೆಲಮಂಗಲ ಹತ್ತಿರದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ( ಬಿಐಇಸಿ)ದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾರತ ಇಂಧನ ಸಪ್ತಾಹ–2023ಕ್ಕೆ ಚಾಲನೆ ನೀಡಿದ್ದಾರೆ.

ಬೆಂಗಳೂರಿನ ಎಚ್​ಎಎಲ್​​ನಿಂದ ಮಾದಾವರದಲ್ಲಿರುವ ಬಿಐಇಸಿ (ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ)ಕ್ಕೆ ಸೇನಾ ಹೆಲಿಕಾಪ್ಟರ್​ ಮೂಲಕ ಪ್ರಧಾನಿ ಮೋದಿ ಆಗಮಿಸಿದರು.

ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್​ ಸ್ವಾಗತ ಕೋರಿದರು.

ವೇದಿಕೆಗೆ ಆಗಮಿಸಿದ ಮೋದಿಯವರಿಗೆ ಇಂಡಿಯನ್ ಆಯಿಲ್​ನ ಅಧ್ಯಕ್ಷರು ತ್ಯಾಜ್ಯ ಪೆಟ್​ ಬಾಟಲಿಗಳಿಂದ ತಯಾರಿಸಿದ ಪೇಟ ಮತ್ತು ಹಾಫ್ ಕೋಟ್ ನೀಡಿದರು. ಬಳಿಕ ಪರಿಸರ ಇಂಧನದ ಹಲವು ಸಾಧ್ಯತೆಗಳನ್ನು ಬಿಂಬಿಸುವ ಸಾಕ್ಷ್ಯಚಿತ್ರವನ್ನು ಸಮಾವೇಶದಲ್ಲಿ ಪ್ರದರ್ಶಿಸಲಾಯಿತು. ಬಳಿಕ ಮೋದಿಯವರು ಅಡುಗೆಮನೆಗಳಲ್ಲಿ ಸುಲಭವಾಗಿ ಬಳಸಲು ಸಾಧ್ಯವಿರುವ ವಿಶಿಷ್ಟ ಟ್ವಿನ್ ಕುಕ್​ಟಾಪ್ ಸೋಲಾರ್ ಕುಕ್ಕರ್​ ಒಂದನ್ನು ಅನಾವರಣಗೊಳಿಸಿದರು. ಇದೇ ವೇಳೆ ಗ್ರೀನ್ ಮೊಬಿಲಿಟಿ ರ್ಯಾಲಿಗೂ ಮೋದಿಯವರು ಚಾಲನೆ ನೀಡಿದರು.

ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಫೆ.6ರಿಂದ 8ರವರೆಗೆ ಇಂಧನ ಸಪ್ತಾಹ ಆಯೋಜಿಸಲಾಗುತ್ತಿದೆ. ಭಾರತ ಇಂಧನ ಸಪ್ತಾಹದಲ್ಲಿ 30 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು, 500ಕ್ಕೂ ಹೆಚ್ಚು ಸಂಪನ್ಮೂಲ ವ್ಯಕ್ತಿಗಳು ಭಾರತದ ಇಂಧನ ಭವಿಷ್ಯ ಕುರಿತ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಚರ್ಚಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com